ನವದೆಹಲಿ:ಚಂದ್ರಯಾನ- 3 ಯೋಜನೆಯ ಭಾಗವಾಗಿ ವಿಕ್ರಮ ಲ್ಯಾಂಡರ್‍ ಇಂದು ಸಂಜೆ ಅಂದಾಜು 6 ಗಂಟೆಯ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದ್ದು ಇಡೀ ಜಗತ್ತೇ ತದೇಕಚಿತ್ತದಿಂದ ಗಮನಿಸುತ್ತಿದೆ. ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮೇಲೆ ಸಾಫ್ಟ್‍-ಲ್ಯಾಂಡಿಂಗ್ ಮಾಡತ್ತಿರುವ ನಾಲ್ಕನೇ ದೇಶವಾಗಿ ಇಂದು ಸಂಜೆ ಭಾರತ ಹೊರಹೊಮ್ಮಲಿದೆ.
ಇದನ್ನೂ ಓದಿ:ಬಾಹ್ಯಾಕಾಶದಿಂದ ಬಹು ಅವಕಾಶ: ಚಂದ್ರಯಾನ-3 ಪ್ರಯೋಜನ ಹಲವಾರು
ಜುಲೈ 14ರಂದು ಚಂದ್ರಯಾನ್ -3 ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು, ಚಂದ್ರಯಾನ- 2 ವಿಫಲವಾದ ನಂತರ ಮುಂದಿನ ಮಿಷನ್ ಮಾಡುವುದಾಗಿ ನಿರ್ಧರಿಸಲಾಗಿತ್ತು. ಆಗಸ್ಟ್ 5 ರಂದು, ಚಂದ್ರಯಾನ್ -3 ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಆಗಸ್ಟ್ 6,9,14 ಮತ್ತು 16ರಂದು, ಆರ್ಬಿಟ್ ರಿಡಕ್ಷನ್‍ ಮನ್ಯೂವರ್ಸ್ ನಡೆಸಲಾಗಿತ್ತು. ಅಂದರೆ ಮನಾಡ್ಯೂಲ್, ತನ್ನ ಕಕ್ಷೆಯನ್ನು ಸಣ್ಣದಾಗಿಸುತ್ತಾ ಚಂದ್ರನಿಗೆ ಸಮೀಪವಾಗುವ ಪ್ರಕ್ರಿಯೆ. ಆಗಸ್ಟ್ 17ರಂದು ರೋವರ್ ಮತ್ತು ಲ್ಯಾಂಡರ್ ಎರಡೂ ಮಾಡ್ಯೂಲ್‍ಗಳನ್ನು ಬೇರ್ಪಡಿಸಿದ್ದು ಅದಕ್ಕೂ ಮೊದಲು ಕಕ್ಷೆಯಿಂದ ಬೇರ್ಪಡಿಸುವ ಮನ್ಯೂವರ್ ನಡೆಸಲಾಯಿತು.
