ವಾಷಿಂಗ್ಟನ್:ಪ್ರಪಂಚದ ಅಷ್ಟೂ ಜನರು ಕರೊನಾ ಸೋಂಕಿನಿಂದಾಗುವ ಮರಣದಿಂದ ಪಾರಾಗಬೇಕೆಂದರೆ ದೊಡ್ಡಮಟ್ಟದಲ್ಲಿ ಮತ್ಸ್ಯಬಲಿ ಆಗಬೇಕಿದೆ. ಅಂದರೆ ಜಗತ್ತಿನಾದ್ಯಂತ ವಿತರಿಸುವಷ್ಟು ಕರೊನಾ ಔಷಧ ತಯಾರಿಸಲಿಕ್ಕಾಗಿ ಭಾರಿ ಪ್ರಮಾಣದಲ್ಲಿ ಶಾರ್ಕ್ ಮೀನುಗಳ ಸಂಹಾರ ನಡೆಯಲಿದೆಯಂತೆ. ಇದು ಕನಿಷ್ಠ 5 ಲಕ್ಷ ಶಾರ್ಕ್ ಮೀನುಗಳಿಗೆ ಡೆಡ್ಲಿ ಶಾಕ್​ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕರೊನಾ ಔಷಧಕ್ಕೆ ರೋಗ ನಿರೋಧಕ ಗುಣವಿರುವ ಶಾರ್ಕ್ ಮೀನಿನ ಎಣ್ಣೆಯನ್ನು (ಸ್ಕ್ವಾಲೀನ್) ಬಳಸಿಕೊಳ್ಳಲಾಗುತ್ತದೆ. ವಿಶ್ವದ ಪ್ರತಿಯೊಬ್ಬರಿಗೆ ಒಂದು ಡೋಸೇಜ್ ಔಷಧ ನೀಡುವುದಕ್ಕೆ ಅಂದಾಜು ಎರಡೂವರೆ ಲಕ್ಷ ಶಾರ್ಕ್ ಮೀನುಗಳ ಎಣ್ಣೆ ಬೇಕಾಗುತ್ತದೆ.
ಕರೊನಾ ಔಷಧವು ಎರಡು ಡೋಸೇಜ್‌ನಲ್ಲಿ ಬರುವ ಸಾಧ್ಯತೆ ಇರುವುದರಿಂದ ಒಟ್ಟು ಸುಮಾರು 5 ಲಕ್ಷ ಶಾರ್ಕ್ ಮೀನುಗಳ ಜೀವ ತೆಗೆಯಬೇಕಾಗಬಹುದು ಎಂದು ಕ್ಯಾಲಿಫೋರ್ನಿಯಾದ ಶಾರ್ಕ್ ಅಲೈಸ್ ಗ್ರೂಪ್ ತಿಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × one =
Remember me
