ಭಾರತೀಯ ಸೇನೆಯ ಪಾಲಿಗೆ ಜನವರಿ 15ಮಹತ್ವದ ಮತ್ತು ಸ್ಮರಣೀಯ ದಿನ. ಈ ವರ್ಷ 74ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಸೇವೆಗಾಗಿ ನಿಸ್ವಾರ್ಥ ಭಾವದೊಂದಿಗೆ ಕೆಲಸ ಮಾಡುತ್ತ, ಭ್ರಾತೃತ್ವದ ಮಾದರಿಯಾಗಿ ನಿಂತ ಯೋಧರನ್ನು ಈ ದಿನದಂದು ಸನ್ಮಾನಿಸಲಾಗುತ್ತದೆ. ಯೋಧರ ಹೊಸ ಅತ್ಯಾಧುನಿಕ ಸಮವಸ್ತ್ರವನ್ನು ಅನಾವರಣ ಗೊಳಿಸುವುದು ಈ ಸಲದ ವಿಶೇಷ. ಭಾರತೀಯ ಸೇನೆಯನ್ನು ಅಧಿಕೃತವಾಗಿ 1895ರ ಏಪ್ರಿಲ್ 1ರಂದು ಸ್ಥಾಪಿಸಲಾಗಿದೆ. 1947ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೆರಳುವಾಗ ಅಧಿಕಾರ ಹಸ್ತಾಂತರ ಮಾಡಿದ ನಂತರದಲ್ಲಿ ನಮ್ಮ ದೇಶದ ಹೊಸ ಅಧ್ಯಾಯ ಆರಂಭವಾಯಿತು. ವಿದೇಶಿ ಆಳ್ವಿಕೆಯಿಂದ ಮುಕ್ತವಾಗಿ ಸ್ವತಂತ್ರ ಆಳ್ವಿಕೆಗೆ ನಾಂದಿ ಹಾಡಿದ ವರ್ಷವದು. ಇದಾಗಿ ಎರಡು ವರ್ಷದ ಆಸುಪಾಸಿನಲ್ಲಿ ಭಾರತದ ಸೇನೆಗೆ ಮೊದಲ ಬಾರಿಗೆ ಮುಖ್ಯಸ್ಥನ ನೇಮಕವಾಯಿತು ಎಂಬುದು ಸೇನಾ ದಿನದ ಐತಿಹಾಸಿಕ ಹಿನ್ನೆಲೆ.
ಕ್ಯಾಮೊಫ್ಲೇಗ್ ಸಮವಸ್ತ್ರ:ಯೋಧರು ಈಗ ಧರಿಸುತ್ತಿರುವ ಸಮವಸ್ತ್ರಕ್ಕೆ ಸಂಪೂರ್ಣ ಭಿನ್ನವಾಗಿರುವಂಥದ್ದು ಈ ಕ್ಯಾಮೊಫ್ಲೇಗ್ ಸಮವಸ್ತ್ರ. ಭೂಮಿ ಮತ್ತು ಒಲಿವ್ ಸೇರಿ ವೈವಿಧ್ಯಮಯ ಬಣ್ಣ ಇದರ ವಿಶೇಷತೆ. ಭದ್ರತಾ ಕಾರಣಕ್ಕೆ ಈ ಬಟ್ಟೆ ಮತ್ತು ವಿನ್ಯಾಸದ ಉಡುಪುಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲ್ಲ.
ಜೈಸಲ್ಮೇರ್​ನಲ್ಲಿ ಬೃಹತ್ ರಾಷ್ಟ್ರಧ್ವಜ:ಜಮ್ಮು-ಕಾಶ್ಮೀರದ ಲೇಹ್, ಮುಂಬೈ ಬಳಿಕ ಜೈಸಲ್ಮೇರ್​ನಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ಜನವರಿ 15ರಂದು ಆರೋಹಣ ಮಾಡಲಾಗುತ್ತಿದೆ. ಜೈಸಲ್ಮೇರ್​ನ ಆರ್ವಿು ವಾರ್ ಮ್ಯೂಸಿಯಂನ ಬೆಟ್ಟ ತುದಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಖಾದಿ ಬಟ್ಟೆಯಲ್ಲಿ ಮಾಡಿದ ರಾಷ್ಟ್ರಧ್ವಜ 225 ಅಡಿ ಉದ್ದ, 150 ಅಡಿ ಅಗಲ ಮತ್ತು 1,000 ಕಿಲೋ ತೂಕವಿದೆ. 37,500 ಚದರ ಅಡಿ ಪ್ರದೇಶವನ್ನು ವ್ಯಾಪಿಸುವ ಗಾತ್ರ ಇದರದ್ದು. ಖಾದಿ ಗ್ರಾಮೋದ್ಯೋಗ ಇದನ್ನು ನಿರ್ವಿುಸಿದೆ.
ಜನವರಿ 15ರಂದೇ ಯಾಕೆ?:ಭಾರತದ ಸೇನೆಗೆ ಮೊಟ್ಟ ಮೊದಲ ಮುಖ್ಯಸ್ಥರ ನೇಮವಾಗಿದ್ದು 1949ರ ಜನವರಿ 15ರಂದು. ಇದು ಐತಿಹಾಸಿಕ ದಿನ. ಭಾರತೀಯ ಸೇನೆಯ ಅಧಿಕಾರ ಹಸ್ತಾಂತರ ನಡೆದ ಸಂದರ್ಭ. ಜನರಲ್ ಸರ್ ಫ್ರಾನ್ಸಿಸ್ ಬುಚರ್ ಭಾರತ ಸೇನೆಯ ಮುಖ್ಯಸ್ಥರ ಅಧಿಕಾರ ದಂಡವನ್ನು ಲೆಫ್ಟಿನೆಂಟ್ ಜನರಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದರು. ಈ ದಿನ ಐತಿಹಾಸಿಕವಾದ ಕಾರಣ ಪ್ರತಿವರ್ಷ ಜನವರಿ 15ನ್ನು ಸೇನಾ ದಿನವನ್ನಾಗಿ ಆಚರಿಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