ಸಾಫ್ಟ್ ಲ್ಯಾಂಡಿಂಗ್ ಎಂದರೆ ಬಾಹ್ಯಾಕಾಶ ನೌಕೆ ನಿಯಂತ್ರಿತವಾಗಿ ಆಕಾಶಕಾಯಗಳ ಮೇಲ್ಮೈ ಮೇಲೆ ಇಳಿಯುವುದು. ಕಾರನ್ನು ನಿಧಾನವಾಗಿ ಬ್ರೇಕ್‍ ಹಾಕಿ ನಿಲ್ಲಿಸಿದ ಹಾಗೆ. ಆದರೆ ಈ ಕಾರ್ಯಾಚರಣೆ ಲಂಬವಾಗಿ ನಡೆಯುತ್ತದೆ. ವೇಗವು ಕ್ರಮೇಣ ಕಡಿಮೆಯಾಗುತ್ತಾ ಬಾಹ್ಯಾಕಾಶ ನೌಕೆ 0 ವೇಗದಲ್ಲಿ ಮೇಲ್ಮೈಯನ್ನು ಸ್ಪರ್ಶಿಸುತ್ತದೆ. ಹಾರ್ಡ್ ಲ್ಯಾಂಡಿಂಗ್ ಎಂದರೆ ನೇರವಾಗಿ ನೌಕೆ ಆಕಾಶಕಾಯದ ಮೇಲೆ ಅಪ್ಪಳಿಸುವುದು. ಇಲ್ಲಿ ಬಾಹ್ಯಾಕಾಶ ನೌಕೆ ಮೇಲ್ಮೈಗೆ ಬಡಿಯುತ್ತಿದ್ದಂತೆ ನಾಶವಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಮೃದುವಾಗಿ ಇಳಿಯುತ್ತಿದ್ದ ಚಂದ್ರಯಾನ್ 2 ಕೊನೇ ಕ್ಷಣದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ, ಇಸ್ರೋ ಮುಖ್ಯಸ್ಥ ಎಸ್ ಸೊಮನಾಥ್ ಏನೇ ನಡೆದರೂ ಸಾಫ್ಟ್ ಲ್ಯಾಂಡಿಂಗ್ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:Rambhapuri Shree Wishes Good Luck To Chandrayaan-3 | ಚಂದ್ರಯಾನ-3ಕ್ಕೆ ಶುಭಹಾರೈಸಿದ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು
ನೌಕೆಯ ಇಳಿಯುವಿಕೆಯ ವೇಗ ಪ್ರತಿ ಗಂಟೆಗೆ 1.68 ಕಿ.ಮೀ. ವೇಗದೊಂದಿಗೆ 30 ಕಿ.ಮೀ ಎತ್ತರದಿಂದ ಪ್ರಾರಂಭವಾಗಿದೆ. ಸಂಜೆಯ ಹೊತ್ತಿಗೆ, ಚಂದ್ರಯಾನ- 3ನ ಭಾಗವಾದ ವಿಕ್ರಮ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ತಲುಪುತ್ತದೆ. ಆಗ ವೇಗವನ್ನು ಶೂನ್ಯಕ್ಕೆ ಅಥವಾ 0ಗೆ ಇಳಿಸಲಾಗುತ್ತದೆ.
ಇಂದಿನ ಟಚ್ ಡೌನ್ ಅತ್ಯಂತ ನಿರ್ಣಾಯಕ ಭಾಗವಾಗಿದೆ. ಇದರ ಆಧಾರದ ಮೇಲೆಯೇ ಚಂದ್ರಯಾನ- 3 ಯೋಜನೆ ಯಶಸ್ವಿ ಆಗುತ್ತದೋ ಇಲ್ಲವೋ ಎನ್ನುವುದು ನಿರ್ಧರಿತವಾಗಿದೆ. ಅದಕ್ಕೂ ಮೊದಲು ನಮ್ಮ ನೌಕೆ ಚಂದ್ರನ ಮೇಲ್ಮೈಗೆ ಸಮತಲವಾಗಿ ಅಥವಾ ಹಾರಿಜಾಂಟಲ್‍ ಆಗಿದ್ದು, ಲಂಬವಾಗಿ ತಿರುಗಬೇಕಿದೆ. ಅಲ್ಲಿಯೇ ಚಂದ್ರಯಾನ್ 2 ಸಮಸ್ಯೆಯನ್ನು ಎದುರಿಸಿದ್ದು.
