ಕೋಲ್ಕತ:ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಪ್ರತಿದಿನ ಶಾಕ್​ ಮೇಲೆ ಶಾಕ್​ ಎದುರಾಗಲಾರಂಭಿಸಿದೆ. ಶಾಸಕ ಅರಿಂದಂ ಭಟ್ಟಾಚಾರ್ಯ ಪಕ್ಷಕ್ಕೆ ರಾಜಿನಾಮೆ ಕೊಟ್ಟು, ಬಿಜೆಪಿ ಸೇರಿದ ಬೆನ್ನಲ್ಲೇ ಇದೀಗ ರಾಜ್ಯದ ಅರಣ್ಯ ಸಚಿವರೂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಇದನ್ನೂ ಓದಿ:ಈ ವರ್ಷ ಶೇ. 25 ಮಾರ್ಕ್ಸ್​ ಪಡೆದರೂ ಪಾಸ್​? ಇಲ್ಲಿದೆ ನೋಡಿ ಪ್ರಕಟಣೆಯ ಅಸಲಿಯತ್ತು
ಅರಣ್ಯ ಸಚಿವ ರಾಜಿಬ್​ ಬ್ಯಾನರ್ಜಿ ಶುಕ್ರವಾರದಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿರುವ ಅವರು, “ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಇದು ಒಂದು ದೊಡ್ಡ ಸ್ಥಾನ ಮತ್ತು ಅವಕಾಶವಾಗಿತ್ತು. ಈ ಅವಕಾಶವನ್ನು ಕೊಟ್ಟಿದ್ದಕ್ಕೆ ನಾನು ಪಕ್ಷಕ್ಕೆ ಕೃತಜ್ಞನಾಗಿದ್ದೇನೆ. ಇದೀಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ದಯಮಾಡಿ ಸ್ವೀಕರಿಸಿ” ಎಂದು ಕೇಳಿಕೊಂಡಿದ್ದಾರೆ.
ಜನವರಿ 30 ಮತ್ತು 31ರಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರೊಳಗೆ ರಾಜಿಬ್​ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬುಧವಾರದಂದು ಶಾಸಕ ಅರಿಂದಂ ಭಟ್ಟಾಚಾರ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು.
ಇದನ್ನೂ ಓದಿ:‘ಕರೊನಾ ಭೀತಿಯಿಂದ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿಲ್ಲದವರಿಗೆ ಮತ್ತೊಂದು ಅವಕಾಶವಿಲ್ಲ’
ಕಳೆದ ಬಾರಿ ಅಮಿತ್​ ಷಾ ಅವರು ಪಶ್ಚಿಮ ಬಂಗಾಳ ಪ್ರವಾಸಕ್ಕೆ ತೆರಳಿದಾಗ, ಟಿಎಂಸಿಯ ಪ್ರಮುಖ ನಾಯಕ ಸುವೇಂದು ಅಧಿಕಾರಿ ಸೇರಿ ಆರು ಶಾಸಕರು ಮತ್ತು ಓರ್ವ ಸಂಸದ ಬಿಜೆಪಿ ಸೇರಿದ್ದರು. ಅದಾದ ನಂತರ ಸುಮಾರು 15 ಟಿಎಂಸಿ ಶಾಸಕರು ಮತ್ತು ಸಂಸದರು, ಮೂರು ಎಡಪಕ್ಷಗಳ ಶಾಸಕರು ಮತ್ತು ಮೂರು ಕಾಂಗ್ರೆಸ್​ ಶಾಸಕರು ಪಕ್ಷ ತೊರೆದಿದ್ದಾರೆ. ಈ ಬಾರಿ ಅಮಿತ್​ ಷಾ ಅವರು ರಾಜ್ಯಕ್ಕೆ ತೆರಳಿದಾಗ ಭಾರಿ ಸಂಖ್ಯೆಯ ನಾಯಕರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡಿವೆ. (ಏಜನ್ಸೀಸ್​)
ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
