ನವದೆಹಲಿ:ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಸ್ವತಃ ಅಮರ್​ಸಿಂಗ್​ ಅವರೇ “ನಾನಿನ್ನು ಬುದುಕಿದ್ದೇನೆ” ಎಂದು ಟ್ವೀಟ್​ ಮಾಡಿದ್ದಾರೆ.
“ನಾನು ಸಿಂಗಾಪುರದಲ್ಲಿದ್ದು, ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಚಿಕಿತ್ಸೆಯ ರಿವಾಜುಗಳನ್ನೆಲ್ಲ ಮುಗಿಸಿ ಭಾರತಕ್ಕೆ ವಾಪಸ್​ ಆಗುತ್ತೇನೆ” ಎಂದು ವಿಡಿಯೋ ಮಾಡಿ ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ “ಟೈಗರ್​ ಜಿಂದಾ ಹೈ” ಎಂಬ ಶೀರ್ಷಿಕೆ ನೀಡಲಾಗಿದ್ದು ನನ್ನ ಹಿತೈಷಿಗಳಿಗೆ ಮತ್ತು ನಾನು ಸಾಯ ಬಯಸುವವರಿಗೆ ತಿಳಿಸುವುದೇನೆಂದರೆ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಹಿಂದಿರುಗುತ್ತೇನೆ ಎಂದಿದ್ದಾರೆ.
64 ವರ್ಷದ ಅಮರ್​ ಸಿಂಗ್​ ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿದ ಮರು ದಿನ ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
“ನನ್ನ ಕೆಲ ಸ್ನೇಹಿತರು ನಾನು ಯಮರಾಜನ ಬಳಿ ಹೋಗಿದ್ದೇನೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಅದು ಸುಳ್ಳು. ನನ್ನಲ್ಲಿ ಇನ್ನೂ ಧೈರ್ಯ, ಉತ್ಸಾಹಗಳಿವೆ. ನನ್ನ ಚಿಕಿತ್ಸೆ ಮುಗಿದ ನಂತರ ಭವಾನಿದೇವಿಯ ಆಶೀರ್ವಾದದಿಂದ ಡಬಲ್​ ಉತ್ಸಾಹದಲ್ಲಿ ವಾಪಸ್​ ಬರುತ್ತೇನೆ” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.(ಏಜೆನ್ಸೀಸ್​)
Tiger Zinda Hai!!pic.twitter.com/YWm3Sb0Yuw
— Amar Singh (@AmarSinghTweets)March 2, 2020

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen − 9 =
Remember me
