ನವದೆಹಲಿ:ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ದೇಶದಲ್ಲಿ ಬಳಕೆಯಲ್ಲಿರುವ 59 ಮೊಬೈಲ್ ಆ್ಯಪ್​ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಈ ಆ್ಯಪ್​ಗಳು ಚೀನಾ ಮೂಲದವಾಗಿದ್ದು, ಟಿಕ್​ ಟಾಕ್​ ಈ ಬಗ್ಗೆ ಮಂಗಳವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದೆ.
ಭಾರತ ಸರ್ಕಾರ ನಿಷೇಧಿಸಿರುವ ಆ್ಯಪ್​ಗಳಲ್ಲಿ ಟಿಕ್​ಟಾಕ್ ಕೂಡ ಇದೆ. ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳ ಪಾಲನೆಗೆ ನಾವು ಬದ್ಧರಿದ್ದೇವೆ. ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸುತ್ತೇವೆ. ಅಲ್ಲದೆ, ಸ್ಪಷ್ಟೀಕರಣವನ್ನೂ ಕೊಡುತ್ತೇವೆ. ಭಾರತದ ಕಾನೂನು ಚೌಕಟ್ಟಿನ ಪ್ರಕಾರ ಟಿಕ್​ಟಾಕ್ ಎಲ್ಲ ರೀತಿಯ ಡೇಟಾ ಪ್ರೈವೆಸಿ ಮತ್ತು ಸೆಕ್ಯುರಿಟಿ ಅಗತ್ಯಗಳನ್ನು ಪೂರೈಸಿದೆ ಮತ್ತು ಪೂರೈಸುತ್ತಿದೆ. ನಮ್ಮ ಭಾರತೀಯ ಬಳಕೆದಾರರ ಯಾವುದೇ ಮಾಹಿತಿಯನ್ನು ನಾವು ಯಾವುದೇ ವಿದೇಶಿ ಸರ್ಕಾರದ ಜತೆಗೆ ಹಂಚಿಕೊಂಡಿಲ್ಲ. ನಮಗೆ ಬಳಕೆದಾರರ ಪ್ರೈವೆಸಿ ಮತ್ತು ಇಂಟೆಗ್ರಿಟಿ ಅತಿ ಹೆಚ್ಚಿನ ಪ್ರಾಮುಖ್ಯತೆಯ ವಿಷಯವಾಗಿರುತ್ತದೆ ಎಂದು ಟಿಕ್​ಟಾಕ್ ಹೇಳಿಕೊಂಡಿದೆ.
ಇದನ್ನೂ ಓದಿ:ಕೋವಾಕ್ಸಿನ್​​ಗೆ ಸಿಕ್ತು ಡಿಸಿಜಿಐ ಅನುಮತಿ: ಹ್ಯೂಮನ್ ಕ್ಲಿನಿಕಲ್ ಟ್ರಯಲ್​ ಶುರು
ಈ ಹೇಳಿಕೆಯನ್ನು ಟಿಕ್​ಟಾಕ್ ಇಂಡಿಯಾ ಟ್ವೀಟ್ ಕೂಡ ಮಾಡಿದೆ. ಟಿಕ್​ಟಾಕ್ ಇಂಡಿಯಾದ ಮುಖ್ಯಸ್ಥ ನಿಖಿಲ್ ಗಾಂಧಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇನ್ನೊಂದು ಹೇಳಿಕೆಯಲ್ಲಿ ಟಿಕ್​ಟಾಕ್​, ನಮ್ಮ ತಂಡದಲ್ಲಿ 2,000 ಉದ್ಯೋಗಿಗಳು ಭಾರತದಲ್ಲಿದ್ದು ಎಲ್ಲರೂ ಬಳಕೆದಾರರ ಡೇಟಾ ಪ್ರೈವೆಸಿ ಸೇರಿ ದೇಶದ ಎಲ್ಲ ಪ್ರಮುಖ ವಿಚಾರಗಳಿಗೆ ಬದ್ಧರಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದೆ.
ಟಿಕ್​ಟಾಕ್ ಮೇಲಿನ ನಿಷೇಧ ಅದರ ಪೇರೆಂಟ್ ಕಂಪನಿ ಬೈಟ್​ ಡ್ಯಾನ್ಸ್​ಗೆ ಭಾರಿ ಹೊಡೆತ ಬಿದ್ದಿದೆ. ಭಾರತವೇ ಟಿಕ್​ಟಾಕ್​ಗೆ ಬಹುದೊಡ್ಡ ಮಾರುಕಟ್ಟೆಯಾಗಿತ್ತು. ಇತ್ತೀಚಿನ ಮಾಹಿತಿ ಪ್ರಕಾರ, ಭಾರತದಲ್ಲಿ ಟಿಕ್​ ಟಾಕ್ ಬಳಕೆದಾರರ ಸಂಖ್ಯೆ 2 ಕೋಟಿ ಆಗಿತ್ತು. (ಏಜೆನ್ಸೀಸ್)
pic.twitter.com/0DZQ3Ucqcl
— TikTok India (@TikTok_IN)June 30, 2020

ಮನೆ, ಆಸ್ಪತ್ರೆ ಬಳಕೆಗೆ ಬರಲಿದೆ ಆಮ್ಲಜನಕ ಪುಷ್ಟೀಕರಣ ಘಟಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × one =
Remember me
