ನವದೆಹಲಿ:ಅರಣ್ಯಾಧಿಕಾರಿ (ಐಎಫ್​ಎಸ್​) ಪರ್ವೀನ್​ ಕಸ್ವಾನ್​ ಅವರು ಟ್ವೀಟರ್​ನಲ್ಲಿ ಹಂಚಿಕೊಳ್ಳುವ ಅದ್ಭುತ ಚಿತ್ರಗಳು ಸಾವಿರ ಮಾತುಗಳನ್ನು ಹೇಳುತ್ತವೆ.
ಈಗ ಅಂತಹುದ್ದೇ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಗಮನ ಸೆಳೆಯುತ್ತಿದೆ. ಇದಕ್ಕೆ 2.2 ಸಾವಿರ ಮಂದಿಕ್ಕೂ ಹೆಚ್ಚು ಲೈಕ್​ ಮಾಡಿದ್ದು ನೂರಾರು ಮಂದಿ ರೀಟ್ವೀಟ್​ ಮಾಡಿದ್ದಾರೆ. ಇದಕ್ಕೆ ನಟಿ ಪೂಜಾ ಭಟ್​ ನೀಡಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಪರ್ವೀನ್​ ಕಸ್ವಾನ್​ ಅವರು ಹಂಚಿಕೊಂಡ ಚಿತ್ರದಲ್ಲಿ ದಟ್ಟ ಕಾಡಿನ ನಡುವೆ ಒಂದು ದಾರಿ. ಅಲ್ಲಿ ಎಡ ಮತ್ತು ಬಲಕ್ಕೆ ಒಂದು ಲಾರಿ ಮತ್ತೊಂದು ಬುಲ್ಡೋಜರ್​ ನಿಂತಿದೆ. ನಡುವೆ ಹುಲಿಯೊಂದು ಮಲಗಿದೆ!
ಅದಕ್ಕೆ ಪರ್ವೀನ್​ ಕಸ್ವಾನ್​ “ಈ ಸ್ಥಳ ಯಾರಿಗೆ ಸಂಬಂಧ ಪಟ್ಟಿದ್ದು. ಒಂದು ಫೋಟೋ ಮಾತಿಗಳಿಗಿಂತ ಹೆಚ್ಚಿನದ್ದೇನೋ ಹೇಳುತ್ತದೆ. ಯಾರೋ ಗೊತ್ತಿಲ್ಲದವರಿಂದ ಇದೊಂದು ಪ್ರಬಲವಾದ ಚಿತ್ರ” ಎಂದು ಬರೆದುಕೊಂಡಿದ್ದಾರೆ. #TigerLand ಎಂದು ಹ್ಯಾಷ್​ಟ್ಯಾಗ್​ ಹಾಕಿದ್ದಾರೆ.
ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್​ ಇದನ್ನು ರೀಟ್ವೀಟ್​ ಮಾಡಿ “ಪ್ರಾಣಿಯ ಕಣ್ಣುಗಳ ಮೂಲಕ ನೋಡಿದಾಗ ಬುಲ್ಡೋಜರ್ ಎಷ್ಟು ಭಯಾನಕ ಎಂಬ ಬಗ್ಗೆ ಯೋಚಿಸಿದ್ದೀರಾ? ಈ ಚಿತ್ರವು ಅಂತಿಮವಾಗಿ ಮನುಷ್ಯನು ಪ್ರಗತಿಯ ಹೆಸರಿನಲ್ಲಿ ವಿನಾಶದ ಹಾದಿ ತುಳಿಯುವದನ್ನು ಸೂಚಿಸುತ್ತದೆ” ಎಂದಿದ್ದಾರೆ.
ಪರ್ವೀನ್​ ಕಸ್ವಾನ್​ ಅವರ ಈ ಪೋಟೋಗೆ ಪ್ರತಿಕ್ರಿಯಿಸಿರುವ ಅದೆಷ್ಟೋ ಮಂದಿ ಇಂತಹದ್ದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಕೆಲ ಚಿತ್ರಗಳು ಇಲ್ಲಿವೆ.(ಏಜೆನ್ಸೀಸ್​)
Have often wondered how terrifying a Bulldozer must seem when viewed through the eyes of an animal whose home gets plundered.This image is a reminder that eventually man only leaves behind a trail of devastation in the name of progress. 🙏https://t.co/K8lIH3Q9Wi
— Pooja Bhatt (@PoojaB1972)March 5, 2020

“Being a Red Squirrel is thirsty work!!” Barhill ❤️@RSPBScotland@NatureUK@WWFScotland@Natures_Voice@BTO_GBW@wildlife_birds@RSPBScotland@WildlifeMag#nature#photography#TwitterNatureCommunitypic.twitter.com/Nyg50EKlY6
— Gary Black 🇺🇦 (@GaryBlack1970)March 4, 2020

A juvenile Eastern Cattle Egret getting ready to face the day. 07:00hrs @SuanRotFai, Bangkok.@Avibasehttps://t.co/0k0Hgj3Rvdpic.twitter.com/czG1l8jBnw
— Greg Heath (@HeatThailand)March 4, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + four =
Remember me
