ಚೆನ್ನೈ:ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ನೇತೃತ್ವದ ಸರ್ಕಾರದ ಧೋರಣೆ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅಸಹನೆ ವ್ಯಕ್ತಪಡಿಸಿದ್ದಾರೆ.ವಿಧಾನಸಭೆ ಅಧಿವೇಶನ ಪ್ರಾರಂಭದ ದಿನ ನಿಗದಿಯಾಗಿದ್ದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ.
ಇದನ್ನೂ ಓದಿ:ಬಣ್ಣ ಬಣ್ಣದ ‘ಬಾಂಬೆ ಮಿಠಾಯಿ’ ಬಲು ಅಪಾಯಕಾರಿ: ಮಾರಾಟಕ್ಕೆ ನಿಷೇಧ ಹೇರಿದ ಪುದುಚೇರಿ ಸರ್ಕಾರ
#WATCH| Tamil Nadu Governor RN Ravi, who refused to read the address given by the government to him at the Legislative Assembly, leaves from the Assemblyhttps://t.co/9IvBmDvMp6pic.twitter.com/gYv8RjNmq7
— ANI (@ANI)February 12, 2024

ಕೆಲವೇ ಕ್ಷಣಗಳಲ್ಲಿ ಅವರು ತಮ್ಮ ಭಾಷಣವನ್ನು ಮುಗಿಸಿದ್ದಾರೆ. ಭಾಷಣದಲ್ಲಿನ ಹಲವು ಅಂಶಗಳನ್ನು ವಾಸ್ತವಿಕ ಮತ್ತು ನೈತಿಕ ಆಧಾರದಲ್ಲಿ ಒಪ್ಪಲು ಆಗಲ್ಲ. ಆದ್ದರಿಂದ ಭಾಷಣವನ್ನು ಓದಲ್ಲ ಎಂದು ಹೇಳಿದ್ದಾರೆ. ಇದು ಈಗ ವಿವಾದ ಸೃಷ್ಟಿಸಿದೆ. ಭಾಷಣ ಆರಂಭಕ್ಕೂ ಮುನ್ನ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಎಂಕೆ ರಾಷ್ಟ್ರಗೀತೆಯನ್ನು ಗೌರವಿಸುವುದಿಲ್ಲ ಎಂದು ಹೇಳಿದ್ದಾರೆ.
ಸೋಮವಾರದಿಂದ ತಮಿಳುನಾಡಿನಲ್ಲಿಯೂ ವಿಧಾನಸಭೆ ಅಧಿವೇಶನ ಶುರುವಾಗಿದ್ದು, ಸಾಂಪ್ರದಾಯಿಕವಾಗಿ ಸದನ ಆರಂಭಕ್ಕೂ ಮುನ್ನ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿರುವ ಸರ್ಕಾರದ ಸಾಧನೆ, ದಿಕ್ಸೂಚಿಯ ಭಾಷಣವನ್ನು ಮಾಡಬೇಕಿತ್ತು. ಆದರೆ, ತಮಿಳುನಾಡು ರಾಜ್ಯಪಾಲ ಆರ್‌ಎನ್‌ ರವಿ ಭಾಷಣವನ್ನು ಓದಲು ನಿರಾಕರಿಸಿದ್ದಾರೆ. ಈ ಭಾಷಣದಲ್ಲಿನ ಹಲವು ಅಂಶಗಳನ್ನು ವಾಸ್ತವಿಕ ಹಾಗೂ ನೈತಿಕ ನೆಲೆಗಟ್ಟಿನಲ್ಲಿ ನಾನು ಒಪ್ಪುವುದಿಲ್ಲ. ಈ ಭಾಷಣವನ್ನು ಓದಿದರೆ ನಾನು ಸಂವಿಧಾನದ ಅಪಹಾಸ್ಯ ಮಾಡಿದಂಗೆ ಆಗುತ್ತದೆ. ಆದ್ದರಿಂದ ಸದನಕ್ಕೆ ಗೌರವ ಕೊಟ್ಟು ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ ಎಂದು ರಾಜ್ಯಪಾಲ ಆರ್‌ಎನ್‌ ರವಿ ತಮ್ಮ ಭಾಷಣದಲ್ಲಿ ಹೇಳಿದರು.
ರಾಷ್ಟ್ರಗೀತೆಗೆ ಗೌರವ ನೀಡುವಂತೆ ಮತ್ತು ರಾಜ್ಯಪಾಲರ ಭಾಷಣದ ಆರಂಭ ಮತ್ತು ಅಂತ್ಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲು ಪದೇ ಪದೇ ಮನವಿ ಮಾಡಿದ್ದೆ. ಆದರೆ, ನನ್ನ ಮನವಿ ಹಾಗೂ ಸಲಹೆಯನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಪಾಲರು ಆರೋಪಿಸಿದರು. ಈ ಸದನವು ಜನರ ಒಳಿತಿಗಾಗಿ ಮತ್ತು ಉತ್ತಮ ಆರೋಗ್ಯಕರ ಚರ್ಚೆಯಾಗಲಿ ಎಂದು ಹಾರೈಸುತ್ತೇನೆ ಎಂದರು.
ಜೈ ತಮಿಳುನಾಡು, ಜೈ ಭಾರತ ಎಂದು ಭಾಷಣ ಮುಗಿಸಿದರು. ರಾಜ್ಯಪಾಲ ಆರ್‌ ಎನ್‌ ರವಿ ಭಾಷಣ ನಿಲ್ಲಿಸಿದ ಬಳಿಕ ಅಲ್ಲಿನ ಸ್ಪೀಕರ್‌ ಎಂ ಅಪ್ಪಾವು ಸದನವನ್ನು ಉದ್ದೇಶಿಸಿ ರಾಜ್ಯಪಾಲರ ಅನುಮೋದಿತ ಭಾಷಣದ ತಮಿಳು ಆವೃತ್ತಿಯನ್ನು ಓದಿದರು. ಇತ್ತೀಚೆಗೆ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೂಡ ತಮ್ಮ ಸಾಂಪ್ರದಾಯಿಕ ಭಾಷಣವನ್ನು ಒಂದೆರಡು ನಿಮಿಷಗಳಲ್ಲಿ ಮುಗಿಸಿದರು ಮತ್ತು ಕೊನೆಯ ಪ್ಯಾರಾಗ್ರಾಫ್ ಅನ್ನು ಮಾತ್ರ ಓದಿದರು ಎಂದು ವರದಿಯಾಗಿತ್ತು.
ದರ್ಶನ್ ಚಂದನವನ ಜರ್ನಿಗೆ 25 ವರ್ಷ: ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ಉತ್ಸವ! ಹೀಗಿದೆ ಕಾರ್ಯಕ್ರಮದ ವಿವರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 1 =
Remember me
