|ಹರೀಶ್ ಬೇಲೂರುಬೆಂಗಳೂರು
ಹವಾಮಾನ ಬದಲಾವಣೆಯಿಂದ ಶತಮಾನದಿಂದಲೂ ಕಂಡು ಕೇಳರಿಯದಿದ್ದ ಜಲಪ್ರಳಯ ಕರ್ನಾಟಕ ಸೇರಿ ದೇಶದಲ್ಲಿ ಬಾಧಿಸುತ್ತಿದೆ. ಮಳೆಗಾಲದಲ್ಲಿ ಇಡೀ ಭಾರತವೇ ಪ್ರವಾಹದಿಂದ ತತ್ತರಿಸಿದೆ. ಮಳೆಯನ್ನೇ ಕಾಣದಿದ್ದ ಪ್ರದೇಶಗಳು ದ್ವೀಪಗಳಾಗಿ ಮಾರ್ಪಟ್ಟು, ಬರಡಾಗಿದ್ದ ಪ್ರದೇಶವು ನಿಂತ ನೀರಿನ ಹೊಂಡಗಳಾಗುತ್ತಿರುವುದು ಭವಿಷ್ಯದ ಬಗೆಗೆ ಆತಂಕ ಮೂಡಿಸಿದೆ.
ವರ್ಷದಿಂದ ವರ್ಷಕ್ಕೆ ಭೂ ಕುಸಿತ, ಭೂಕಂಪ, ಜ್ವಾಲಾಮುಖಿ, ಪ್ರವಾಹ, ಮೇಘ ಸ್ಪೋಟ, ಸುನಾಮಿ, ಗುಡುಗು-ಸಿಡಿಲು ಮತ್ತು ಚಂಡಮಾರುತದಿಂದ ಹೆಚ್ಚು ಹಾನಿಯಾಗುತ್ತಿದೆ. ಇದರಿಂದ ಸಾವಿರಾರು ಮಂದಿ ಸಾವನ್ನಪ್ಪಿರುವ ಜತೆಗೆ ಲಕ್ಷಾಂತರ ಪ್ರಾಣಿಗಳು ಬಲಿಯಾಗಿವೆ. ಪ್ರಕೃತಿ ವಿಕೋಪದಿಂದ ದೇಶದ ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರಿದೆ. ಆದ್ದರಿಂದ, ವಿಕೋಪ ತಡೆಗೆ ಸರ್ಕಾರಗಳು ಬಿಗಿ ಕ್ರಮಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಮನುಕುಲವೇ ನಾಶವಾಗುವ ಸಾಧ್ಯತೆ ಇದೆ. ವಿಶ್ವಸಂಸ್ಥೆಯ ಸಾಮಾನ್ಯಸಭೆ ನೀಡಿದ್ದ ಕರೆಯ ಮೇರೆಗೆ 1989ರಿಂದ ಪ್ರತಿ ವರ್ಷ ಈ ದಿನವನ್ನು ಪ್ರಕೃತಿ ವಿಕೋಪ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಗುಡುಗು-ಸಿಡಿಲು:1967ರಿಂದ 2012 ರವರೆಗೆ ನೈಸರ್ಗಿಕ ವಿಕೋಪಗಳಿಂದ ಸಂಭವಿಸಿದ ಸಾವುಗಳಲ್ಲಿ ಸಿಡಿಲುನಿಂದಲೇ ಶೇ. 39ಕ್ಕೂ ಹೆಚ್ಚು ಅನಾಹುತವಾಗಿದೆ. 2013ರಲ್ಲೇ ದೇಶದಲ್ಲಿ 2,850 ಮಂದಿ ಸಿಡಿಲು ಬಡಿದು ಹಾಗೂ 2014ರಲ್ಲಿ ಪ್ರಕೃತಿ ವಿಕೋಪದಿಂದ 2,600 ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಕರ್ನಾಟಕಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಸಿಡಿಲಿಗೆ ಹೆಚ್ಚು ಜನ ಬಲಿಯಾಗುತ್ತಿದ್ದಾರೆ. ದೇಶದ ಒಟ್ಟು ಸಾವುಗಳ ಪೈಕಿ ಸಿಡಿಲಿನಿಂದ ಶೇ. 96 ಹೊಲಗಳಲ್ಲಿ ಕೆಲಸ ಮಾಡುತ್ತಿರುವವರು ಪ್ರಾಣ ಕಳೆದುಕೊಂಡಿದ್ದಾರೆ.
ಹಲವು ಚಂಡಮಾರುತ:ಪ್ರತಿವರ್ಷ ಪ್ರಪಂಚದಾದ್ಯಂತ 80 ಚಂಡಮಾರುತಗಳು ರೂಪುಗೊಳ್ಳುತ್ತವೆ. 2011ರಿಂದ 2020ರವರೆಗೆ ರಾಜ್ಯದಲ್ಲಿ 25 ಬಾರಿ ಅರಬ್ಬಿ ಸಮುದ್ರದಲ್ಲಿ ಹಾಗೂ 15 ಬಾರಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿವೆ. ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ 26 ಬಾರಿ ಸೈಕ್ಲೋನ್ ಉಂಟಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು 32 ಕೋಟಿ ಜನರು ಸೈಕ್ಲೋನ್ ಸಂಬಂಧಿತ ಅಪಾಯಗಳಿಗೆ ತುತ್ತಾಗುತ್ತಿದ್ದಾರೆ.
