ನವದೆಹಲಿ:ಆಸ್ತಿಗಾಗಿ ಅಣ್ಣ-ತಮ್ಮ, ಅಪ್ಪ-ಅಮ್ಮ, ಸಂಬಂಧಿಕರನ್ನು, ದಾಯಾದಿಗಳನ್ನು ಕೊಂದು ಹಾಕಿದ ಉದಾಹರಣೆಗಳಿವೆ. ಆದರೆ ಇಲ್ಲಿ ಈ ದೇವಸ್ಥಾನದ ಜಾಗವನ್ನು ಕಬಳಿಸಲು ದೇವರನ್ನೇ ಕೊಂದು ಹಾಕಲಾಗಿದೆ. ದೇವರಾದ ರಾಮ-ಕೃಷ್ಣರ ಹೆಸರಿನಲ್ಲಿದ್ದ ಜಾಗವನ್ನು ಈ ವಂಚಕರು ‘ದೇವರು ಸತ್ತು ಹೋಗಿದ್ದಾರೆ’ ಎಂದು ಘೋಷಿಸಿ ತಮ್ಮಗಾಗಿಸಿಕೊಂಡಿದ್ದಾರೆ.ಉತ್ತರಪ್ರದೇಶದ ಲಕ್ನೋದ ಮೋಹನ್​ಲಾಲ್​ಗಂಜ್​ ಎಂಬಲ್ಲಿನ ಕೂಷ್ಮೌರ ಹಲುವಾಪುರ್ ಎಂಬ ಗ್ರಾಮದಲ್ಲಿನ ರಾಮಕೃಷ್ಣ ದೇವಸ್ಥಾನದ ಜಾಗವನ್ನು ವಂಚಕರು ತಮ್ಮದಾಗಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ.
ನೂರು ವರ್ಷ ಇತಿಹಾಸ ಉಳ್ಳ ಈ ದೇವಸ್ಥಾನ ಇಲ್ಲಿನ ದೇವರಾದ ರಾಮಕೃಷ್ಣರ ಹೆಸರಿನ ಟ್ರಸ್ಟ್​ನಿಂದಲೇ ನಿರ್ವಹಣೆ ಆಗುತ್ತಿತ್ತು. ಬಹಳ ಹಿಂದೆ ಗಯಾ ಪ್ರಸಾದ್ ಎಂಬ ವ್ಯಕ್ತಿ ತಾನು ರಾಮಕೃಷ್ಣರ ತಂದೆ ಎಂಬುದಾಗಿ ಟ್ರಸ್ಟ್​ ದಾಖಲೆಯಲ್ಲಿ ತನ್ನ ಹೆಸರನ್ನು ಸೇರಿಸಿದ್ದ. 1987ರಲ್ಲಿ ಕ್ರೋಢೀಕರಣ ಸಮಯದಲ್ಲಿ ರಾಮ-ಕೃಷ್ಣರೇ ಸತ್ತುಹೋಗಿದ್ದಾರೆಂದು ಘೋಷಿಸಿ, ಟ್ರಸ್ಟ್​ಅನ್ನು ಗಯಾ ಪ್ರಸಾದ್​ಗೆ ವರ್ಗಾಯಿಸಲಾಗಿತ್ತು. ನಂತರ 1991ರಲ್ಲಿ ಗಯಾ ಪ್ರಸಾದ್ ಸತ್ತು ಹೋಗಿದ್ದಾರೆ ಎಂದು ಘೋಷಿಸಿ ಆತನ ಸಹೋದರರಾದ ರಾಮ್​ನಾಥ್​ ಹಾಗೂ ಹರಿದ್ವಾರ್ ಅವರ ಹೆಸರಿಗೆ ಟ್ರಸ್ಟ್​ಅನ್ನು ವರ್ಗಾಯಿಸಲಾಗಿತ್ತು. ಆದರೆ 2016ರಲ್ಲಿ ದೇವಸ್ಥಾನದ ಅಸಲಿ ಟ್ರಸ್ಟೀ ಸುಶೀಲ್​ ಕುಮಾರ್​ ತ್ರಿಪಾಠಿ ಅವರು ನೈಬ್​ ತಹಸೀಲ್ದಾರ್ ಅವರಿಗೆ ಈ ವಿಷಯ ತಿಳಿಸಿ ಗಮನ ಸೆಳೆದಿದ್ದರು. ತಹಸೀಲ್ದಾರರ ಕಚೇರಿಯಿಂದ ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟರ್, ಆ ಬಳಿಕ ಉಪ ಮುಖ್ಯಮಂತ್ರಿ ಅವರ ಕಚೇರಿಗೂ ಈ ಕುರಿತ ದೂರು ಹೋದರೂ ಯಾವುದೇ ಕ್ರಮ ಜರುಗಿರಲಿಲ್ಲ.
ಇದನ್ನೂ ಓದಿ:ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…
ಡಿಸಿಎಂ ದಿನೇಶ್​ ಶರ್ಮಾ ಅವರು ಈ ಪ್ರಕರಣದ ತನಿಖೆ ನಡೆಸುವಂತೆ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ ಪ್ರಫುಲ್ಲ ತ್ರಿಪಾಠಿ ಅವರಿಗೆ ವಹಿಸಿದರು. ದೇವಸ್ಥಾನಕ್ಕೆ ಸೇರಿದ 0.73 ಹೆಕ್ಟೇರ್ ಜಾಗವನ್ನು ಕಬಳಿಸಲು ಯಾರೋ ಮೂಲ ಟ್ರಸ್ಟಿಯ ಹೆಸರಿನಲ್ಲಿ ದಾಖಲೆಗಳನ್ನು ಫೋರ್ಜರಿ ಮಾಡಿರುವುದು ಬೆಳಕಿಗೆ ಬಂದಿತ್ತು. ದೇವಸ್ಥಾನದ ಜಾಗ ದೇವರ ಹೆಸರಲ್ಲೇ ರಿಜಿಸ್ಟರ್ಡ್​ ಆಗಿದ್ದು, ದೇವಸ್ಥಾನದ ಜಾಗ ಗ್ರಾಮಸಭೆಯ ಬಂಜರು ಭೂಮಿ ಎನ್ನಲಾಗಿದೆ.ಇದೀಗ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. (ಏಜೆನ್ಸೀಸ್)
ವಿವಾದಿತ ಭೂಮಿಯ ರಾಮ ಮಂದಿರಕ್ಕೆ ದುಡ್ಡು ಕೊಡಲ್ಲ: ಸಿದ್ದರಾಮಯ್ಯ

ರಾಮ ಮಂದಿರ ನಿಧಿ ಸಂಗ್ರಹಕ್ಕೆ ಈ 11 ರ ಬಾಲೆ ನೀಡಿದ್ದು ಅಷ್ಟಿಷ್ಟು ಹಣವಲ್ಲ!

ರಾಮ ಮಂದಿರಕ್ಕೆ ಹಣ ಕೊಡದವರ ಮನೆ ಗುರುತು: ಎಚ್.​ಡಿ. ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ವಿಎಚ್​ಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
