ಹೈದರಾಬಾದ್​:ರಸ್ತೆಯಲ್ಲಿ ಸ್ಕೂಟರ್​ ಮೇಲೆ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನ ಸವಿನಿದ್ದೆಗೆ ಪೊಲೀಸರು ಭಂಗ ಉಂಟುಮಾಡಿದ ಘಟನೆ ಹೈದರಾಬಾದಿನ ಮಧುಪುರದಲ್ಲಿ ಮಂಗಳವಾರ (ಅ. 27) ನಡೆದಿದೆ.
ಹೈದರಾಬಾದಿನ ಎಲ್ಲಂಬಂಡ ಏರಿಯಾ ನಿವಾಸಿ ಹಾಗೂ ಆಫೀಸ್​ ಬಾಯ್​ ಆಗಿ ಕೆಲಸ ಮಾಡುವ ಸತ್ಯನಾರಾಯಣ ಎಂಬುವರು ನಡು ರಸ್ತೆಯಲ್ಲೇ ಸ್ಕೂಟರ್ ನಿಲ್ಲಿಸಿ ನಿದ್ದೆಗೆ ಜಾರಿದ್ದರು. ಗಾಚಿಬೌಲಿಯಲ್ಲಿರುವ ಐಸಿಐಸಿಐ ಬ್ಯಾಂಕ್​ನಿಂದ ಆಗಮಿಸುತ್ತಿದ್ದ ಸತ್ಯನಾರಾಯಣ, ಮಾದಕ ಸ್ಥಿತಿಯಲ್ಲಿದ್ದರಿಂದ ಐಕೆಇಎ (IKEA) ಅಂಡರ್​ಪಾಸ್​ ಬಳಿ ರಸ್ತೆ ಮಧ್ಯೆಯೇ ತನ್ನ ಹೋಂಡ ಆ್ಯಕ್ಟೀವಾ ನಿಲ್ಲಿಸಿ ನಿದ್ದೆ ಮಾಡುತ್ತಿದ್ದರು.
ಇದಕ್ಕೂ ಮುನ್ನ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದನ್ನು ಮಧುಪುರ ಸಂಚಾರಿ ಪೊಲೀಸರು ಸಿಸಿಟಿವಿ ಮೂಲಕ ಗಮನಿಸಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸ್ಕೂಟರ್​ ಮೇಲೆ ಮಲಗಿದ್ದ ಸತ್ಯಾನಾರಾಯಣರನ್ನು ಎಚ್ಚರಿಸಿ, ಡ್ರಂಕ್​ ಆ್ಯಂಡ್​ ಡ್ರೈವ್​ ಪರಿಶೀಲಿಸಿದ್ದಾರೆ. ಈ ವೇಳೆ ಅವರ ರಕ್ತದಲ್ಲಿ 334 ಮಿಲಿ ಗ್ರಾಂ ಆಲ್ಕೋಹಾಲ್​ ಇರುವುದು ಪತ್ತೆಯಾಗಿದೆ. ಯಾವುದೇ ದಾಖಲೆಯಿಲ್ಲದೇ ಡ್ರಂಕ್​ ಆ್ಯಂಡ್​ ಡ್ರೈವ್​ ಮಾಡಿದ ಆತನ ವಿರುದ್ಧ ಕೇಸು ದಾಖಲಸಿಕೊಳ್ಳಲಾಗಿದೆ. ವಾಹನ ಮತ್ತು ಸತ್ಯನಾರಾಯಣ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಬಂದು ಸರಗಳ್ಳತನ ಮಾಡಿದ್ದವ ಸೇರಿ ಉತ್ತರ ಪ್ರದೇಶದ ಆರು ಆರೋಪಿಗಳ ಬಂಧನ: ಎಸ್ಪಿ ಕೆ.ಎಂ.ಶಾಂತರಾಜು
ಸತ್ಯನಾರಾಯಣ ಅವರು ಸ್ಕೂಟರ್​ ಮೇಲೆ ಮಲಗಿದ್ದ ಫೋಟೋವನ್ನು ಸೈಬರಬಾದ್​ ಸಂಚಾರಿ ಪೊಲೀಸ್​ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು, ಸಂಭವನೀಯ ರಸ್ತೆ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣ ದಾಖಲಿಸಲಾಗುತ್ತದೆ. ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಮಲಗಿರುವುದನ್ನು ಸೈಬರಬಾದ್​ ಟ್ರಾಫಿಕ್​ ಕಮ್ಯಾಂಡ್​ ಮತ್ತು ಕಂಟ್ರೋಲ್​ ಸೆಂಟರ್​ ಸಿಸಿಟಿವಿಯಲ್ಲಿ ಪರಿಶೀಲಿಸಿತು ಮತ್ತು ಮಧುಪುರ ಪೊಲೀಸರಿಗೆ ಎಚ್ಚರಿಸಿತು ಎಂದು ಹೇಳಿದೆ.(ಏಜೆನ್ಸೀಸ್​)
Booking of every drunken drive case is prevention of a potential road accident.
Cyberabad Traffic Command and Control Centre observes in CCTV a man sleeping on his bike on mid road and alerts Madhapur Traffic Police. On test his BAC reading was 334 mg/ 100 ml of blood.pic.twitter.com/s492yxXLXk
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC)October 27, 2020

ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
