ಅಮೃತಸರ(ಪಂಜಾಬ್​):ಪಂಚ ನದಿಗಳ ನಾಡು ಪಂಜಾಬ್​ನ ಅಮೃತಸರದ ಚಿನ್ನದ ದೇವಾಲಯ (ಗೋಲ್ಡನ್​ ಟೆಂಪಲ್​) ಆವರಣದಲ್ಲಿ ಟಿಕ್​ಟಾಕ್​ ವಿಡಿಯೋ ಮಾಡುವುದು ಅಥವಾ ಸೆಲ್ಫಿ ಕ್ಲಿಕ್ಕಿಸುವುದನ್ನು ನಿಷೇಧಿಸಲಾಗಿದೆ.
ಕೆಲವು ಪ್ರವಾಸಿಗರು ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​ ಮಾಡಿದ ಬೆನ್ನಲ್ಲೇ ದೇವಸ್ಥಾನ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಗೋಲ್ಡನ್​ ಟೆಂಪಲ್​ ಆಡಳಿತ ವಹಿಸಿಕೊಂಡಿರುವ ಶಿರೋಮಣಿ ಗುರುದ್ವಾರ ಪರ್ಬಂಧಕ್​ ಸಮಿತಿ(ಎಸ್​ಜಿಪಿಸಿ) ನೋಟಿಸ್​ ಅಂಟಿಸಿದ್ದು, ಪ್ರವಾಸಿಗರು ವಿಡಿಯೋ ಮತ್ತು ಸೆಲ್ಫಿ ತೆಗೆಯುವಂತಿಲ್ಲ ಎಂದು ಸೂಚಿಸಿದೆ.
ನಿಯಮ ಮೀರಿಯು ವಿಡಿಯೋ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರನ್ನು ನಿಯಂತ್ರಿಸಲು ಸ್ವಯಂಸೇವಕರನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮ್ಯಾನೇಜರ್​ ಜಸ್ವಿಂದರ್​ ಸಿಂಗ್, ಇಲ್ಇಗೆ ಬಂದಾಗ ಟಿಕ್​ಟಾಕ್​ ಮತ್ತು ಸೆಲ್ಫಿಯಂತಹ ಚಟುವಟಿಕೆಗಳಿಂದ ದೂರವಿಡಿ. ಇದು ಪೂಜಾ ಕಾರ್ಯ ಸಲ್ಲಿಸುವ ಪವಿತ್ರ ಸ್ಥಳವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
