ಈತನ ಡಾನ್ಸ್​ ನೋಡಿ ಫಿದಾ ಆಗದವರೇ ಇಲ್ಲ. ಟಿಕ್​ಟಾಕ್​ ಕಲಾವಿದನ ನೃತ್ಯಕ್ಕೆ ಬಾಲಿವುಡ್​ನ ನಟರೇ ಮನಸೋತಿದ್ದಾರೆ.
ಬಾಲಿವುಡ್​ನಲ್ಲಿ ಅತ್ಯುತ್ತಮ ಡಾನ್ಸರ್​ ಎಂದೇ ಪ್ರಸಿದ್ಧರಾದ ಹೃತಿಕ್​ ರೋಷನ್​ ಕೂಡ ಈತನ ನೃತ್ಯಕ್ಕೆ ಮಾರು ಹೋಗಿದ್ದು ಸ್ಮೂತೆಸ್ಟ್​ ಏರ್​ ವಾಕರ್​ ಎಂದು ಬಣ್ಣಿಸಿದ್ದಾರೆ.
ಯುವರಾಜ್​ ಸಿಂಗ್​ ಅಕಾ ‘@babajackson2020’ ಎನ್ನುವ ಟಿಕ್​ಟಾಕ್​ನ ಈ ನೃತ್ಯಪಟುವಿಗೆ ಹೃತಿಕ್​ ರೋಷನ್​ ಮಾತ್ರವಲ್ಲ ಬಾಲಿವುಡ್​ನ ಹಲವು ನಟ ನಟಿಯರು ಬಹುಪರಾಕ್​ ಎಂದಿದ್ದಾರೆ. ಅಮಿತಾಬ್​ ಬಚ್ಚನ್​, ಸುನೀಲ್​ ಶೆಟ್ಟಿ, ನೃತ್ಯ ನಿದೇರ್ಶಕ ರೆಮೊ ಡಿಸೋಜಾ, ರವೀನಾ ಟಂಡನ್​ ಮುಂತಾದವರು ಯುವರಾಜ್​ನ ನೃತ್ಯಕ್ಕೆ ಸೈ ಎಂದಿದ್ದಾರೆ.
ಯುವರಾಜ್​ನ ಟಿಕ್​ಟಾಕ್​ಗೆ 10 ಲಕ್ಷ ಮಂದಿ ಫಾಲೋವರ್​ಗಳಿದ್ದಾರೆ. ಇದುವರೆಗೆ ಈತನ ಡಾನ್ಸ್​ನ ವಿಡಿಯೋಗಳನ್ನು 11 ಮಿಲಯನ್​ ಮಂದಿ ವೀಕ್ಷಿಸಿದ್ದಾರೆ. ಅಭಿಮಾನಿಯೊಬ್ಬ ಡಾನ್ಸ್​ನ ವಿಡಿಯೋವನ್ನು ಟ್ವೀಟರ್​ ಹಾಕಿದ ನಂತರ ಯುವರಾಜ್ ಬಾಲಿವುಡ್​ ನಟರ ಗಮನ ಸೆಳೆದಿದ್ದಾನೆ.
ಮುಕ್ಕಾಲಾ ಮುಕ್ಕಾಬುಲಾ…. ಹಾಡಿಗೆ ಯುವರಾಜ್​ನ ನೃತ್ಯದ ವಿಡಿಯೋವನ್ನು ಟ್ವೀಟ್​ ಮಾಡಿದ ಅಭಿಮಾನಿ ಹೃತಿಕ್​ ರೋಷನ್​ ಮತ್ತು ಪ್ರಭುದೇವ ಅವರನ್ನು ಟ್ಯಾಗ್​ ಮಾಡಿದ್ದಾನೆ. ಅಲ್ಲದೆ ಯುವರಾಜ್​ನ ನೃತ್ಯವನ್ನು ನೋಡಿ, ಇವನ್ನು ಪ್ರಖ್ಯಾತಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಭಾನುವಾರ ಪೊಸ್ಟ್​ ಮಾಡಿದ ಈ ವಿಡಿಯೋವನ್ನು ಈಗ 9.3 ಮಂದಿ ವೀಕ್ಷಿಸಿ, 52 ಸಾವಿರ ಲೈಕ್​ ಪಡೆದಿದೆ. ಅಲ್ಲದೆ 15 ಸಾವಿಕ್ಕೂ ಹೆಚ್ಚು ಬಾರಿ ರಿಟ್ವೀಟ್​ ಮಾಡಲಾಗಿದೆ.(ಏಜೆನ್ಸೀಸ್​)
Smoothest airwalker I have seen. Who is this man ?https://t.co/HojQdJowMD
— Hrithik Roshan (@iHrithik)January 13, 2020

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × five =
Remember me
