ಪಥನಂತಿಟ್ಟ:ಸ್ವಲ್ಪ ದಿನಗಳ ಹಿಂದೆ ಮಾನವನನ್ನು ಹಿಡಿದು, ಕೊಂದ ಹೆಣ್ಣು ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಹುಲಿಯ ಮೃತದೇಹ ಕೇರಳದ ಪಥನಂತಿಟ್ಟ ಜಿಲ್ಲೆಯ ಮಣಿಯಾರ್​ನಲ್ಲಿನ ಒಂದು ಕೃಷಿಭೂಮಿ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.
ಕಾಡಿಗೆ ಹೊಂದಿಕೊಂಡಿರುವ ಈ ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನಿಗೆ ಹೊಳೆಯಲ್ಲಿ ಹುಲಿ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಸ್ಥಳೀಯರು ಚಿತ್ತಾರ್​ನಲ್ಲಿರುವ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿ, ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ:ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…
ಈ ಹೆಣ್ಣು ಹುಲಿಯ ಬಲಗಾಲಿನ ಮೇಲೆ ತೀವ್ರವಾದ ಗಾಯವಾಗಿದೆ. ಅಲ್ಲದೆ, ತುಂಬ ಸಣಕಲಾಗಿತ್ತು. ಈ ಪ್ರಾಣಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿತ್ತು, ಉಸಿರಾಟದ ಸಮಸ್ಯೆಯುಂಟಾಗಿತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೂ ಕೆಲವು ಅನುಮಾನಗಳು ಕಾಡುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹುಲಿಯ ಮೃತದೇಹದ ಮಾದರಿಗಳನ್ನು ತಪಾಸಣೆಗಾಗಿ ಲ್ಯಾಬ್​ಗೆ ಕಳಿಸಲಾಗಿದೆ.
ಮೇ ತಿಂಗಳಲ್ಲಿ ಇಡುಕ್ಕಿ ನಿವಾಸಿಯಾದ ರಬ್ಬರ್​ ಟ್ಯಾಪಿಂಗ್​ ಗುತ್ತಿಗೆದಾರನೋರ್ವ ಥನ್ನಿಥೋಡುನಲ್ಲಿರುವ ಮೇದಪ್ಪರಾ ಪ್ಲಾಂಟೇಶನ್​​ನಲ್ಲಿ ಹುಲಿಗೆ ಬಲಿಯಾಗಿದ್ದ. ಅಂದು ಆತನನ್ನು ಹಿಡಿದು ಕೊಂದ ಹುಲಿ ಇದೇ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ:ತಮಿಳುನಾಡಿಗೆ ನೀರು ಬೀಡಲು ಕಾವೇರಿ ಪ್ರಾಧಿಕಾರ ಆದೇಶ: ಮೇಕೆದಾಟು ಯೋಜನೆ ಪ್ರಸ್ತಾವನೆಗೂ ತಡೆ
ಕೇರಳದಲ್ಲಿ ಇತ್ತೀಚೆಗೆ ಗರ್ಭಿಣಿ ಆನೆಯೊಂದು ಯಾರೋ ಕೊಟ್ಟಿದ್ದ ಸ್ಫೋಟಕ ತುಂಬಿದ ಪೈನಾಪಲ್​ ತಿಂದು ಮೃತಪಟ್ಟಿತ್ತು. ಈ ಕೃತ್ಯಕ್ಕೆ ದೇಶದೆಲ್ಲೆಡೆಯಿಂದ ವಿರೋಧ ವ್ಯಕ್ತವಾಗಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
