ಡೆಹ್ರಡೂನ್(ಉತ್ತರಾಖಂಡ):ರಾಜ್ಯದ ತೆಹ್ರಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ನರರಕ್ತ ದಾಹಿ ಹುಲಿಯನ್ನು ಅರಣ್ಯಾಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದರ ವೀಡಿಯೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗಿದೆ.
ಇದನ್ನೂ ಓದಿ:ರೀಲ್ಸ್​ ಮಾಡ್ತೀರಾ.. ಎಚ್ಚರ: ‘ಜಮಾಲ್ ಕುಡು’ಗೆ ಮದ್ಯ ಬಾಟಲಿ ಹೊತ್ತು ನೃತ್ಯ ಮಾಡಿದವನಿಗೆ ಬಿತ್ತು ಬೇಡಿ..!
ತೆಹ್ರಿ ಜಿಲ್ಲೆಯ ಮಲೆತಾ ಗ್ರಾಮದಲ್ಲಿ ಹುಲಿ ಪದೇ ಪದೆ ಜನರ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಆ ಪ್ರದೇಶದ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೇವಪ್ರಯಾಗದ ಶಾಸಕ ವಿನೋದ್ ಕಂದಾರಿ ಸಹ ಹುಲಿಯನ್ನು ಸೆರೆ ಹಿಡಿಯುವುದು ಅಥವಾ ಕೊಲ್ಲುವ ಮೂಲಕ ಜನರನ್ನು ಹುಲಿಭೀತಿಯಿಂದ ಮುಕ್ತಗೊಳಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಜನರು ಮತ್ತು ಶಾಸಕರ ದೂರಿನ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಇದಕ್ಕೆಂದು ತಂಡವನ್ನು ರಚಿಸಿ ಅರಣ್ಯದಲ್ಲಿ ಹುಲಿ ಇರುವ ಸ್ಥಳ ಪತ್ತೆಹಚ್ಚಲು ಮುಂದಾದರು. ಇದು ಫಲ ನೀಡದಿದ್ದಾಗ ಡ್ರೋನ್ ಮೂಲಕ ಹುಲಿ ಇರುವ ಜಾಗವನ್ನು ಗುರುತಿಸಿದರು.
देखिए टाइगर को ढेर करने का लाइव वीडियो,दहशत बने टाइगर को आज घेराबंदी करके ढेर कर दिया। मामला टिहरी जनपद के मलेथा गाँव का है, पिछले दो दिन में दस लोगो को घायल कर चुके इस गुलदार की घेराबंदी के लिए ड्रोन का प्रयोग किया गया।वन विभाग के इस पूरे ऑपरेशन में देवप्रयाग के विधायक विनोद…pic.twitter.com/cUNJkgjqQj
— Ajit Singh Rathi (@AjitSinghRathi)February 23, 2024

ಬಳಿಕ ಹುಲಿ ಬೇಟೆಗೆ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 10-15 ಸಿಬ್ಬಂದಿ ಕಾಡಿನಲ್ಲಿ ಹುಲಿ ಕೊಲ್ಲುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹುಲಿ ಕಾಣಿಸಿದ ಕೂಡಲೇ ಬಂದೂಕುಗಳನ್ನು ಹೊತ್ತು ಅದರತ್ತ ನುಗ್ಗಿದರು. ಅರಣ್ಯ ಸಿಬ್ಬಂದಿ ಹುಲಿಯತ್ತ ಓಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ ನಂತರ ಹುಲಿ ಕುಸಿದು ಬಿದ್ದಿರುವುದು ಸಹ ವೀಡಿಯೊದಲ್ಲಿ ಕಾಣಬಹುದಾಗಿದೆ.
ಹುಲಿಯನ್ನು ಕೊಂದಿದ್ದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ದೇವಪ್ರಯಾಗ ಶಾಸಕ ವಿನೋದ್ ಕಂದಾರಿ ಹುಲಿ ಕೊಲ್ಲುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇನ್ನು ಹುಲಿಯನ್ನು ಕೊಲ್ಲುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಸಿಬ್ಬಂದಿಗೆ ಅವರು ತಲಾ 11,000 ರೂ. ಬಹುಮಾನ ಘೋಷಿಸಿದ್ದಾರೆ.
ಕಿಕ್ಕೇರಿಸಿಕೊಂಡಿದ್ದ ಪಾಕ್​ ಪ್ರಯಾಣಿಕ ವಿಮಾನದಲ್ಲಿ ಕಿರಿಕ್​..ಕೈಕೋಳ ಹಾಕಿ ನಿಯಂತ್ರಿಸಿದ ಎಮಿರೇಟ್ಸ್ ಸಿಬ್ಬಂದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
