ನವದೆಹಲಿ:ಚೀನಾ ಮೂಲದ್ದು ಎಂಬ ಕಾರಣಕ್ಕೆ ಭಾರತದಲ್ಲಿ ಬ್ಯಾನ್​ ಆಗಿರುವ ಶಾರ್ಟ್​ ವಿಡಿಯೋ ಆ್ಯಪ್​ ಟಿಕ್​ಟಾಕ್​ ಮತ್ತೆ ಭಭಾರತದಲ್ಲಿ ಸೇವೆ ಆರಂಭಿಸುವ ಉತ್ಸಾಹದಲ್ಲಿದೆ.
ಹೌದು… ಜಾಗತಿಕವಾಗಿ ಉತ್ತಮ ವಹಿವಾಟು ಸಂಬಂಧ ಉಳಿಸಿಕೊಳ್ಳಲು ಚೀನಾದಿಂದ ಅಂತರ ಕಾಪಾಡಿಕೊಳ್ಳಲೇಬೇಕಿದೆ. ಹೀಗಾಗಿ ತನ್ನ ಕೇಂದ್ರ ಸ್ಥಾನವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಚೀನಾವನ್ನೇ ಬಿಟ್ಟೋಡುತ್ತಿದೆ.
ಇಂಗ್ಲೆಂಡ್​ನಲ್ಲಿ ಮುಖ್ಯ ಕಚೇರಿ ಹೊಂದಲು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಟಿಕ್​ಟಾಕ್​. ಕೇಂದ್ರ ಕಚೇರಿಗೆ ಲಂಡನ್​ ಸೇರಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ;ಕಂಟೇನರ್​ನಲ್ಲಿ ಕೊಡ್ತಾರಾ ಕರೊನಾ ರೋಗಿಗಳಿಗೆ ಚಿಕಿತ್ಸೆ? ಹೇಗಿರುತ್ತೆ ಮಾಡ್ಯೂಲರ್​ ಐಸಿಯು
ಭಾರತದ ಬಳಿಕ ಅಮೆರಿಕ ಕೂಡ ಚೀನಿ ಆ್ಯಪ್​ಗಳನ್ನು ನಿಷೇಧಿಸಿದೆ. ಹಲವು ಐರೋಪ್ಯ ದೇಶಗಳಲ್ಲೂ ಇದರ ಚೀನಾ ಮೂಲದ ಬಗ್ಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿ ಚೀನಾದಿಂದ ಹೊರಗಿದ್ದುಕೊಂಡೇ ಕಾರ್ಯಾಚರಿಸಲು ಕಂಪನಿ ಯೋಜನೆ ರೂಪಿಸಿದೆ.
ಲಂಡನ್​ ಹೊರತುಪಡಿಸಿ ಬೇರಾವ ಸ್ಥಳಗಳನ್ನು ಕಂಪನಿ ಗುರುತಿಸಿದೆ ಎನ್ನುವುದು ಖಚಿತವಾಗಿಲ್ಲ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿನ ಸಿಬ್ಬಂದಿ ಹೊಂದಿದೆ. ಅಲ್ಲದೇ, ಅಮೆರಿಕದ ಕೆವಿನ್​ ಮೇಯರ್​ ಇದರ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಹೀಗಾಗಿ ಅಮೆರಿಕದಲ್ಲೂ ನೆಲೆ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ;ಅಂತಿಮ ಪರೀಕ್ಷೆ ಬೇಕಿಲ್ಲ; ಸುಪ್ರೀಂಕೋರ್ಟ್​ ಮೊರೆ ಹೋಗಿದ್ಯಾರು? ದೇಶಾದ್ಯಂತ ರದ್ದಾಗುತ್ತಾ ಎಕ್ಸಾಂ?
ಟಿಕ್​ಟಾಕ್​ ಚೀನಾ ಮೂಲದ ಬೈಟ್​ ಡಾನ್ಸ್​ ಕಂಪನಿಯ ಒಡೆತನದಲ್ಲಿರುವ ಆ್ಯಪ್​ ಆಗಿದೆ. ಚೀನಾಗೆ ಮಾಹಿತಿ ರವಾನಿಸುತ್ತಿದೆ ಎಂಬ ಆರೋಪದಲ್ಲಿ ನಿಷೇಧಕ್ಕೆ ಒಳಗಾಗಿದೆ. ಒಂದು ಚೀನಾದಿಂದ ದೂರವುಳಿದಿದ್ದೇ ಆದಲ್ಲಿ ಮತ್ತೆ ಭಾರತದಲ್ಲಿ ಆ್ಯಪ್​ ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.
ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
