ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾ. 20ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಲಿದ್ದು, ಇದಕ್ಕೂ ಮೂರು ದಿನ ಮೊದಲೇ ಹಾಜರಾಗುವಂತೆ ನೇಣುಕುಣಿಕೆ ಬಿಗಿಯಲಿರುವ ಹ್ಯಾಂಗ್​ವ್ಯಾನ್ ಪವನ್ ಜಲ್ಲಾದ್​ಗೆ ತಿಹಾರ್ ಸೆರೆಮನೆ ಅಧಿಕಾರಿಗಳು ಸೂಚಿಸಿದ್ದಾರೆ.
ನಾಲ್ಕನೇ ಡೆತ್ ವಾರಂಟ್ ಹೊರಡಿಸಿದ ನಂತರ ತಿಹಾರ್ ಜೈಲಧಿಕಾರಿಗಳು ಮೇರಠ್​ನ ಹ್ಯಾಂಗ್​ವ್ಯಾನ್ ಪವನ್ ಜಲ್ಲಾದ್​ನ ಸೇವೆ ಒದಗಿಸುವಂತೆ ಕೋರಿದ್ದಾರೆ. ಮಾ. 17ರಂದು ಜಲ್ಲಾದ್ ಆಗಮಿಸಿದ ನಂತರ ಮತ್ತೊಮ್ಮೆ ನೇಣಿಗೇರಿಸುವ ಡಮ್ಮಿ ತಾಲೀಮು ನಡೆಯಲಿದೆ.
ದೆಹಲಿಯ ವಿಚಾರಣಾ ನ್ಯಾಯಾಲಯ ಮಾರ್ಚ್ 5ರಂದು ಹೊರಡಿಸಿರುವ ಹೊಸ ಡೆತ್ ವಾರಂಟ್ ಪ್ರಕಾರ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್​ರನ್ನು (31) ಮಾರ್ಚ್ 20ರ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
