ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ ಮೂವ್​ವೆುಂಟ್) ಒಂದು ವಿಶಿಷ್ಟ ಅಧ್ಯಾಯ. ಈ ಚಳವಳಿಯಿಂದಾಗಿ ಬ್ರಿಟಿಷ್ ಆಡಳಿತ ಒಂದು ವರ್ಷಕ್ಕೂ ಹೆಚ್ಚು ಕಾಲ ತತ್ತರಿಸಿತು.
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಶುರುವಾದ ಹಿನ್ನೆಲೆ ವಿಶಿಷ್ಟ. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆಗೆ ಬ್ರಿಟಿಷರು ತತ್ತರಿಸಿದ್ದರು. ಎರಡನೇ ವಿಶ್ವಯುದ್ಧದಲ್ಲಿ ಬ್ರಿಟನ್ (ಇಂಗ್ಲೆಂಡ್) ಪರ ಹೋರಾಡಲು ಭಾರತ ನಿರಾಕರಿಸಿತ್ತು. ಆಗ ಭಾರತೀಯರ ಬೆಂಬಲ ಹಾಗೂ ಸಹಕಾರ ಪಡೆಯಲು ಬ್ರಿಟನ್ ಪ್ರಧಾನಿ ವಿನ್​ಸ್ಟನ್ ರ್ಚಚಿಲ್ 1942ರ ಮಾರ್ಚ್​ನಲ್ಲಿ ಕ್ರಿಪ್ಸ್ ಆಯೋಗ ರಚಿಸಿದ್ದರು. ಕ್ರಿಪ್ಸ್ ಭಾರತಕ್ಕೆ ಬಂದು ನಾಯಕರೊಂದಿಗೆ ಮಾತುಕತೆ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಬಾಂಬೆಯ ಗೊವಾಳಿ ಮೈದಾನದಲ್ಲಿ (ಈಗಿನ ಮುಂಬೈ) ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ 1942ರ ಆಗಸ್ಟ್ 8ರ ಸಂಜೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೊಷಣೆ ಹೊರಟಿತು. ಈ ಹೋರಾಟವನ್ನು ‘ಮಾಡು ಇಲ್ಲವೆ ಮಡಿ’ (ಡು ಆರ್ ಡೈ) ಆಗಿ ಸ್ವೀಕರಿಸುವಂತೆ ಗಾಂಧೀಜಿ ಕರೆ ನೀಡಿದರು. ಮರುದಿನವೇ ಗಾಂಧೀಜಿ ಸೇರಿದಂತೆ ಕಾಂಗ್ರೆಸ್​ನ ಪ್ರಮುಖ ನಾಯಕರ ಬಂಧನವಾಯಿತು. ಆದರೆ ಜನಸಾಮಾನ್ಯರ ಭಾಗವಹಿಸುವಿಕೆಯಿಂದ ಹೋರಾಟದ ಕಿಚ್ಚು ಹೆಚ್ಚುತ್ತಲೇ ಹೋಯಿತು.
ಎಲ್ಲ ಕಡೆಗಳಲ್ಲಿ ಜನರು ಸರ್ಕಾರಿ ಕಚೇರಿಗಳ ಧ್ವಂಸ, ಲೂಟಿಯಲ್ಲಿ ತೊಡಗಿದರು. ವಿದ್ಯಾರ್ಥಿಗಳು, ಕಾರ್ವಿುಕರು ಕೂಡ ಹೋರಾಟದ ಕಣಕ್ಕೆ ಧುಮುಕಿದರು. ಹಲವು ಕಡೆಗಳಲ್ಲಿ ಪರ್ಯಾಯ ಸರ್ಕಾರಗಳನ್ನು ಸ್ಥಾಪಿಸಿ, ಕೆಲ ಕಾಲ ಕಾರ್ಯಾಚರಿಸಲಾಯಿತು. ನೇತಾಜಿ ಸುಭಾಷ್​ಚಂದ್ರ ಬೋಸ್ ಅವರು ‘ಆಜಾದ್ ಹಿಂದ್ ಫೌಜ್’ಗೆ ‘ದಿಲ್ಲಿ ಚಲೋ’ ಕರೆಕೊಟ್ಟರು. ಇದರಿಂದ ಹೋರಾಟಕ್ಕೆ ಮತ್ತಷ್ಟು ಶಕ್ತಿ ಲಭಿಸಿತು. ಆಂದೋಲನ ದೇಶವ್ಯಾಪಿ ವಿಸ್ತರಿಸುತ್ತಿದ್ದಂತೆ ಬ್ರಿಟಿಷರು ದೌರ್ಜನ್ಯವನ್ನು ತೀವ್ರಗೊಳಿಸಿದರು. ಕಾಂಗ್ರೆಸ್​ನ್ನು ‘ಕಾನೂನುವಿರೋಧಿ ಸಂಸ್ಥೆ’ ಎಂದು ಘೊಷಿಸಲಾಯಿತು. ಬ್ರಿಟಿಷ್ ಸರ್ಕಾರ ಚಳವಳಿ ಹತ್ತಿಕ್ಕಲು ಕಂಡಲ್ಲೆಲ್ಲ ಬಲಪ್ರಯೋಗಕ್ಕೆ ಮುಂದಾಯಿತು. ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಈ ಚಳವಳಿಯಲ್ಲಿ 942 ಜನ ಮೃತಪಟ್ಟರು (ಅನಧಿಕೃತ ಮೂಲಗಳ ಪ್ರಕಾರ ಮೃತರ ಸಂಖ್ಯೆ 10 ಸಾವಿರಕ್ಕಿಂತಲೂ ಹೆಚ್ಚು). 1,630 ಜನರು ತೀವ್ರವಾಗಿ ಗಾಯಗೊಂಡರು. 18 ಸಾವಿರ ಜನರನ್ನು ಗೃಹಬಂಧನದಲ್ಲಿ ಇರಿಸಲಾದರೆ, 60,229 ಜನರನ್ನು ಬಂಧಿಸಲಾಯಿತು. ಅಂತೂ ಈ ಹೋರಾಟ ತಹಬಂದಿಗೆ ಬಂದಿತಾದರೂ ಬ್ರಿಟಿಷರು ಕಂಗಾಲಾಗಿದ್ದಂತೂ ಖರೆ.
ಚಳವಳಿ ವಿಶೇಷ: ಯುವಕರು, ರೈತರು, ವರ್ತಕರು, ಶಿಕ್ಷಕರು, ಕಾರ್ವಿುಕರು, ವೈದ್ಯರು ಹೀಗೆ ಸಮಾಜದ ಎಲ್ಲ ಜನವರ್ಗಗಳು ಭಾಗವಹಿಸಿದ ಹೋರಾಟ ಇದಾಗಿತ್ತು. ಸರ್ಕಾರಿ ನೌಕರಿಯಲ್ಲಿದ್ದ ಭಾರತೀಯರಲ್ಲಿ ಕೆಲವರು ಸರ್ಕಾರದಲ್ಲಿದ್ದುಕೊಂಡೇ ಹೋರಾಡಿದರೆ, ಕೆಲವರು ಕೆಲಸಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಧುಮುಕಿದರು. ಕಾಂಗ್ರೆಸ್ ಮೊದಲಬಾರಿ ‘ಕೂಡಲೇ ಸ್ವಾತಂತ್ರ್ಯ ನೀಡಿ’ ಎಂದು ಒತ್ತಾಯಿಸಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
