ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡಿ, ಅದನ್ನೇ ನಿತ್ಯ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಇದೀಗ ಆ ಒಂದು ಮಾತಿಗೆ ದೇಶವ್ಯಾಪಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿ ದೇಸಿ ಉತ್ಪನ್ನಗಳತ್ತ ಜನ ಮನಸು ಮಾಡಿದ್ದಾರೆ. ಅದರಲ್ಲೂ ಈ ಒಂದು ನೀತಿಯಿಂದ ಚೀನಾ ಮೂಲದ ಟಿಕ್​ಟಾಕ್​ ಕಂಪನಿಗೂ ದೊಡ್ಡ ಹೊಡೆತ ಬಿದ್ದಿದೆ!
ಇದನ್ನೂ ಓದಿ:ಜಾಹ್ನವಿ ಮತ್ತು ಖುಷಿ ಸೇರಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೋನಿ ಕಪೂರ್​ ಹೇಳಿದ್ದೇಕೆ?
ಸದ್ಯ ಭಾರತದಲ್ಲಿ ಕೋಟ್ಯಂತರ ಜನ ಟಿಕ್​ಟಾಕ್​ ಬಳಕೆ ಮಾಡುತ್ತಿದ್ದಾರೆ. ಉಳಿದ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಚೀನಾ ಮೂಲದ ಈ ಕಂಪನಿಗೆ ಅತಿ ಹೆಚ್ಚು ಆದಾಯ ಹರಿದು ಹೋಗುತ್ತಿರುವುದು ನಮ್ಮ ಭಾರತದಿಂದಲೇ! ಇದೀಗ ಸ್ವಾವಲಂಬಿ ಭಾರತ ಘೋಷಣೆ ಹಿನ್ನೆಲೆಯಲ್ಲಿ ಟಿಕ್​ಟಾಕ್​ ರೇಟಿಂಗ್​ ಗಣನೀಯವಾಗಿ ಕುಸಿತ ಕಂಡಿದೆ. ಅದ್ಯಾವ ಮಟ್ಟಿಗೆ ಅಂದರೆ, ಗೋಗಲ್​ ಪ್ಲೇ ಸ್ಟೋರ್​ನಲ್ಲಿ ಘೋಷಣೆಗೂ ಮುನ್ನ 4.6 ಇದ್ದ ರೇಟಿಂಗ್, ಘೋಷಣೆ ಬಳಿಕ 2ಕ್ಕೆ ಕುಸಿದಿದೆ.
ಇದೆಲ್ಲ ಒಂದೆಡೆಯಾದರೆ ಸೋಷಿಯಲ್​ ಮೀಡಿಯಾದಲ್ಲಿ ಟಿಕ್​ಟಾಕ್​ಬ್ಯಾನ್​, ಟಿಕ್​ಟಾಕ್​ಎಕ್ಸ್​ಪೋಸ್ಡ್​ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಬ್ಯಾನ್​ಗೆ ಭಾರತೀಯರು ಕರೆಕೊಡುತ್ತಿದ್ದಾರೆ. ಟಿಕ್​ಟಾಕ್​ನಲ್ಲೇ ಮಿಲಿಯನ್​ಗಟ್ಟಲೇ ಫಾಲೋವರ್ಸ್​ ಹೊಂದಿದ ಕೆಲವರು ಸ್ವತಃ ತಾವೇ ಆ್ಯಪ್​ ಅನ್​ ಇನ್ಸ್ಟಾಲ್​ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಶುರುವಾದ ಈ ಅಭಿಯಾನ, ಕರೊನಾ ಹೊತ್ತು ತಂದ ಚೀನಾ ದೇಶಕ್ಕೆ ಬಿಸಿ ಮುಟ್ಟಿಸುತ್ತಿದೆ. (ಏಜೆನ್ಸೀಸ್​)
ಜೀವನದ ಪಾಠ ಕಲಿತ ದಿನಗಳವು … ‘ಡಾರ್ಲಿಂಗ್’ ಕೃಷ್ಣ ಹಾಗೆ ಹೇಳಿದ್ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
