ಕೋಲ್ಕತ್ತ:ಸಾಮಾಜಿಕ ಜಾಲತಾಣ ದೈತ್ ಫೇಸ್​ಬುಕ್​ ಮತ್ತು ಬಿಜೆಪಿ ನಡುವೆ ಲಿಂಕ್​ ಇದೆ ಎಂದು ತೃಣಮೂಲ ಕಾಂಗ್ರೆಸ್​ ಎಂಪಿ ಡೆರೆಕ್​ ಒ ಬ್ರಿಯನ್​ ಆರೋಪ ಮಾಡಿದ್ದಾರೆ. ಅಲ್ಲದೆ, ಫೇಸ್​ಬುಕ್​ ಸಿಇಒ ಝುಕರ್​ ಬರ್ಗ್​ ಅವರಿಗೂ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಇತ್ತೀಚೆಗೆ ಇಲ್ಲಿನ ಅನೇಕ ಫೇಸ್​ಬುಕ್​ ಖಾತೆಗಳು, ಪೇಜ್​​ಗಳು ಬ್ಲಾಕ್​ ಆಗಿವೆ. ಇದರಲ್ಲೂ ಬಿಜೆಪಿ ಕೈವಾಡ ಇದೆ ಎನ್ನಿಸುತ್ತಿದೆ ಎಂದಿದ್ದಾರೆ.ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಚೀನಾಗೆ ಮತ್ತೊಂದು ಶಾಕ್​: ಪಬ್​ಜಿ ಸೇರಿ 118 ಆ್ಯಪ್​ ಬ್ಯಾನ್​…!
ಕೆಲವು ವರ್ಷಗಳ ಹಿಂದೆಯೇ ನಾನು ಈ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದೆ. ಭಾರತದಲ್ಲಿ ಫೇಸ್​ಬುಕ್​ ನಿರ್ವಹಣೆಯಲ್ಲಿ ಪಾರದರ್ಶಕತೆ ಸಾಕಾಗುತ್ತಿಲ್ಲ ಎಂದೂ ಹೇಳಿದ್ದೆ. ತೃಣಮೂಲ ಕಾಂಗ್ರೆಸ್​ ಎಂಬುದು ಭಾರತದ ಎರಡನೇ ಅತಿದೊಡ್ಡ ಪ್ರತಿಪಕ್ಷ. ಕಳೆದ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆ ಫೇಸ್​ಬುಕ್​ ಬಿಜೆಪಿ ಪರ ಪ್ರಮುಖ ಪಾತ್ರ ವಹಿಸಿದೆ ಎಂಬುದು ನಮ್ಮ ಬಲವಾದ ಅಭಿಪ್ರಾಯ. ನಾವು ಈ ವಿಚಾರವನ್ನೂ ಜೂನ್​ನಲ್ಲಿ ಸಂಸತ್ತಿನಲ್ಲಿಯೂ ಪ್ರಸ್ತಾಪ ಮಾಡಿದ್ದೆವು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)
ಹಿಮಾಲಯದ ತಪ್ಪಲಿನಲ್ಲಿ ಕಾಳಿಂಗ ಸರ್ಪ ಪತ್ತೆ: ಸಂಶೋಧಕರಲ್ಲಿ ಮೂಡಿದೆ ಹಲವಾರು ಪ್ರಶ್ನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seventeen =
Remember me
