ಅಯೋಧ್ಯೆ:ಇಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾ ಸಮಾರಂಭಕ್ಕೆ ಇದೀಗ ಅಂತಿಮ ಕ್ಷಣಗಣನೆ ಆರಂಭಗೊಂಡಿದ್ದು, ರಾಮ ಸಂಭ್ರಮಕ್ಕೆ ಜೈಶ್ರೀರಾಮ್ ಎಂಬ ಘೋಷಣೆ ಮೂಲಕ ದೇವಾಲಯವನ್ನು ಪ್ರವೇಶಿಸುತ್ತಿರುವ ಭಕ್ತಾಧಿಗಳು, ಬೆಳ್ಳಂಬೆಳಗ್ಗೆಯೇ ದೇಗುಲದ ಮುಂದೆ ಭಕ್ತಿ ಪೂರ್ವಕ ನಮನ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಪ್ರಿಯಕರನ ಜತೆ ತಾಯಿ ಪರಾರಿ, ಸಾಲಗಾರರ ಕಾಟ ತಾಳದೆ ಊರು ಬಿಟ್ಟ ತಂದೆ: ತಬ್ಬಲಿ ಕಂದಮ್ಮಗಳಿಗೆ ಕಣ್ಣು ಕಾಣದ ವೃದ್ಧನೇ ಆಸರೆ!
ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ದೇವಾಲಯದ ಟ್ರಸ್ಟ್​ ಹಾಗೂ ಉತ್ತರಪದೇಶ ಸರ್ಕಾರ, ರಾಮಲಲ್ಲಾ ದರ್ಶನ ಪಡೆಯಲು ದೇಶದ ನಾನಾ ಭಾಗಗಳಿಂದ ಬರುತ್ತಿರುವ ಭಕ್ತರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಭಕ್ತರ ಪ್ರವೇಶಕ್ಕೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದೆ. ದೇಗುಲದೊಳಗೆ ಬರುವ ಪ್ರತಿ ಭಕ್ತರು ತಾವು ಪಡೆದಿರುವ ಪಾಸ್​ ಅನ್ನು ಮುಖ್ಯದ್ವಾರದಲ್ಲಿ ಪ್ರದರ್ಶಿಸಬೇಕು ಎಂಬುದು ಮೂಲ ನಿಯಮ.
ಪಾಸ್​ನಲ್ಲಿರುವ ಕ್ಯೂಆರ್​ ಕೋಡ್​ ಸ್ಕ್ಯಾನ್ ಆದ ಬಳಿಕ ದೇವಾಲಯದ ಒಳಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಪ್ರಾಣ ಪ್ರತಿಷ್ಠೆಯ ಸಮಾರಂಭದ ಬೆನ್ನಲ್ಲೇ ಅಯೋಧ್ಯೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಹನುಮಾನ್​ ಘಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ,(ಏಜೆನ್ಸೀಸ್).
ಕೊಳಕು ಶೌಚಾಲಯ ಎಂದು ದೂರಿದ ಪ್ರಯಾಣಿಕ! ದಂಡವಾಗಿ ಭಾರತೀಯ ರೈಲ್ವೆ ಪಾವತಿಸಿದ ಹಣವೆಷ್ಟು ಗೊತ್ತೇ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 3 =
Remember me
