ಬೆಂಗಳೂರು:ಹುಲಿಯೊಂದು ಹಸುವನ್ನು ಬೇಟೆಯಾಡಿ ಬಾಯಿ ಮೂಲಕವೇ ಎಳೆದೊಯ್ಯುತ್ತಿರುವ ಅಪರೂಪದ ದೃಶ್ಯ ವೈರಲ್​ ಆಗಿದೆ.
ತನಗಿಂತಲೂ ತೂಕ ಹೆಚ್ಚಿರುವ ಹಸುವನ್ನು ಬೇಟೆಯಾಡಿದ ಹುಲಿರಾಯ, ಅದನ್ನು ತನ್ನ ಬಾಯಿಯಲ್ಲೇ ಕಚ್ಚಿಕೊಂಡು ಎಳೆದೊಯ್ಯುತ್ತಿದೆ. ಅಬ್ಬಾ! ಹುಲಿಯ ಆ ಶಕ್ತಿಯನ್ನು ಕಂಡ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಬಹುತೇಕರು ಹಸುವಿನ ಬಗ್ಗೆಯೂ ಮರುಕ ವ್ಯಕ್ತಪಡಿಸಿದ್ದಾರೆ. ಆದರಿದು ಆಹಾರ ಸರಪಣಿ ಎಂದೂ ಕೆಲವರು ಹೇಳಿದ್ದಾರೆ.
ಇದನ್ನೂ ಓದಿರಿನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ ‘ಗಂಡ-ಹೆಂಡ್ತಿ’ ರಹಸ್ಯ ಬಯಲು?!
ಅದ್ಹೇನೆ ಇರಲಿ ಹಸು ಮೇಲೆ ಹುಲಿ ದಾಳಿ, ಹಸುವಿನ ಕರುವನ್ನು ತಿಂದು ಹಾಕಿದ ಹುಲಿ… ಎಂಬೆಲ್ಲ ಸುದ್ದಿಯನ್ನು ಕೇಳುತ್ತಿದ್ದ ಜನರು ಇದೀಗ ಹಸುವನ್ನು ಹುಲಿ ಹೊತ್ತೊಯ್ಯುತ್ತಿರುವ ದೃಶ್ಯ ಕಂಡು ಬೆರಗಾಗಿದ್ದಾರೆ.
ಈ ಘಟನೆ ಕೇಂದ್ರ ಭಾರತೀಯ ಹುಲಿ ಮೀಸಲು ಪ್ರದೇಶದಲ್ಲಿ ಸಂಭವಿಸಿದೆ. ಹಸುವನ್ನು ಹುಲಿ ಎಳೆದೊಯ್ಯುತ್ತಿರುವ 14 ಸೆಕೆಂಡ್​ಗಳ​ ವಿಡಿಯೋ ತುಣುಕನ್ನು ಐಎಫ್​ಎಸ್​ ಅಧಿಕಾರಿ ಸುಸಂತ ನಂದ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸೂರ್ಯ ಕೇಸರಿ ಎಂಬುವವರು ಶೇರ್​ ಮಾಡಿದ್ದ ಈ ವಿಡಿಯೋವನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಅಪ್ಲೋಡ್​ ಮಾಡಿಕೊಂಡಿರುವ ಸುಸಂತ ನಂದ ಅವರು, ಹುಲಿಯ ಶಕ್ತಿ ವಿಸ್ಮಯಕಾರಿ ಎಂದಿದ್ದಾರೆ.
The strength of the tiger is awe inspiring. It drags a cow through the sheer power of its mouth. Not without the reason that it’s the king….From a central Indian Tiger Reserve.
A rare footage shared by Surya Keshari👍pic.twitter.com/qohUm1ubeu
— Susanta Nanda (@susantananda3)September 10, 2020

video/ ಕೋಳಿ ಶೆಡ್​ಗೆ ಒಳಹೊಕ್ಕ ಪೊಲೀಸರೇ ದಂಗಾದ್ರು… 1,352 ಕೆಜಿ ಗಾಂಜಾ ರಹಸ್ಯ ಇಲ್ಲಿದೆ

Sign in to your account
Please enter an answer in digits:2 − two =
Remember me
