ತಿರುಪತಿ:ತಿರುಪತಿ-ತಿರುಮಲ ದೇವಸ್ಥಾನದ ನೂತನ ಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ಯಾಮಲಾ ರಾವ್, ಭಕ್ತರ ಸಮಸ್ಯೆಗಳತ್ತ ಗಮನ ಹರಿಸುತ್ತಿದ್ದಾರೆ.
ಇದನ್ನೂ ಓದಿ:54ನೇ ವಸಂತಕ್ಕೆ ರಾಹುಲ್​ ಗಾಂಧಿ..ಕಾರ್ಯಕರ್ತರು ದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದ ಖರ್ಗೆ!
ತಿರುಮಲಕ್ಕೆ ಬರುವ ಭಕ್ತರಿಗೆ ಅಂಗಡಿಯವರು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಕುರಿತು ಪರಿಶೀಲನೆ ನಡೆಸಿದ ಅವರು, ಎಂಆರ್​ಪಿ ಬೆಲೆಗಿಂತ ಹೆಚ್ಚು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶ್ರೀನಿವಾಸಮಂಗಾಪುರ ಹಾಗೂ ಮೆಟ್ಟಿಲು ಮಾರ್ಗದಲ್ಲಿ ಅಂಗಡಿಗಳವರು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೆಲ ಭಕ್ತರು ದೂರಿದ್ದಾರೆ. ಟಿಟಿಡಿ ಎಸ್ಟೇಟ್ ಅಧಿಕಾರಿ ಗುಣಭೂಷಣ ರೆಡ್ಡಿ ಅವರು ಜೆಇಒ (ಶಿಕ್ಷಣ, ವೈದ್ಯಕೀಯ) ಗೌತಮಿ ಅವರ ಮೇಲ್ವಿಚಾರಣೆಯಲ್ಲಿ ಮೆಟ್ಟಿಲುಗಳ ಮಾರ್ಗದ ಮೂರು ಅಂಗಡಿಗಳನ್ನು ಪರಿಶೀಲಿಸಿದರು.
ತಿರುಮಲ ಮತ್ತು ತಿರುಪತಿಯಲ್ಲಿ ಟಿಟಿಡಿ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಶ್ಯಾಮಲಾ ರಾವ್ ತಿಳಿಸಿದರು . ನಿಯಮ ಉಲ್ಲಂಘಿಸಿದ ಮಳಿಗೆ ಸಂಖ್ಯೆ-3ರ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. 25 ಸಾವಿರ ದಂಡ ವಿಧಿಸಲಾಗುವುದು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಿರಿಯ ನಾಗರಿಕರು ಅಥವಾ ಅಂಗವಿಕಲರಿಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ನಂಬಬೇಡಿ ಎಂದು ಭಕ್ತರಲ್ಲಿ ಟಿಟಿಡಿ ಮನವಿ ಮಾಡಿದೆ.
ರಾಜನ ಬರ್ತ್ ಡೇಗೆ ಕಾವಲಿದ್ದಾಗಲೇ ಚುಂಬಿಸಿ ಮದುವೆ​..ಬಕಿಂಗ್​ಹ್ಯಾಂ ಪ್ಯಾಲೇಸ್​ನಲ್ಲಿ ವಿಚಿತ್ರ ವಿವಾಹ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 5 =
Remember me
