ತಿರುಪತಿ:ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ಭಕ್ತರು ಇನ್ನು ಮುಂದೆ ಹೆಚ್ಚುವರಿಯಾಗಿ ಲಡ್ಡು ಬೇಕಾದರೆ ಆಧಾರ್​ ತೋರಿಸಬೇಕಾಗುತ್ತದೆ. ಇಲ್ಲಿ ತನಕ ಇದ್ದ ನಿಯಮ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಜಿಯು-ಜಿಟ್ಸುವಿನಲ್ಲಿ ಎದುರಾಳಿಯನ್ನು ಸೋಲಿಸಿದ ರಾಹುಲ್ ಗಾಂಧಿ: ಹಲ್​ಚಲ್ ಸೃಷ್ಟಿಸಿದ ವೀಡಿಯೋ
ಇನ್ನು ಮುಂದೆ ಒಬ್ಬರಿಗೆ ಒಂದು ಲಡ್ಡು ಮಾತ್ರ ನೀಡಲು ನಿಯಮಗಳನ್ನು ಬದಲಿಸಿ ನಿರ್ಧಾರ ಕೈಗೊಳ್ಳಲಾಗಿದೆ. ದೇವರ ದರ್ಶನ ಪಡೆದ ಭಕ್ತರು ದರ್ಶನ ಚೀಟಿ ತೋರಿಸಿದರೆ ಲಡ್ಡು ನೀಡಲಾಗುವುದು. ಹೆಚ್ಚುವರಿಯಾಗಿ ಲಡ್ಡು ಬೇಕೆಂದರೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ನೀಡಲಾಗುವುದು. ಟಿಟಿಡಿಯ ಈ ಹೊಸ ನಿಯಮಗಳ ಬಗ್ಗೆ ಭಕ್ತರಿಂದ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.
ಒಬ್ಬ ಭಕ್ತಗೆ ಒಂದು ಲಡ್ಡು ಮಾತ್ರ ನೀಡುವಂತೆ ನಿಯಮದಲ್ಲಿ ಬದಲಾವಣೆ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದರ್ಶನ್ ಟೋಕನ್ ಗೆ ಒಂದು ಲಡ್ಡು, ಆಧಾರ್ ಕಾರ್ಡ್ ತೋರಿಸಲು ಇನ್ನೊಂದು ಲಡ್ಡೂ ನೀಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
ಆ.29ರ(ಗುರುವಾರ)ದಿಂದಲೇ ಹೊಸ ನಿಯಮಾವಳಿ ಜಾರಿಗೆ ಬರಲಿದೆ ಎಂದು ಟಿಟಿಡಿ ಹೇಳಿದ್ದು, ಸ್ವಾಮಿಯ ಪ್ರಸಾದ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಆದರೆ ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ. ಕೂಡಲೇ ಟಿಟಿಡಿ ನಿಯಮಗಳನ್ನು ಬದಲಾಯಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಇನ್ನು ಲಡ್ಡು ಗುಣಮಟ್ಟ ಹೆಚ್ಚಿಸಲು ಟಿಟಿಡಿ ತುಪ್ಪದ ಟೆಂಡರ್ ಅನ್ನು ಬದಲಾಯಿಸಿದೆ. ಆಂಧ್ರದ ಖಾಸಗಿ ಡೇರಿಗಳಿಗೆ ಬದಲಾಗಿ ನೂತನ ಸರ್ಕಾರ ಕರ್ನಾಟಕದ ಕೆಎಂಎಫ್​ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದೆ.
‘ಕಾಲಿವುಡ್​ನಲ್ಲೂ ಇದೆ ಶೋಷಣೆ.. ಸಮಿತಿ ರಚನೆ ಅಗತ್ಯ’..ಸಂಚಲನ ಸೃಷ್ಟಿಸಿದ ನಟ ವಿಶಾಲ್ ಹೇಳಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − 4 =
Remember me
