ನಾಗಪಟ್ಟಣಂ (ತಮಿಳುನಾಡು):ಎಷ್ಟೋ ಮಂದಿ ಅಗತ್ಯ ಇದ್ದೋ, ಇಲ್ಲದೆಯೋ ಒಟ್ಟಿನಲ್ಲಿ ಮೊಬೈಲ್​ ಫೋನ್​ನಲ್ಲಿ ಗೂಗಲ್​ ಮ್ಯಾಪ್​ ಡೌನ್​ಲೋಡ್​ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಗೊತ್ತಿಲ್ಲದ ಸ್ಥಳಗಳಿಗೆ ಓಡಾಟ ಮಾಡುವ ಅನಿವಾರ್ಯತೆ ಇರುವವರು, ಅಂಥ ಉದ್ಯೋಗಗಳಲ್ಲಿ ಕೆಲಸ ನಿರ್ವಹಿಸುತ್ತಾ ಇರುವವರು ಸಾಮಾನ್ಯವಾಗಿ ಈ ನಕ್ಷೆಯ ಮೊರೆ ಹೋಗುತ್ತಾರೆ.
ಆದರೆ ಗೂಗಲ್​ ಮ್ಯಾಪ್​ ಎಲ್ಲಾ ಸಂದರ್ಭಗಳಲ್ಲಿಯೂ ಸರಿಯಾದ ದಾರಿ ತೋರುವುದಿಲ್ಲ ಎಂದು ನಿಮ್ಮ ಗಮನಕ್ಕೂ ಬಂದಿರಲಿಕ್ಕೆ ಸಾಕು. ಒಂದು ಸ್ಥಳಕ್ಕೆ ಹೋಗಿ ಮುಂದೆ ದಾರಿಯನ್ನೇ ತೋರಿಸದೇ ನಿಲ್ಲುವುದು, ಹೋದ ಸ್ಥಳವನ್ನೇ ಪುನಃ ತೋರಿಸುವುದು ಹೀಗೆಲ್ಲಾ ಕಿತಾಪತಿ ಮಾಡುತ್ತಲೇ ಇರುತ್ತದೆ ಈ ನಕ್ಷೆ.
ಇದನ್ನೂ ಓದಿ:ಪಿಒಕೆ ಭಾರತದ್ದೇ ಎಂದು ಒಪ್ಪಿಕೊಂಡುಬಿಟ್ಟಿತಾ ಪಾಕ್​? ವೆಬ್​ಸೈಟ್​ನಲ್ಲಿ ಹಾಕೇ ಬಿಟ್ಟಿತು ಮಾಹಿತಿ!
ಅದೆಲ್ಲಾ ಸರಿ. ಆದರೆ ಇಲ್ಲೊಂದು ದಂಪತಿಯ ಕಥೆ ಮಾತ್ರ ಬಹಳ ವಿಭಿನ್ನವಾಗಿದ್ದು, ಗೂಗಲ್​ ಮ್ಯಾಪ್​ನಿಂದಾಗಿ ದಾಂಪತ್ಯ ಬಿರುಕು ಬಿಟ್ಟಿರುವ ಕಥೆ ಇದು!ಹೌದು. ಇದು ನಾಗಪಟ್ಟಣಂಜಿಲ್ಲೆಯ ಮಾಯಿಲಾಡುತುರೈನಲ್ಲಿ 49 ವರ್ಷದ ಪಿ. ಚಂದ್ರಶೇಖರ್​ ಅವರ ಕಥೆ. ಇವರು ಕೂಡ ಗೂಗಲ್ ಮ್ಯಾಪ್​ ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಫ್ಯಾನ್ಸಿ ಸ್ಟೋರ್​ ಇಟ್ಟುಕೊಂಡಿರುವ ಇವರು ಇದೇ ಗೂಗಲ್​ ಮ್ಯಾಪ್​ನಿಂದಾಗಿ ಇದೀಗ ಪೊಲೀಸ್​ ಠಾಣೆ ಮೆಟ್ಟಿಲು ಏರಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಇವರ ಹೆಂಡತಿಗೆ ಸದಾ ಗಂಡನ ಮೊಬೈಲ್​ ನೋಡುವ ಚಟ. ಅದೊಂದು ದಿನ ಅವರು ಗಂಡನ ಮೊಬೈಲ್​ ನೋಡಿದ್ದಾರೆ. ಅದರಲ್ಲಿ ಡೌನ್​ಲೋಡ್​ ಆಗಿರುವ ಗೂಗಲ್​ ಮ್ಯಾಪ್​ ಮೇಲೆ ಕಣ್ಣು ಹಾಯಿಸಿದ್ದಾರೆ. ಅಂಗಡಿ ಬಿಟ್ಟರೆ ಮನೆ ಮಾತ್ರ ಓಡಾಟ ನಡೆಸುವ ಚಂದ್ರಶೇಖರ್​, ನಿರಾತಂಕವಾಗಿ ಮೊಬೈಲ್​ ಕೊಟ್ಟಿದ್ದಾರೆ. ಆದರೆ ದುರದೃಷ್ಟ ಎಂದರೆ, ಗೂಗಲ್​ ಮ್ಯಾಪ್​ನಲ್ಲಿ​ ‘ನಿಮ್ಮ ಟೈಮ್‌ಲೈನ್’ ನೋಡಿದ ಹೆಂಡತಿ ಹೌಹಾರಿ ಹೋಗಿದ್ದಾಳೆ.
