ರಾಜಸ್ಥಾನ:ಬೇಟೆಗಾರನೇ ಬೇಟೆಯಾದಾಗ… ಈ ರೀತಿಯ ಮಾತು ಕೇಳಿಬರುವುದು ಬಹಳ ಅಪರೂಪ. ಥ್ರಿಲ್ಲರ್​ ಸಿನಿಮಾಗಳಲ್ಲಿ ಕೇಳಿ ಬರುವ ಡೈಲಾಗ್​, ಅರಣ್ಯದಲ್ಲಿ ನಿಜವಾದರೆ ಹೇಗಿರಬಹುದು? ಹೌದು! ಚಿರತೆಯಂತಹ ಉತ್ತಮ ಬೇಟೆಗಾರ ಪ್ರಾಣಿಯನ್ನು ಹುಲಿಯೊಂದು ತಿನ್ನುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಈ ಬಗ್ಗೆ ಐಎಫ್​ಎಸ್​ ಅಧಿಕಾರಿಯೊಬ್ಬರು ಫೋಟೊಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್, ಶನಿವಾರ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಚಿರತೆಯನ್ನು ತಿನ್ನುತ್ತಿರುವ ಚಿತ್ರವನ್ನು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ ಚಿರತೆ ಮತ್ತು ಗಂಡು ಹುಲಿ T-101 ನಡುವೆ ಸೆಣೆಸಾಟ ನಡೆದಿತ್ತು. ಅದರಲ್ಲಿ ಹುಲಿ ಗೆಲುವಿನ ನಗೆ ಬೀರಿದೆ. ಅಧಿಕಾರಿ ಈ ಫೋಟೊಗಳನ್ನು ಪೋಸ್ಟ್ ಮಾಡಿದ ನಂತರ ಟ್ವೀಟ್ ವೈರಲ್ ಆಗಿದೆ.
ಕಾಮೆಂಟ್​ ವಿಭಾಗದಲ್ಲಿ ಒಬ್ಬರು ಪ್ರಾಣಿಗಳ ಈ ರೀತಿಯ ನಡವಳಿಕೆ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಬರೆದುಕೊಂಡಿದ್ದರು. ಇನ್ನೊಬ್ಬರು ಹೆಚ್ಚಿನ ಪ್ರಾಣಿಗಳನ್ನು ಬೇಟೆ ಆಡುವುದಕ್ಕಾಗಿ ಕಾಂಪಿಟೇಶನ್​ ಅನ್ನೇ ಈ ಹುಲಿ ಮುಗಿಸಿದೆ ಎಂದು ಬರೆದಿದ್ದಾರೆ.
Wild wild world. The tiger name is T 101 of Ranthambore.@HJunglebookrecently captured it and want everyone to witness it.pic.twitter.com/dAT7WNvxtv
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
