ನವದೆಹಲಿ:ಬುಧವಾರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸರ್ಪಗಾವಲು ಹಾಕಲಾಗಿದೆ. ನವೀಕೃತ ರಾಜಪಥದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುಖಚಹರೆಯ ಗುರುತು (ಫೇಸ್ ರೆಕಗ್ನಿಷನ್) ವ್ಯವಸ್ಥೆಯನ್ನು ಆರು ಪ್ರವೇಶ ಪಾಯಿಂಟ್, 16 ಬ್ರಿಡ್ಜ್​ಗಳು ಸೇರಿದಂತೆ 30 ಕಡೆ ಅಳವಡಿಸಲಾಗಿದೆ. ಶಂಕಿತರು ಇದರ ಸಮೀಪ ಸುಳಿದಾಡಿದರೆ ತಕ್ಷಣ ಕೆಂಪು ದೀಪದ ಸೂಚನೆ ದೊರೆಯುತ್ತದೆ. ಇದರ ಹೊರತಾಗಿ ಚಲನವಲನದ ಮೇಲೆ ನಿಗಾಇರಿಸಲು 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 30 ಸಾವಿರ ಪೊಲೀಸರು, ಅರೆಸೇನಾಪಡೆಯ 65 ಕಂಪನಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇವರಲ್ಲಿ 71 ಡಿಸಿಪಿ, 213 ಎಸಿಪಿ, 753 ಇನ್​ಸ್ಪೆಕ್ಟರ್​ಗಳು ಇರಲಿದ್ದಾರೆ. ಡ್ರೋನ್ ಹಾರಾಟ ಪ್ರತಿಬಂಧಿಸುವ ಏರ್ ಸ್ಪೇಸ್ ಮಾನಿಟರ್ ಸಹಿತ ಉಗ್ರರ ನಿಗ್ರಹಕ್ಕೆ ಸೂಚಿತವಾದ 26 ಮಾನದಂಡಗಳನ್ನು ಭದ್ರತೆಯಲ್ಲಿ ಅನುಸರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ 5ರಿಂದ 8 ಸಾವಿರ ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪ್ರವೇಶ ಇರುವುದಿಲ್ಲ. ಮೊದಲು 24 ಸಾವಿರ ಜನರಿಗೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೆ, ಒಮಿಕ್ರಾನ್ ಪ್ರಭೇದದ ನಂತರ ಸೋಂಕು ಹೆಚ್ಚಾದ ಕಾರಣ ಸಂಖ್ಯೆಯನ್ನು ಮಿತಗೊಳಿಸಲಾಗಿದೆ. 2021ರಲ್ಲಿ 25 ಸಾವಿರ ಜನರಿಗೆ ಭೌತಿಕವಾಗಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು.
20ಕ್ಕೂ ಹೆಚ್ಚು ಸ್ತಬ್ಧಚಿತ್ರ:ಈ ವರ್ಷ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, 9 ಸಚಿವಾಲಯ ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳು ಪರೇಡ್​ನಲ್ಲಿ ಭಾಗವಹಿಸಲಿವೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡುಗಳ ಟ್ಯಾಬ್ಲೊಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ವಿವಾದ ಉಂಟಾಗಿದೆ. ಜ.29ರಂದು ನಡೆಯುವ ಬೀಟಿಂಗ್ ರಿಟ್ರಿಟ್ ಕಾರ್ಯಕ್ರಮದಲ್ಲಿ ‘ಅಬೈಡ್ ವಿತ್ ಮಿ’ ಗೀತೆಯ ಬದಲಿಗೆ ‘ಏ ಮೇರೆ ವತನ್ ಕೇ ಲೋಗೋ’ ದೇಶಭಕ್ತಿ ಗೀತೆಯನ್ನು ನುಡಿಸಲಾಗುತ್ತದೆ. ಡ್ರೋನ್ ಪ್ರದರ್ಶನ ವಿಶೇಷವಾಗಿ ಇರಲಿದೆ.
ವಿದೇಶಿ ಮುಖ್ಯ ಅತಿಥಿ ಇಲ್ಲ:ಕರೊನಾ ಕಾರಣ ಈ ವರ್ಷ ಕೂಡ ವಿದೇಶದ ಗಣ್ಯ ವ್ಯಕ್ತಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿಲ್ಲ. 2021ರಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ಗೆ ಆಹ್ವಾನ ನೀಡಲಾಗಿತ್ತು. ಅವರೂ ಒಪ್ಪಿದ್ದರು. ಆದರೆ, ಕೋವಿಡ್ ಸೋಂಕು ಹೆಚ್ಚಾದ ಕಾರಣ ಭೇಟಿಯನ್ನು ರದ್ದುಮಾಡಿದರು. 2020ರಲ್ಲಿ ಕಝಾಕಸ್ತಾನ್, ರ್ಕಿಗಿಸ್ತಾನ್, ತಜಕಿಸ್ತಾನ್, ತುರ್ಕಮೇನಿಸ್ತಾನ್, ಉಜ್ಬೇಕಿಸ್ತಾನ್​ಗಳ ನಾಯಕರು ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗಿಯಾಗಿದ್ದರು.
ಸತ್ತ 8 ತಿಂಗಳ ಬಳಿಕ ಎರಡನೇ ಡೋಸ್​ ಲಸಿಕೆ!?: ಪಾಲಿಕೆ ಆರೋಗ್ಯ ಸಿಬ್ಬಂದಿ ಎಡವಟ್ಟು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