ಇದನ್ನೂ ಓದಿ:ಚಂದ್ರಯಾನ ಯಶಸ್ಸಿಗೆ ಮೈಸೂರಿನಲ್ಲಿ ಸರ್ವಸಿದ್ಧ ಯಾಗ
ರೋವರ್ ಚಂದ್ರನ ಮೇಲ್ಮೈಯಲ್ಲಿರುವ ಲ್ಯಾಂಡರ್ ಒಳಗಿನಿಂದ ಇಳಿಯುತ್ತದೆ. ರೋವರ್ ಚಂದ್ರನ ಮೇಲ್ಮೈಯನ್ನು ವಿಶ್ಲೇಷಿಸುತ್ತದೆ. ಭೂಮಿಯ ಮೇಲೆ 14 ದಿನಗಳು ಕಳೆದರೆ, ಚಂದ್ರನ ಮೇಲೆ ಸುಮಾರು ಒಂದು ದಿನ ಕಳೆಯುತ್ತದೆ. ಅಂದರೆ 14 ದಿನಗಳ ಕಾಲ ಲ್ಯಾಂಡರ್ ಮತ್ತು ರೋವರ್ ಜೀವಂತವಾಗಿರುತ್ತದೆ. ಆಗ ಅದು ಸುತ್ತಮುತ್ತಲಿನ ಪ್ರದೇಶಗಳನ್ನು ಅಧ್ಯಯನ ಮಾಡುತ್ತಾರೆ. 14 ದಿನಗಳ ನಂತರ ಏನಾಗುತ್ತದೆ ಎಂದು ಇನ್ನೂ ತಿಳಿದಿಲ್ಲ. ಕತ್ತಲು ಕಳೆದು ಬೆಳಕಾದ ಮೇಲೆ ರೋವರ್‍ಗೆ ಮತ್ತೊಮ್ಮೆ ಜೀವ ಬಂದರೂ ಬರಬಹುದು. ಇಸ್ರೊ ಅಧಿಕಾರಿಗಳು ಇನ್ನೂ ಈ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಇದನ್ನೂ ಓದಿ:ಚಂದ್ರಯಾನ-3: ಇಲ್ಲಿವೆ ನೋಡಿ ಚಂದ್ರನ ಲೇಟೆಸ್ಟ್​ ಫೋಟೋಗಳು!
ಒಂದು ಚಂದ್ರನ ದಿನವು ಚಂದ್ರನ ಮೇಲೆ ಸೂರ್ಯ ಇರುವವರೆಗೂ ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಚಂದ್ರನ ಮೇಲೆ ಸೂರ್ಯ ಮುಳುಗಿದಾಗ, ತಾಪಮಾನವು ಮೈನಸ್ 180 ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆಯಾಗುತ್ತದೆ. ಈ ಸಂದರ್ಭ ಬಾಹ್ಯಾಕಾಶ ನೌಕೆ ಆನ್‍ಲೈನ್‍ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಅದು 14 ದಿನಗಳ ನಂತರವೂ ಕಾರ್ಯ ನಿರ್ವಹಿಸಿದರೆ ಅದು ಇಸ್ರೋ ಮಾಡುವ ಮತ್ತೊಂದು ಸಾಧನೆಯಾಗಲಿದೆ.
ಇದನ್ನೂ ಓದಿ:ಚಂದ್ರನ ಮೇಲೆ ಲ್ಯಾಂಡ್​ ಆಗುವ ಮುನ್ನವೇ ತಮಿಳುನಾಡಿನ ನಾಮಕ್ಕಲ್​ ಮಣ್ಣಿನ ಮೇಲೆ ಚಂದ್ರಯಾನ 3 ನೌಕೆ ಇಳಿದಿತ್ತು!
ಈ ಬಾರಿ ಯಶಸ್ಸು ಭಾರತದ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ವಿಕ್ರಮ್ ಲ್ಯಾಂಡರ್ನ ಎಲ್ಲಾ ಎಂಜಿನ್‍ಗಳು, ಸಂವೇದಕಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೂ ತಮ್ಮ ಕಾರ್ಯ ನಿರ್ವಹಿಸಿ ಸಾಫ್ಟ್ ಲ್ಯಾಂಡಿಂಗ್‍ ಸಾಧ್ಯವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೊಮನಾಥ್ ಈ ಹಿಂದೆ ಹೇಳಿದ್ದರು.(ಏಜೆನ್ಸೀಸ್)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:14 − four =
Remember me
