ನವದೆಹಲಿ:ರೈಲ್ವೆ ವಿಚಾರಕ್ಕೆ ಬಂದಾಗ ಐಆರ್​ಸಿಟಿಸಿ ಎಂಬುದು ಒಂದು ಮಹತ್ವದ ಸಂಗತಿ. ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್​ (ಐಆರ್​ಸಿಟಿಸಿ) ರೈಲ್ವೆಗೆ ಸಂಬಂಧಿತ ಟಿಕೆಟ್​​, ಕೇಟರಿಂಗ್ ಮತ್ತು ಪ್ರವಾಸ ಸೇವೆಗಳನ್ನು ಒದಗಿಸುವ ಸರ್ಕಾರಿ ಸ್ವಾಮ್ಯದ ಒಂದು ಸಂಸ್ಥೆಯಾಗಿದೆ.
ರೈಲಿನಲ್ಲಿ ಪ್ರಯಾಣ ಮಾಡುವವರು ಸಾಮಾನ್ಯವಾಗಿ ಐಆರ್​​ಸಿಟಿಸಿ ಅಂತರ್ಜಾಲ ತಾಣ ಅಥವಾ ಮೊಬೈಲ್​ಫೋನ್​ ತಂತ್ರಾಂಶವನ್ನು ಬಳಸಿಕೊಂಡು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಾರೆ. ಸಾರ್ವಜನಿಕರು ತಮ್ಮ ಹೆಸರು, ಫೋನ್​ ನಂಬರ್​, ಇಮೇಲ್ ಐಡಿ ಹಾಗೂ ಆಧಾರ್​ ಸಂಖ್ಯೆ ವಿವರ ನೀಡಿ ಈ ಸೇವೆಗಳನ್ನು ಪಡೆಯಬಹುದಾಗಿದೆ.
ಆದರೆ ಇದಕ್ಕೂ ಒಂದು ಮಿತಿ ಇದೆ. ಅಂದರೆ ಈ ಮೂಲಕ ಸಾರ್ವಜನಿಕರು ತಿಂಗಳಿಗೆ ನಿಗದಿತ ಸಂಖ್ಯೆಯ ಟಿಕೆಟ್​​ಗಳನ್ನಷ್ಟೇ ಕಾದಿರಿಸಬಹುದು. ಇದುವರೆಗೆ ಐಆರ್​ಸಿಟಿಸಿ ವೆಬ್​ಸೈಟ್ ಅಥವಾ ಆ್ಯಪ್​ ಮೂಲಕ ತಿಂಗಳಿಗೆ 12 ಟಿಕೆಟ್​ಗಳನ್ನಷ್ಟೇ ಕಾದಿರಿಸಬಹುದಿತ್ತು. ಇದು ಆಧಾರ್​ ನಂಬರ್ ಲಿಂಕ್​ ಮಾಡಿದ್ದರೆ ಮಾತ್ರ, ಲಿಂಕ್ ಮಾಡದಿರುವವರು ಮಾಸಿಕ 6 ಟಿಕೆಟ್​ಗಳನ್ನು ಕಾದಿರಿಸಬಹುದಿತ್ತು.
ಈಗ ಈ ಮಿತಿಯನ್ನು ಹೆಚ್ಚಿಸಿ ದುಪ್ಪಟ್ಟು ಮಾಡಲಾಗಿದೆ. ಅಂದರೆ ಯೂಸರ್​ ಐಡಿಗೆ ಆಧಾರ್​ ನಂಬರ್ ಲಿಂಕ್ ಮಾಡಿರುವ ಸಾರ್ವಜನಿಕರು ಐಆರ್​ಸಿಟಿಸಿ ವೆಬ್​ಸೈಟ್​ ಅಥವಾ ಆ್ಯಪ್ ಮೂಲಕ ತಿಂಗಳಿಗೆ 24 ಟಿಕೆಟ್​ಗಳನ್ನು ಮುಂಗಡವಾಗಿ ಕಾದಿರಿಸಬಹುದು. ಒಂದುವೇಳೆ ಆಧಾರ್ ನಂಬರ್ ಲಿಂಕ್​ ಮಾಡಿರದಿದ್ದರೆ ತಿಂಗಳಿಗೆ 12 ಟಿಕೆಟ್​ಗಳನ್ನು ಮುಂಗಡವಾಗಿ ಕಾದಿರಿಸಿಬಹುದು.
ಕೊಲೆ ಆರೋಪಿಯನ್ನು ಹಾಡಹಗಲೇ ಕೊಚ್ಚಿ ಕೊಂದ ಪ್ರಕರಣ; ಮೂವರು ಆರೋಪಿಗಳ ಬಂಧನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