ಪ್ರವಾಹ-ಮೇಘಸ್ಪೋಟ:ಹವಾಮಾನ ವೈಪರಿತ್ಯದಿಂದ ಪ್ರವಾಹ ಮತ್ತು ಮೇಘಸ್ಪೋಟ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಭವಿಸುತ್ತಿವೆ. ಒಂದು ಗಂಟೆ ಅವಧಿಯಲ್ಲಿ ಅಂದಾಜು 100 ಮಿಮೀವರೆಗೆ ಮಳೆಯಾಗುತ್ತಿದೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿದೆ.
ಭೂಕಂಪ ರಾಜ್ಯ ಸೇಫ್:ಭೂಮಿಯ ಸ್ತರ ಭಂಗಗಳ ಘರ್ಷಣೆ, ಭೂ ಚಿಪು್ಪಗಳ (ಕ್ರಸ್ಟಲ್ ಪ್ಲೇಟ್ಸ್) ಸರಿದಾಡುವಿಕೆಯು ಭೂಕಂಪಕ್ಕೆ ಕಾರಣ. ಭೂಕಂಪದಿಂದ ಕರ್ನಾಟಕ ಸುರಕ್ಷಿತ ರಾಜ್ಯವಾಗಿದೆ. ವಲಯ 2ಕ್ಕೆ ಬರುವ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಕಡಿಮೆ ಇದೆ. ಕರಾವಳಿಯ ಕೆಲ ಪ್ರದೇಶಗಳು, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಪ್ರದೇಶಗಳು ವಲಯ 3ಕ್ಕೆ ಬಂದರೂ ತೀವ್ರತರ ಭೂಕಂಪ ಉಂಟಾಗುವ ಸಾಧ್ಯತೆ ವಿರಳ.
ಭೂಕುಸಿತ ಈಗ ಸಾಮಾನ್ಯ:ಸಮುದ್ರ ದಡ, ಬೆಟ್ಟ ಮತ್ತು ಗುಡ್ಡಗಳಲ್ಲಿ ಭೂಕುಸಿತ ಸಾಮಾನ್ಯವಾಗಿದೆ. ಬಂಡೆ ಉರುಳುವುದು, ಪ್ರಪಾತ ಇನ್ನಷ್ಟು ಆಳವಾಗುವುದು ಮತ್ತು ಬಂಡೆ ಚೂರುಗಳು ಬೀಳುವುದರಿಂದ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿದೆ. ಗುರುತ್ವ ಚಲನೆಯು ಮೂಲವಾಗಿ ಭೂಕುಸಿತ ಉಂಟು ಮಾಡುವ ಕ್ರಿಯಾಶಕ್ತಿಯಾಗಿದ್ದರೂ, ಇತರ ಅಂಶಗಳು ಕೂಡ ಭೂಕುಸಿತಕ್ಕೆ ಕಾರಣವಾಗಿವೆ.
3 ತಿಂಗಳಲ್ಲಿ 12,319 ಕೋಟಿ ರೂ. ನಷ್ಟ:ಜೂ.1ರಿಂದ ಅ.12ರವರೆಗೆ ರಾಜ್ಯಾದ್ಯಂತ ಸಿಡಿಲು, ಮರ, ಮನೆ, ಪ್ರವಾಹ, ಭೂಕುಸಿತದಿಂದ 147 ಮಂದಿ ಹಾಗೂ 1,289 ಪ್ರಾಣಿಗಳು ಅಸುನೀಗಿದ್ದಾರೆ. 27,649 ಕಿ.ಮೀ. ರಸ್ತೆಗಳು ಹಾಳಾಗಿವೆ. 8,91,187 ಹೆ.ನಲ್ಲಿ ಬೆಳೆದ ಕೃಷಿ ಬೆಳೆ, 1.03 ಲಕ್ಷ ಹೆ. ತೋಟಗಾರಿಕೆ ಬೆಳೆ ಹಾಗೂ 45,465 ಮನೆಗಳಿಗೆೆ ಹಾನಿಯಾಗಿದೆ. ಒಟ್ಟಾರೆ ಪ್ರಕೃತಿ ವಿಕೋಪದಿಂದ 3 ತಿಂಗಳಲ್ಲಿ 12,319 ಕೋಟಿ ರೂ. ನಷ್ಟವಾಗಿದೆ.
ಅಂದಿನ ಪರಿಸ್ಥಿತಿಯೇ ಬೇರೆ, ಈಗ ಹಾಗಿಲ್ಲ: ಯಕ್ಷಗಾನಕ್ಕೆ ಕಾಲಮಿತಿ ಒಳಿತು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 20 =
Remember me
