ಕೋಲ್ಕತ:ಚುನಾವಣಾ ಫಲಿತಾಂಶ ಏನೇ ಬರಲಿ ಯಾವುದೇ ಕಾರಣಕ್ಕೂ ಸಂಭ್ರಮಾಚರಣೆ ಮಾಡಬಾರದು ಎಂಬ ನ್ಯಾಯಾಲಯದ ಸೂಚನೆ ನಡುವೆಯೂ ಕರೊನಾ ನಿಯಮಗಳನ್ನು ಗಾಳಿಗೆ ತೂರಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ಸದ್ಯದ ಟ್ರೆಂಡ್​ ಪ್ರಕಾರ ಪಶ್ವಿಮ ಬಂಗಾಳದಲ್ಲಿ ಟಿಎಂಸಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲು ಇಡುತ್ತಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ ಬೆಂಬಲಿಗರ ಸಂಭ್ರಮಾಚರಣೆ ಈಗಾಗಲೇ ಮುಗಿಲು ಮುಟ್ಟಿದೆ. ಕೋಲ್ಕತದ ಕಲಿಘಟ್​, ಅಸನ್ಸೋಲ್​ನಲ್ಲಿ ಟಿಎಂಸಿ ಬೆಂಬಲಿಗರು ಬೀದಿಗಳಿದು ಪಕ್ಷದ ಬಾವುಟ ಹಿಡಿದುಕೊಂಡು ಜೈಕಾರ ಕೂಗುತ್ತಿದ್ದಾರೆ.
ಆದರೆ, ದೇಶದಲ್ಲಿ ಕರೊನಾ ಎರಡನೇ ಅಲೆ ಬಿಕ್ಕಟ್ಟು ಸೃಷ್ಟಿಸಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ. ಅಲ್ಲದೆ, ನ್ಯಾಯಾಲಯವು ಸಹ ಆಚರಣೆ ಮಾಡದಂತೆ ಸೂಚಿಸಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಲು 147 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಸದ್ಯ ಟಿಎಂಸಿ 203 ಮತ್ತು ಬಿಜೆಪಿ 86 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದುವರೆಗೂ ಅಸ್ತಿತ್ವವೇ ಇರದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿ ಗಟ್ಟಿಯಾಗಿ ನಲೆಯೂರಿದ್ದು, ಟಿಎಂಸಿ ಟಕ್ಕರ್​ ಕೊಡುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣಾ ಫಲಿತಾಂಶದ ಭಾರೀ ನಿರೀಕ್ಷೆ ಇದೆ.(ಏಜೆನ್ಸೀಸ್​)
#WATCH| Celebrations by TMC supporters begin in Asansol as official trends show the party leading on 202 seats so far. The Election Commission has banned any victory procession amid the#COVID19situation in the country.#WestBengalElections2021pic.twitter.com/2sEtXI7mF6
— ANI (@ANI)May 2, 2021

#WATCHTMC supporters celebrate at Kalighat, Kolkata as party leads on 202 seats as per official trends#WestBengalElections2021pic.twitter.com/iiOyPhf8be
— ANI (@ANI)May 2, 2021

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
