ಚೆನ್ನೈ:ತನ್ನ ಪತ್ನಿಯ ಜತೆ ಅನೈತಿಕ ಸಂಬಂಧ ಹೊಂದಿದ್ದವನ ತಲೆಯನ್ನು ತುಂಡರಿಸಿದ ಪತಿರಾಯನೊಬ್ಬ ಆ ತಲೆಯನ್ನು ಪತ್ನಿಯ ಮನೆಯ ಮುಂದೆಯೇ ಇಟ್ಟು ಬಂದಂತಹ ಭಯಾನಕ ಘಟನೆ ತಮಿಳುನಾಡಿನಲ್ಲಿ ಗುರುವಾರ ಸಂಜೆ ನಡೆದಿದೆ.
ವೇಲುಸ್ವಾಮಿ (32) ಮತ್ತು ಇಸಾಕಿಯಮ್ಮಾಳ್​ ದಂಪತಿ ತೆಂಕಾಸಿ ಜಿಲ್ಲೆಯ ಓಥುಮಲೈ ಬಳಿಯ ಗಿಮ್ಕುಲಂ ಗ್ರಾಮದ ನಿವಾಸಿಗಳು. ಅದೇ ಏರಿಯಾದ ಮುರುಗನ್​ (41) ಎಂಬಾತನ ಜತೆ ಇಸಾಕಿಯಮ್ಮಾಳ್​ ಪರಿಚಯವಾಗಿತ್ತು. ಇದೇ ಪರಿಚಯ ನಂತರದಲ್ಲಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಇಬ್ಬರ ಅನೈತಿಕ ಸಂಬಂಧ ಗಂಡ ವೇಲುಸ್ವಾಮಿಗೆ ತಿಳಿದು ಪತ್ನಿ ಇಸಾಕಿಯಮ್ಮಾಳ್​ಗೆ ಎಚ್ಚರಿಕೆ ನೀಡಿದ್ದ. ಆದರೆ, ಇದಕ್ಕೆ ಕ್ಯಾರೆ ಎನ್ನದ ಆಕೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು. ಬಳಿಕ ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಳಗ ನಡೆಯುತ್ತಿತ್ತು. ಇತ್ತೀಚೆಗೂ ಜಗಳ ನಡೆದು, ಇಸಾಕಿಯಮ್ಮಾಳ್​ ಗಂಡನ ಜತೆ ಮುನಿಸಿಕೊಂಡು ತೂತುಕುಡಿಯಲ್ಲಿರುವ ತವರು ಮನೆ ಸೇರಿದ್ದಳು.
ಇದನ್ನೂ ಓದಿ:ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಕಿವಿಮಾತು
ಇದರಿಂದ ಆಕ್ರೋಶಗೊಂಡ ವೇಲುಸ್ವಾಮಿ, ಮರುಗನ್​ ಹುಡುಕಿಕೊಂಡು ಹೋಗಿ ಆತನ ಜತೆ ಜಗಳವಾಡಿದ್ದಾನೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ತಾಳ್ಮೆ ಕಳೆದುಕೊಂಡ ವೇಲುಸ್ವಾಮಿ, ಚುಪಾದ ಆಯುಧದಿಂದ ಮುರುಗನ್​ ತಲೆಯನ್ನು ತುಂಡರಿಸಿದ್ದಾನೆ. ಬಳಿಕ ತಲೆಯ ಸಮೇತ ಪತ್ನಿಯ ಮನೆಗೆ ಹೋದ ವೇಲುಸ್ವಾಮಿ, ನೋಡು ನಾನು ನಿನ್ನ ಲವರ್​ ತಲೆಯನ್ನು ತಂದಿದ್ದೇನೆ ಎಂದು ಹೇಳಿದ್ದಾನೆ.
ಮುರುಗನ್​ ತಲೆಯನ್ನು ನೋಡಿ ಗಾಬರಿಗೊಂಡ ಪತ್ನಿ ಇಸಾಕಿಯಮ್ಮಾಳ್ ಹಾಗೂ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೇಲುಸ್ವಾಮಿಯನ್ನು ಬಂಧಿಸಿದ್ದಾರೆ. ಅಲ್ಲದೇ ಮುರುಗನ್ ಅವರ ತಲೆಯನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ, ಬಾಲಯನಕೋಟ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಘಟನೆ ಆ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ.(ಏಜೆನ್ಸೀಸ್​)
ಚಿಕ್ಕ ಮಗುವನ್ನು ಟಾರ್ಗೆಟ್​ ಮಾಡಲಾಗ್ತಿದೆ: ಸನಾತನ ವಿವಾದದ ಬಗ್ಗೆ ನಟ ಕಮಲ್​ ಹಾಸನ್​ ಪ್ರತಿಕ್ರಿಯೆ

ಕಾವೇರಿ ವಿವಾದ: ಕರ್ನಾಟಕ ಬಂದ್​ಗೆ ನಡೆದಿದೆ ಸಿದ್ಧತೆ, ಇಂದಿನ ಮಹತ್ವದ ಸಭೆಯಲ್ಲಿ ತೀರ್ಮಾನ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
