ನವದೆಹಲಿ:ನಾಗರಹಾವು ಎಂದರೆ ಮನುಷ್ಯರಿಗೆ ಮಾತ್ರವಲ್ಲ, ಕಾಡು ಪ್ರಾಣಿಗಳಿಗೂ ಭಯ. ನಾಗರ ಹಾವೊಂದು ಹರಿಯುವ ನೀರಿನಲ್ಲಿ ತೆರಳುತ್ತಿದ್ದು, ಎದುರಿಗೆ ಬಂದ ಹುಲಿ ಅದನ್ನು ಕಂಡು ಹಿಂದಡಿಯಿರಿಸಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ರಾಂಗ್​ರೂಟ್ ನಲ್ಲಿ ಬಂದ ಬೈಕ್ ಸವಾರ..ಸಿಪಾಯಿ ಮಾಡಿದ್ದೇನು ಗೊತ್ತಾ?
ಈ ವಿಡಿಯೋವನ್ನು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದ್ದು, ಇನ್‌ಸ್ಟಾಗ್ರಾಮ್ ಹ್ಯಾಂಡಲ್ ರಣಥಂಬೋರ್ ವೈಲ್ಡ್‌ಲೈಫ್‌ನಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಾಗರಹಾವು ಕಾಲುವೆಯ ಮೂಲಕ ಹಾದು ಹೋಗುತ್ತಿದೆ. ಅದೇ ಸಮಯಕ್ಕೆ ಹುಲಿಯೊಂದು ಅಲ್ಲಿಗೆ ಬಂರುತ್ತದೆ. ಹಾವಿಗೆ ಹೆದರಿದ ಹುಲಿ ಎರಡು ಹೆಜ್ಜೆ ಹಿಂದಕ್ಕೆ ಸರಿದು ನಿಲ್ಲುತ್ತದೆ. ಸಫಾರಿಗೆ ತೆರಳಿದ್ದವರು ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಈ ವೈರಲ್ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ವಾಮ್, ದೊಡ್ಡ ಹುಲಿ ಕೂಡ ನಾಗರಹಾವಿಗೆ ಹೆದರುತ್ತದೆ”, “ನಾಗರ ವಿಷ ತುಂಬಾ ಅಪಾಯಕಾರಿ”, `ಒಂದು ನಾಗರಹಾವು ದೊಡ್ಡ ಆನೆಯನ್ನೂ ಸೆಕೆಂಡ್‌ಗಳಲ್ಲಿ ಕೊಲ್ಲಬಲ್ಲದು”, “ಹೋರಾಟ ನಡೆದರೆ ಎರಡೂ ಸಾಯುತ್ತವೆ”, “ಹುಲಿ ತುಂಬಾ ಬುದ್ಧಿವಂತ” ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ.
ಟೆಲಿಗ್ರಾಮ್ ಸಿಇಒ ಪಾವೆಲ್ ಬಂಧನಕ್ಕೆ ಮಸ್ಕ್ ವಿರೋಧ: ‘ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ’ ಎಂದು ಖಂಡನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seventeen =
Remember me
