ನವದೆಹಲಿ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​, ಹಿಂದಿಯ ಜನಪ್ರಿಯ ಧಾರಾವಾಹಿ ಕ್ರೈಂ ಪಾಟ್ರೋಲ್​ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ಬಳಿಕ, ಮತ್ತೊಬ್ಬ ನಟಿ ಸಿಯಾ ಕಕ್ಕರ್​ ಅದೇ ಹಾದಿ ತುಳಿದಿದ್ದಾಳೆ.
ಟಿಕ್​ ಟಾಕ್​ನಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದ ನೃತ್ಯಗಾರ್ತಿ, ನಟಿ ಸಿಯಾ ಕಕ್ಕರ್​ ಗುರುವಾರ (ಜೂನ್​ 25) ಪ್ರೀತ್​ ವಿಹಾರದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈಕೆಯ ಸಾವಿನ ವಿಷಯವನ್ನು ಮ್ಯಾನೇಜರ್​ ಅರ್ಜುನ್​ ಸರೀನ್​ ಖಚಿತಪಡಿಸಿದ್ದಾರೆ.
ಇದನ್ನೂ ಓದಿ;‘ಫೇರ್​ ಆ್ಯಂಡ್​ ಲವ್ಲೀ’ಯಲ್ಲಿ ಇನ್ನು ಮುಂದೆ ಇರೋದಿಲ್ಲ ಫೇರ್​; ಏನು ಹೇಳುತ್ತೆ ಕಂಪನಿ ?
ಸಿಯಾ ಕಕ್ಕರ್​ ಆತ್ಮಹತ್ಯೆಗೆ ವೈಯಕ್ತಿಕ ವಿಚಾರಗಳೇ ಕಾರಣವಾಗಿರಬೇಕು. ಏಕೆಂದರೆ, ಕೆಲಸದ ವಿಚಾರದಲ್ಲಿ ಆಕೆ ಉತ್ತಮವಾಗಿದ್ದಳು ಎಂದು ಅರ್ಜುನ್​ ಹೇಳಿದ್ದಾರೆ. ಸಿಯಾಳ ಎಲ್ಲ ಕೆಲಸ ಹಾಗೂ ಜಾಹೀರಾತುಗಳ ನಿರ್ವಹಣೆಯನ್ನು ಅರ್ಜುನ್​ ನೋಡಿಕೊಳ್ಳುತ್ತಿದ್ದರು.ಹೊಸ ಯೋಜನೆಯೊಂದರ ವಿಚಾರವಾಗಿ ಆಕೆಯ ಜತೆ ಕಳೆದ ರಾತ್ರಿಯಷ್ಟೇ ಚರ್ಚಿಸಿದ್ದೆ. ಆಕೆ ಎಂದಿನಂತೆ ಸಹಜವಾಗಿಯೇ ಮಾತನಾಡಿದ್ದಳು. ಆಕೆ ಪ್ರತಿಭಾವಂತೆಯಾಗಿದ್ದಳು ಎಂದು ಅರ್ಜುನ್​ ಹೇಳಿದ್ದಾರೆ.
ಇದನ್ನೂ ಓದಿ;ಚಹಾ ಮಾರುವವನ ಮಗಳ ಆಗಸದೆತ್ತರದ ಸಾಧನೆ; ಮನೆಗೂ ತೆರಳದೆ ದೇಶಸೇವೆಗೆ ಸಜ್ಜು
ಸಿಯಾ ಕಕ್ಕರ್​ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಳು. ಟಿಕ್​ಟಾಕ್​, ಇನ್​ಸ್ಟಾಗ್ರಾಂ, ಸ್ನ್ಯಾಪ್​ ಚಾಟ್​ ಯೂಟ್ಯೂಬ್​ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಳು. ಟಿಕ್​ಟಾಕ್​ನಲ್ಲಿ ನೃತ್ಯದ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿದ್ದ ಈಕೆಗೆ 11 ಲಕ್ಷ ಫಾಲೋವರ್​ಗಳಿದ್ದರು.
ಈಕೆಯ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಕುಟುಂಬವು ಪೊಲೀಸ್​ ತನಿಖೆಗೆ ಒತ್ತಾಯಿಸಿದೆ.
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 18 =
Remember me
