ಬೆಂಗಳೂರು:ಎಂಎಸ್​ಡಿ ಎಂದರೆ ಕ್ರಿಕೆಟ್​ ಪ್ರೇಮಿಗಳಿಗೆ ನೆನಪಾಗುವುದು ಮಹೇಂದ್ರ ಸಿಂಗ್​ ಧೋನಿ ಅಥವಾ ಎಂಎಸ್​ ಧೋನಿ ಎಂದು. ಆದರೆ ತಮಿಳುನಾಡು ಪೊಲೀಸರು ಈಗ ಧೋನಿ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಇದಕ್ಕೀಗ ಹೊಸ ಅರ್ಥ ಕಲ್ಪಿಸಿದ್ದಾರೆ. ಅದುವೇ ‘ಮೆಂಟೇನ್​ ಸೋಷಿಯಲ್​ ಡಿಸ್​ಟೆನ್ಸ್​’ ಎಂದು. ಕರೊನಾ ಹಾವಳಿಯ ಸಮಯದಲ್ಲಿ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಧೋನಿ ಹೆಸರಿನಲ್ಲಿ ಹೊಸ ರೀತಿಯ ಜಾಗೃತಿ ಮೂಡಿಸುತ್ತಿದ್ದಾರೆ.
ತಮಿಳುನಾಡಿನ ತಿರುಪ್ಪುರ ನಗರ ಪೊಲೀಸ್​ ಇಲಾಖೆಯ ಟ್ವಿಟರ್​ ಖಾತೆಯಿಂದ ಎಂಎಸ್​ಡಿಗೆ ಈ ಹೊಸ ವ್ಯಾಖ್ಯಾನವನ್ನು ನೀಡುವ ಮೂಲಕ ಸಾಮಾಜಿಕ ಅಂತರದ ಜಾಗೃತಿ ಸಂದೇಶ ನೀಡಲಾಗಿದೆ. ಇದರೊಂದಿಗೆ ಎಂಎಸ್​ ಧೋನಿ ಅವರ ಮಾಸ್ಕ್​ ಧರಿಸಿರುವ ಮತ್ತು ಮಾಸ್ಕ್ ಧರಿಸಿದ ಸಹ-ಆಟಗಾರ ಜಸ್​ಪ್ರೀತ್​ ಬುಮ್ರಾ ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಎಡಿಟೆಡ್​ ಚಿತ್ರವನ್ನೂ ಪ್ರಕಟಿಸಲಾಗಿದೆ.ಧೋನಿ ಅವರ ಇನಿಶಿಯಲ್ಸ್​ ಅನ್ನೇ ಉಪಯೋಗಿಸಿ ಜನರಲ್ಲಿ ಸಾಮಾಜಿಕ ಅಂತರದ ಜಾಗೃತಿ ಮೂಡಿಸುತ್ತಿರುವ ಪೊಲೀಸರ ಈ ಹೊಸ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ:ಬೆನ್ ಸ್ಟೋಕ್ಸ್ ಈಗ ವಿಶ್ವ ನಂ. 1 ಆಲ್ರೌಂಡರ್
ಈ ಮುನ್ನ ಮುಂಬೈ ಪೊಲೀಸರು ಕೂಡ ಜುಲೈ 7ರಂದು ಧೋನಿ ಜನ್ಮದಿನದ ಹಿನ್ನೆಲೆಯಲ್ಲಿ ಕರೊನಾ ಹಾವಳಿ ಮತ್ತು ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಎಂಎಸ್​ಡಿ ಮಂತ್ರವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವರು ಕೂಡ ಎಂಎಸ್​ಡಿ ಎಂದರೆ ಮೆಂಟೇನ್​ ಸೋಷಿಯಲ್​ ಡಿಸ್​ಟೆನ್ಸ್​ ಎಂದು ಹೇಳಿದ್ದರು. ಜತೆಗೆ ಕೂಲ್​ ಕ್ಯಾಪ್ಟನ್​ಗೆ ಭಿನ್ನ ರೀತಿಯಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ದರು. ಧೋನಿ ರೀತಿಯಲ್ಲೇ ನಾಟೌಟ್​ ಆಗಿರಿ ಮತ್ತು ಕೂಲ್​ ಆಗಿರಿ ಎಂದು ಸಂದೇಶ ನೀಡಿದ್ದರು.
#tnpolice#Tiruppur#tiruppurcitypoliceM S D-maintain social distancepic.twitter.com/Ul38Uqp1vK
— Tiruppur City Police (@Thirupurcitypol)July 20, 2020

Do it the ‘Mahi Way’ – Stay ‘Not Out’, Stay Cool & Stump#coronavirus
Happy Birthday, Captain Cool.#HappyBirthdayMahi#SocialDistancingpic.twitter.com/piH7jNFBIK
— मुंबई पोलीस – Mumbai Police (@MumbaiPolice)July 7, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
