ವಿಜಯವಾಡ:ಓರ್ವ ಯುವತಿಗಾಗಿ ಯುವಕರಿಬ್ಬರ ನಡುವೆ ನಡೆದ ಗಲಾಟೆಯು ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನ ರಂಗನಾಯ್ಕುಲು ಪೇಟೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಫಿ (23) ಎಂದು ಗುರುತಿಸಲಾಗಿದೆ. ಈತ ರಂಗನಾಯ್ಕುಲು ಪೇಟೆಯ ನಿವಾಸಿ ರಿಯಾಜ್​ ಭಾಷಾ ಎಂಬುವರ ಕಿರಿಯ ಮಗ. ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದ ರಫಿ, ಟಿಕ್​ಟಾಕ್​​ ಸ್ಟಾರ್​ ಸಹ ಆಗಿದ್ದ.
ಇದನ್ನೂ ಓದಿರಿ:ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!
ಮುಸ್ತಾಫ ಮತ್ತು ರಫಿ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಒಟ್ಟಿಗೆ ಟಿಕ್​ಟಾಕ್ ವಿಡಿಯೋಗಳನ್ನು ಮಾಡುವ ಮೂಲಕ ಲೈಫ್​ ಎಂಜಾಯ್​ ಮಾಡುತ್ತಿದ್ದರು. ಹೀಗಿರುವಾಗ ಮುಸ್ತಾಫ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ. ರಫಿಗೂ ಈ ವಿಚಾರ ತಿಳಿದಿತ್ತು. ಆದರೆ, ಯುವತಿ ರಫಿಯೊಂದಿಗೆ ಹೆಚ್ಚು ಇರುತ್ತಿದ್ದಳು. ಇದು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಯಿತು. ​
ಮುಸ್ತಾಫ ಮತ್ತು ರಫಿ ಸ್ನೇಹದಲ್ಲಿ ಯುವತಿಯೊಬ್ಬಳ ಆಗಮನದಿಂದ ಬಿರುಕು ಮೂಡಿ, ಅದು ದೊಡ್ಡದಾಯಿತು. ಹೀಗಿರುವಾಗ ಜನವರಿ 20ರಂದು ರಫಿ, ಯುವತಿ ಜತೆಗೆ ಟೀ ಕುಡಿಯಲು ಮನುಬೊಲು ಏರಿಯಾಗೆ ಬಂದಿದ್ದ. ಅದೇ ವೇಳೆ ಮುಸ್ತಾಫ ಯುವತಿಗೆ ಕರೆ ಮಾಡಿ ಎಲ್ಲಿದ್ದೀಯ ಎಂದು ಕೇಳಿದ್ದ. ಮನುಬಾಲದಲ್ಲಿ ರಫಿ ಜತೆಯಲ್ಲಿ ಟೀ ಕುಡಿಯುತ್ತಿರುವುದಾಗಿ ಹೇಳಿದಳು. ಬಳಿಕ ಮುಸ್ತಾಫ ಇಬ್ಬರನ್ನು ತಾನಿರುವಲ್ಲಿಗೆ ಬರಲು ಹೇಳಿದ್ದ.
ಮುಸ್ತಾಫ ಮಾತಿನಂತೆ ರಫಿ ಮತ್ತು ಯುವತಿ ಟೀ ಅಂಗಡಿಯಿಂದ ನಾಲ್ಕು ಮೈಲಿ ದೂರದಲ್ಲಿದ್ದ ಅಪಾರ್ಟ್​ಮೆಂಟ್​ಗೆ ತೆರಳಿದ್ದಾರೆ. ಈ ವೇಳೆ ಮುಸ್ತಾಫ, ರಫಿ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯದಿಂದ ಮನೆಗೆ ಮರಳಿದ ರಫಿಯನ್ನು ತಂದೆ ರಿಯಾಜ್​ ಆಸ್ಪತ್ರೆಗೆ ದಾಖಲಿಸಿ, ಘಟನೆ ಬಗ್ಗೆ ತಿಳಿದುಕೊಂಡು ಮುಸ್ತಾಫ ವಿರುದ್ಧ ಜನವರಿ 21ರಂದು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿರಿ:ಡಿವೋರ್ಸ್‌ ಕೊಟ್ಟಿದ್ದೂ ಅಲ್ಲದೇ, ಗಂಡನಿಗೆ ಕೊಟ್ಟಳು ಸಾವಿರಾರು ಕೋಟಿ ರೂ. ಪರಿಹಾರ!
ಇತ್ತ ದೂರು ದಾಖಲಾಗಿರುವುದು ತಿಳಿಯುತ್ತಿದ್ದಂತೆ ಮುಸ್ತಾಫ, ರಫಿಗೆ ಬೆದರಿಕೆ ಹಾಕಿದ್ದಾನೆ. ಕೇಸ್​ ವಾಪಸ್ಸು ಪಡೆಯದಿದ್ದರೆ, ಜಾಲತಾಣದಲ್ಲಿ ವೈಯಕ್ತಿಕ ವಿಡಿಯೋಗಳನ್ನು ಹರಿಬಿಡುವುದಾಗಿ ಮುಸ್ತಾಫ, ರಫಿಯನ್ನು ಹೆದರಿಸಿದ್ದಾನೆ. ಇದರಿಂದ ಮನನೊಂದು ರಫಿ, ಜ. 22ರಂದು ತನ್ನ ಮನೆಯಲ್ಲಿನ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸ್ಥಿತಿಯನ್ನು ನೋಡಿ ಆಘಾತಗೊಂಡ ಕುಟುಂಬ ಆತನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ದೃಢಪಡಿಸಿದರು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.(ಏಜೆನ್ಸೀಸ್​)
VIDEO| ಇದುವರೆಗೂ ನೋಡಿರದ ವಿಚಿತ್ರ ಔಟ್ ಇದು: ಅತ್ತಿತ್ತಲು ಉರುಳಿತು ವಿಕೆಟ್​..!

ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?

VIDEO| ಶ್ರುತಿ ಹಾಸನ್​ ಜತೆ ಲಿಪ್‌ಲಾಕ್ ದೃಶ್ಯದಲ್ಲಿ ಗಾಯಕ ಸಂಜಿತ್ ಹೆಗ್ಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 14 =
Remember me
