ಬೆಂಗಳೂರು:ಟಿಕ್​ಟಾಕ್, ಪಬ್​ಜಿ ಸೇರಿ ಚೀನಾದ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿರ್ಬಂಧಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ. ಅದರಲ್ಲಿ ಪಬ್​ಜಿ ಹೊಸ ಅವತಾರದೊಂದಿಗೆ ಭಾರತಕ್ಕೆ ವಾಪಸಾಗಿರುವುದೂ ಹಳೆಯ ವಿಚಾರವೇ. ಇದೀಗ ಹೊಸ ವಿಚಾರವೇನೆಂದರೆ, ಪಬ್​ಜಿಯಂತೆ ಟಿಕ್​ಟಾಕ್​ ಕೂಡ ಭಾರತಕ್ಕೆ ವಾಪಸಾಗಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು.
ಟಿಕ್​ಟಾಕ್(TikTok) ಆ್ಯಪ್​ನ್ನು ಚೀನಾದ ಬೈಟ್​ಡ್ಯಾನ್ಸ್ ಸಂಸ್ಥೆ ತಯಾರಿಸಿತ್ತು. ಆ ಹೆಸರಿಗೆ ಈಗಾಗಲೇ ಟ್ರೇಡ್ ಮಾರ್ಕ್ ಪಡೆದಿರುವ ಸಂಸ್ಥೆ ಇದೀಗ TikTock ಹೆಸರಿಗೆ ಟ್ರೇಡ್ ಮಾರ್ಕ್ ಪಡೆಯಲು ಮುಂದಾಗಿದೆ. ಭಾರತದ ಐಟಿ ಇಲಾಖೆಯ ಎಲ್ಲ ನಿಯಮಗಳಿಗೆ ಒಪ್ಪಿಕೊಳ್ಳುವುದಾಗಿ ಸಂಸ್ಥೆ ಈ ಹಿಂದೆಯೇ ತಿಳಿಸಿದೆ. ಅದರ ಬೆನ್ನಲ್ಲೇ ಈ ರೀತಿ ಟ್ರೇಡ್ ಮಾರ್ಕ್​ಗಾಗಿ ಅರ್ಜಿ ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ.
So yes, TickTock might very well be coming to India. ByteDance has filed the trademark for the same in the country.Feel free to retweet.#TikTok#TickTockpic.twitter.com/ORh4GHDzzl
— Mukul Sharma (@stufflistings)July 20, 2021

ಜುಲೈ 6ನೇ ತಾರೀಖಿನಂದು ಟ್ರೇಡ್ ಮಾರ್ಕ್​ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಇನ್ನೂ ಅರ್ಜಿ ಪರಿಶೀಲನೆ ಹಂತದಲ್ಲಿದೆ. ಟ್ರೇಡ್ ಮಾರ್ಕ್ ಸಿಕ್ಕ ಮೇಲೆ ಭಾರತಕ್ಕೆ ಹೊಂದುವ ರೀತಿಯಲ್ಲಿ ನಿಯಮಗಳನ್ನು ಮಾಡಿಕೊಂಡು ಟಿಕ್​ಟಾಕ್ ಮತ್ತೆ ವಾಪಸು ಬರಬಹುದು ಎನ್ನುವ ಚರ್ಚೆ ಭಲವಾಗಿದೆ. (ಏಜೆನ್ಸೀಸ್)
ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್​ರನ್ನು 5 ವರ್ಷ ಬ್ಯಾನ್​ ಮಾಡಿ…

ಬಜಾಜ್ ಚೇತಕ್​ಗೆ ಕಾಂಪಿಟೇಶನ್ ಕೊಡತ್ತಾ ಓಲಾ ಸ್ಕೂಟರ್? ಹೇಗಿರಲಿದೆ ಗೊತ್ತಾ ಓಲಾ ಸ್ಕೂಟಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
