ಲಖನೌ:ಕಾಡು ಪ್ರಾಣಿಗಳು ಆಹಾರ ಅರಸಿ ಆಗಿಂದಾಗೆ ಕಾಡಿನಿಂದ ನಾಡಿನತ್ತ ಬರುವುದನ್ನು ನೋಡಿದ್ದೇವೆ. ಇದೀಗ ಅಂತಹದೆ ಒಂದು ಪ್ರಕರಣದಲ್ಲಿ ಹುಲಿಯೊಂದು ಹೊಲದಲ್ಲಿ ತಿರುಗಾಡುತ್ತಿದ್ದ ವೇಳೆ ರೈತನೋರ್ವ ಅದರ ಅರಿವಿಲ್ಲದೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿರುವ ಘಟನೆ ಉತ್ತರಪ್ರದೇಶದ ಫಿಲಿಬಿತ್​ ಜಿಲ್ಲೆಯಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ರಾಜ್​ ಲಖಾನಿ ಎಂಬುವವರು ಹಂಚಿಕೊಂಡಿದ್ದು, ಭತ್ತದ ಗದ್ದೆಯಲ್ಲಿ ಹುಲಿ ಸುತ್ತಾಡುತ್ತಿರುವುದು ಕಂಡು ಬರುತ್ತದೆ. ಅದರ ಹಿನ್ನಲೆಯಲ್ಲಿ ರೈತ ತನ್ನ ಪಾಡಿಗೆ ತಾನು ಟ್ರ್ಯಾಕ್ಟರ್​ನಲ್ಲಿ ಉಳುಮೆ ಮಾಡುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಟ್ವಿಟರ್​ನಲ್ಲಿ ಈಗಾಗಲೇ ವಿಡಿಯೋವನ್ನು ಮಿಲಿಯನ್​ಗಟ್ಟಲ್ಲೇ ಜನ ವೀಕ್ಷಿಸಿದ್ದು, ಕಾಯಕವೇ ಕೈಲಾಸ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧ ಅಸ್ತಿತ್ವದಲ್ಲಿದೆ ಎಂದು ಬಣ್ಣಿಸಿದ್ದಾರೆ. ನಗಬೇಕೋ ಅಳಬೇಕೋ ಎಂದು ತಿಳಿದಿಲ್ಲ ಇದು ಸಹಬಾಳ್ವೆಯ ಸ್ಪಷ್ಟ ಪ್ರಯತ್ನವನ್ನು ತೋರಿಸುತ್ತದೆ. ಹುಲಿಗೆ ಯಾವುದೇ ಬೇಟೆ ಸಿಗದಿದ್ದಲ್ಲಿ ಈ ರೀತಿ ಹುಲ್ಲು ತಿನ್ನಲು ಬರುತ್ತದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.
ಇದನ್ನೂ ಓದಿ:ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲು; ಅಧಿಕಾರಿಗಳ ಸಮ್ಮುಖದಲ್ಲೇ ಜೀವಬೆದರಿಕೆ ಹಾಕಿದ ಕಾಳಧನಿಕರು
This is Pilibhit, UPA tiger roaming in the field & in the background farmer plowing the field.Video shot by another farmer.pic.twitter.com/LXjOv1HVho

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
