ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ, ರಾಜಕೀಯ ಪಕ್ಷಗಳ ನಡುವಿನ ಹೊಡೆದಾಟ ಹೊಸದಲ್ಲ.ಇಂದು ಮತ್ತೆ ಅದು ಪುನರಾವರ್ತನೆಗೊಂಡಿದೆ. ಅಂಫಾನ್​ ಚಂಡಮಾರುತದಿಂದ ಸಂತ್ರಸ್ತರಾದವರಿಗೆ ಪರಿಹಾರ ವಿತರಣೆ ಮಾಡುವಾಗ ಗೋಲ್​ಮಾಲ್​ ಆಗಿದೆ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಇಂದು ಪಶ್ಚಿಮ ಬಂಗಾಳದ 24 ಪರಗಣ ಏರಿಯಾದಲ್ಲಿ ನಡೆದ ಪ್ರತಿಭಟನೆ ವೇಳೆ, ಬಿಜೆಪಿ ಕಾರ್ಯಕರ್ತರು ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದಾರೆ.
ಅಂಫಾನ್​ ಚಂಡಮಾರುತದಿಂದ ತೊಂದರೆಗೊಳಗಾದವರಿಗೆ ನೆರವು ನೀಡುವಾಗ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ, ಅಟ್ಯಾಕ್​ ಮಾಡಿದ್ದಾರೆಂದು ಹೇಳಲಾಗಿದೆ. ಪೊಲೀಸರೂ ಕೂಡ ನಮ್ಮನ್ನು ಹಿಂಸಿಸಿದ್ದಾರೆಂದು ಬಿಜೆಪಿಗರು ಆರೋಪಿಸಿದ್ದಾರೆ.ಟಿಎಂಸಿ ಗೂಂಡಾಗಳ ಹಲ್ಲೆಯಿಂದ ಹಲವರು ಗಾಯಗೊಂಡಿದ್ದಾರೆ. ನಮ್ಮಲ್ಲಿ ಅನೇಕರ ಮೊಬೈಲ್​ ಫೋನ್​​​ಗಳನ್ನು ಕಿತ್ತುಕೊಂಡಿದ್ದಾರೆ​, ವಾಹನಗಳನ್ನೆಲ್ಲ ಧ್ವಂಸ ಮಾಡಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬರಕ್​ಪುರ ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ತಿಳಿಸಿದ್ದಾರೆ.ಇದನ್ನೂ ಓದಿ:ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ಗೆ ಬೆದರಿಕೆ: ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಕರೆ
ಟಿಎಂಸಿ ಗೂಂಡಾಗಳು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಿದ್ದಾರೆ. ನಾವು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಕಚ್ಚಾ ಬಾಂಬ್​ ಎಸೆದಿದ್ದಾರೆ ಎಂದೂ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದ ತೀವ್ರ ಹಾನಿಯಾಗಿದೆ. ಆದರೆ ಅದರ ಸಂತ್ರಸ್ತರಿಗೆ ಪರಿಹಾರ ನೀಡುವಾಗ ರಾಜ್ಯಸರ್ಕಾರ ಗೋಲ್​ಮಾಲ್​ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ.ಅನೇಕರಿಗೆ ಯಾವುದೇ ಹಾನಿಯಾಗದೆ ಇದ್ದರೂ ಪರಿಹಾರ ಧನ ನೀಡಲಾಗಿದೆ. ಮತ್ತೆ ಹಲವರು ನಿಜವಾಗಿಯೂ ಚಂಡಮಾರುತದಿಂದ ಅಪಾರ ಹಾನಿಗೆ ಒಳಗಾಗಿದ್ದರೂ ನೆರವು ಸಿಗಲಿಲ್ಲ ಎಂಬುದು ಬಿಜೆಪಿಯ ಆರೋಪ. (ಏಜೆನ್ಸೀಸ್​)
West Bengal: TMC workers allegedly attacked BJP workers who were taking out a protest march against alleged corruption in Ambhan relief distribution, alleged harassment of BJP workers by police & other issues, in Jagatdal of North 24 Parganas district earlier today.pic.twitter.com/ZI1zx70MuG
— ANI (@ANI)July 18, 2020

ರಾಜ್ಯದಲ್ಲಿ 24ಗಂಟೆಯಲ್ಲಿ ಬರೋಬ್ಬರಿ 4537 ಹೊಸ ಕರೊನಾ ಪ್ರಕರಣಗಳು; 93 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
