ತಿರುಪತಿ:ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಸಾವಿಗೀಡಾಗಿದ್ದಾರೆ. ಮಾರ್ಗಮಧ್ಯೆ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇವರು ಮೃತಪಟ್ಟಿದ್ದಾರೆ. ತಿರುಪತಿ-ಕಾಳಹಸ್ತಿ ನಡುವಿನ ರಾಷ್ಟ್ರಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ತಿರುಪತಿಯ ಮಿಟ್ಟಕಂಡ್ರಿಗ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಅಪಘಾತ ನಡೆದಿದೆ. ಕಾರಿನಲ್ಲಿ ಒಟ್ಟು ಏಳು ಮಂದಿ ಇದ್ದಿದ್ದು, ಆ ಪೈಕಿ 16 ವರ್ಷದ ಬಾಲಕನೊಬ್ಬ ಮಾತ್ರ ಉಳಿದುಕೊಂಡಿದ್ದಾನೆ. ಸತ್ತವರೆಲ್ಲೂ ವಿಜಯವಾಡದ ಕೃಷ್ಣಾಲಂಕ ಪ್ರದೇಶದ ಒಂದೇ ಕುಟುಂಬದವರು.
ಇದನ್ನೂ ಓದಿ:ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ
ವಿಜಯವಾಡದಿಂದ ಶುಕ್ರವಾರ ರಾತ್ರಿ 8ಕ್ಕೆ ಹೊರಟಿದ್ದ ಇವರು ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆದು ವಾಪಸ್ ಹೊರಟಿದ್ದರು. ಬದುಕುಳಿದ ಬಾಲಕನ ಕಾಲು ಮುರಿತಕ್ಕೆ ಒಳಗಾಗಿದ್ದು, ಸತ್ತವರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಕಲೆ ಹಾಕಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪ-ಅಮ್ಮ ಸ್ಥಳದಲ್ಲೇ ಸಾವು; ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರು!

ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 11 =
Remember me
