ಶ್ರೀನಗರ:ದೇಶಕ್ಕೇ ಅನ್ವಯವಾಗುವ ಕಾನೂನನ್ನು ಜಮ್ಮು-ಕಾಶ್ಮೀರದಲ್ಲೂ ಅನ್ವಯ ಮಾಡುವ ಮೂಲಕ ಅಪಾಯವನ್ನು ಆಹ್ವಾನಿಸಲಾಗುತ್ತಿದೆ. ಈ ಕರಾಳ ಕಾನೂನು ವಿರೋಧಿಸಲು ಜನರು ಕೈ ಜೋಡಿಸಬೇಕು ಎಂದು ಪಿಡಿಪಿ ನಾಯಕ ಸುರಿಂದರ್ ಚೌಧರಿ ಕರೆ ಕೊಟ್ಟಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಹೊರಗಿನವರ ಪ್ರವೇಶದಿಂದ ರೇಪ್ ಮತ್ತು ಇತರೆ ಕ್ರೈಂಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದ್ದಾರೆ.
ಪೀಪಲ್ಸ್​ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಜನರಲ್ ಸೆಕ್ರಟರಿ ಮತ್ತು ಮಾಜಿ ಶಾಸಕರೂ ಆಗಿರುವ ಚೌಧರಿ, ಕಾಶ್ಮೀರದಲ್ಲಿ ಯಾರೂ ಜಮೀನು ಖರೀದಿಸಲ್ಲ. ಆದರೆ ಜಮ್ಮುವಿನ ಪರಿಸ್ಥಿತಿ ಹಾಗಲ್ಲ. ಇಲ್ಲಿ ಜನರ ಕುತ್ತಿಗೆ ಮೇಲೆಯೇ ಕತ್ತಿ ಇದೆ. ಮದುವೆಗೆ ಒಪ್ಪಿಲ್ಲ ಎಂದು ಹಾಡುಹಗಲೇ ಬಳ್ಳಾಲ್​ ಬಾಗ್​ನ ನಡುರಸ್ತೆಯಲ್ಲಿ ಯುವತಿಯೊಬ್ಬಳನ್ನು ಕೊಂದ ಸುದ್ದಿ ನಿನ್ನೆಯಷ್ಟೇ ವರದಿಯಾಗಿದೆ. ಅಂತಹ ಕೃತ್ಯಗಳು ಇನ್ನು ಜಮ್ಮು-ಕಾಶ್ಮೀರದಲ್ಲೂ ಸಾಮಾನ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:‘ಅಭಿನಂದನ್​ ರಿಲೀಸ್ ಮಾಡದಿದ್ರೆ ಭಾರತ ದಾಳಿ ಮಾಡುತ್ತೆ ಅಂತ ನಡುಗ್ತಾ ಬೇಡಿಕೊಂಡಿದ್ರು ಬೆಜ್ವಾ, ಖುರೇಶಿ’ !
ಜಮ್ಮು-ಕಾಶ್ಮೀರದಲ್ಲಿ ಆಡಳಿತಾತ್ಮಕ ಬದಲಾವಣೆಯನ್ನು ವಿರೋಧಿಸುತ್ತಿರುವ ಪಿಡಿಪಿ ಮತ್ತು ಇತರೆ ಪಕ್ಷಗಳು ಗುಪ್ತಾರ್​ ಮೈತ್ರಿಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಲಾರಂಭಿಸಿವೆ. ಪಿಡಿಪಿ, ಎನ್​ಸಿಪಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು ಸ್ವಾರ್ಥ ರಾಜಕೀಯ ಹಿತ ಕಾಪಾಡುವ ದೃಷ್ಟಿಯಿಂದ ಈ ರಾಜಕೀಯ ಪಕ್ಷಗಳ ನಾಯಕರು ಕೆಲಸ ಮಾಡತೊಡಗಿದ್ದಾರೆ. (ಏಜೆನ್ಸೀಸ್)
ಇಸ್ಲಾಮಾಬಾದ್​ನ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳು 3,000- ಅವರ ದೇಗುಲ ನಿರ್ಮಾಣಕ್ಕೆ ನೂರು ಅಡ್ಡಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 14 =
Remember me