ಇದನ್ನೂ ಓದಿ:ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!
ಏಕೆಂದರೆ ಅದರಲ್ಲಿನ ಹಿಸ್ಟರಿ ನೋಡಿದಾಗ, ಗಂಡ ಯಾವ್ಯುದ್ಯಾವುದೋ ಸ್ಥಳಗಳಿಗೆ ಭೇಟಿ ನೀಡಿರುವ ಹಿಸ್ಟರ್​ ಇತ್ತು. ಚಂದ್ರಶೇಖರ್​ ಅವರು ಎಲ್ಲಿಯೂ ಭೇಟಿ ನೀಡದ, ಕೆಲವೊಂದು ಕೇಳದೇ ಇರುವ ಸ್ಥಳಗಳಿಗೂ ಭೇಟಿ ನೀಡಿರುವ ಬಗ್ಗೆ ಅದರಲ್ಲಿ ಮಾಹಿತಿ ಇತ್ತು. ಅಷ್ಟೇ… ಹೆಂಡತಿ ಕೆಂಡಾಮಂಡಲ ಆದರು. ತನಗೆ ತಿಳಿಯದೇ ಗಂಡ ಎಲ್ಲೆಲ್ಲೋ ಹೋಗುತ್ತಿರುವುದಾಗಿ ಕ್ಯಾತೆ ತೆಗೆದರು. ಗಂಡ ಎಷ್ಟೇ ಹೇಳಿದರೂ ಕೇಳದೇ ದಿನವೂ ರಂಪಾಟ ಮಾಡತೊಡಗಿದಳು ಹೆಂಡತಿ.
ಇದರಿಂದ ಬೇಸತ್ತ ಚಂದ್ರಶೇಖರ್​ ಅವರು ಇದೀಗ ಗೂಗಲ್​ ಮ್ಯಾಪ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ದಾಂಪತ್ಯದಲ್ಲಿ ಗೂಗಲ್​ ಮ್ಯಾಪ್​ನಿಂದಾಗಿ ಬಿರುಕು ಬಿಡುತ್ತಿದೆ. ದಿನವೂ ಮನೆಯಲ್ಲಿ ಕಲಹ. ನಾನು ಅಂಗಡಿ ಬಿಟ್ಟರೆ ಮನೆಗೆ ಅಷ್ಟೇ ಓಡಾಟ ಮಾಡುವುದು. ಅದರೆ ಇದರಲ್ಲಿ ಯಾವ್ಯಾವುದೋ ಸ್ಥಳಗಳನ್ನು ತೋರಿಸುತ್ತಿದೆ. ಇದರಿಂದ ನನ್ನ ಜೀವನದಲ್ಲಿ ನೆಮ್ಮದಿಯೇ ಇಲ್ಲದಾಗಿದೆ ಎಂದು ದೂರಿನಲ್ಲಿ ಹೇಳಿರುವ ಅವರು​, ಗೂಗಲ್​ ಕಂಪನಿ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಗೂಗಲ್​ ಕಂಪನಿ ವಿರುದ್ಧ ಎಫ್​ಐಆರ್​ ಸದ್ಯ ದಾಖಲು ಮಾಡಿಲ್ಲ. ಇದು ದಂಪತಿ ನಡುವಿನ ಕಲಹ ಆಗಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಕುಳ್ಳರಿಸಿ ಸಮಾಲೋಚನೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ಲಾಕ್​ಡೌನ್​ನಲ್ಲಿ ಆಶ್ರಯ ಕೋರಿ ಸ್ನೇಹಿತನ ಮನೆಗೆ ಬಂದ- ಅವನ ಪತ್ನಿಯ ನೋಡಿದ… ಮುಂದೆ ಎಲ್ಲವೂ ಅಲ್ಲೋಲ ಕಲ್ಲೋಲ…
.”
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 + 14 =
Remember me
