| ಜಯಂತ ಕೆ.ಎಸ್.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ 2008 ರಿಂದ ಅಕ್ಟೋಬರ್ 15ನ್ನು ವಿಶ್ವ ಕೈ ತೊಳೆಯುವ ದಿನವಾಗಿ ಆಚರಿಸಲಾಗುತ್ತಿದೆ. ‘ಎಲ್ಲರಿಗೂ ಕೈ ನೈರ್ಮಲ್ಯ’- ಇದು 2020ರ ಘೋಷವಾಕ್ಯ. ಕೈ ತೊಳೆಯುವುದಕ್ಕೆ ಇಷ್ಟೊಂದು ಮಹತ್ವ ಏಕೆ? ಮಾನವನಿಗೆ ಬರುವ ಹಲವು ಕಾಯಿಲೆಗಳಿಗೆ ಸ್ವಚ್ಛವಾಗಿರದ ನಮ್ಮ ಕೈಗಳು ಕಾರಣ ಎಂಬುದು ಹಲವರಿಗೆ ತಿಳಿದಿಲ್ಲ. ವಿಶೇಷವಾಗಿ ಮನುಷ್ಯನ ಕರುಳಿನ ಸೋಂಕಿಗೆ ಕಾರಣವಾಗುವುದು ನಮ್ಮ ಕೈಯಲ್ಲಿರುವ ವೈರಾಣುಗಳು ದೇಹ ಸೇರುವುದರಿಂದ. ನಾವು ನಿಮಿಷವೊಂದಕ್ಕೆ ಕನಿಷ್ಠ ಹತ್ತು ಬಾರಿ ಕೈಯಿಂದ ಮೂಗು, ಬಾಯಿ, ಕಣ್ಣುಗಳನ್ನು ನಮಗೆ ಅರಿವಿಲ್ಲದಂತೆ ಮುಟ್ಟಿಕೊಳ್ಳುತ್ತೇವೆ. ಇದರ ಪರಿಣಾಮವಾಗಿ ಕೈಯಲ್ಲಿರುವ ರೋಗಾಣುಗಳು ದೇಹ ಸೇರಿ ಹಲವು ಸೋಂಕಿಗೆ ಕಾರಣವಾಗುತ್ತವೆ. ನಮ್ಮ ಚರ್ಮದ ಒಂದು ಚದರ ಸೆಂಟಿಮೀಟರಲ್ಲಿ ಸುಮಾರು 1,500 ಬಾಕ್ಟೀರಿಯಾಗಳು ಜೀವಿಸಿರುತ್ತವೆ. ಹದಿನೈದು ಸೆಕೆಂಡುಗಳ ಕಾಲ ಸೋಪಿನಿಂದ ಕೈ ತೊಳೆದರೆ ಶೇಕಡ 90 ರಷ್ಟು ಬ್ಯಾಕ್ಟೀರಿಯಾಗಳು ಸಾಯುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಕೈ ತೊಳೆಯುವ ದಿನ ಆಚರಿಸಲಾಗುತ್ತದೆ.
ಕೈ ತೊಳೆಯುವುದು ಹಾಗೂ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬುದು ಈಗ ರೂಢಿಗೆ ಬಂದಿರುವುದಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆಗೆ ಯಾರಾದರೂ ಹೊರಗಡೆಯಿಂದ ಬಂದಲ್ಲಿ ಕೈ ಕಾಲು ತೊಳೆದುಕೊಳ್ಳಲು ನೀರು ಕೊಡುವ ಪದ್ಧತಿ ಜಾರಿಯಲ್ಲಿತ್ತು. ಕರೊನಾ ಇದನ್ನೆಲ್ಲ ನೆನಪಿಸಿ ಈ ಹಿಂದಿನ ರೂಢಿಯನ್ನು ಮತ್ತೆ ಅನುಷ್ಠಾನಕ್ಕೆ ತರುವಂತೆ ಮಾಡುತ್ತಿದೆ.
ಕರೊನಾಕ್ಕೆ ಸದ್ಯ ಔಷಧ ಇಲ್ಲ ಹಾಗೂ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಮಿಕ ರೋಗ. ಪದೇಪದೆ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಕೋವಿಡ್ ಹರಡುವಿಕೆ ತಡೆಗಟ್ಟಲು ಸದ್ಯಕ್ಕೆ ನಮಗಿರುವ ವ್ಯಾಕ್ಸಿನ್ ಎಂಬುದು ತಜ್ಞರ ಅಭಿಪ್ರಾಯ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನೇ ಹೇಳುತ್ತಿದೆ. ಸಾಬೂನಿನಿಂದ ಕೈ ತೊಳೆದುಕೊಳ್ಳುವುದು ಇಂದಿನ ಪ್ರಮುಖ ಅಂತಾರಾಷ್ಟ್ರೀಯ ಆದ್ಯತೆಯಾಗಬೇಕು. ಸ್ವಂತ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ ಮತ್ತು ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರುತ್ತದೆ. ಸಮುದಾಯದಲ್ಲಿ ಪ್ರತಿಯೊಬ್ಬರೂ ಸಾಬೂನಿನಿಂದ ಕೈ ತೊಳೆದುಕೊಂಡು ತಮ್ಮ ಆರೋಗ್ಯ ಹಾಗೂ ಇತರರ ಆರೋಗ್ಯ ಕಾಪಾಡಲು ಪಣ ತೊಡಬೇಕು.
ಪ್ರತಿಯೊಬ್ಬರು ದಿನದಲ್ಲಿ 6-10 ಬಾರಿ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ವಿಶ್ವವಿದ್ಯಾಲಯವೊಂದು ಸಂಶೋಧನೆಯಿಂದ ಕಂಡುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಪ್ರಕಾರ ಆರು ಹಂತಗಳಲ್ಲಿ ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವುದರಿಂದ ಕರೊನಾ ಮಾತ್ರವಲ್ಲ, ಯಾವುದೇ ವೈರಾಣುಗಳು ನಮ್ಮ ಕೈ ಮೂಲಕ ದೇಹದೊಳಗೆ ಪ್ರವೇಶ ಮಾಡದಂತೆ ತಡೆಗಟ್ಟಬಹುದಾಗಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ ಬಗ್ಗೆ ಹಲವು ವರ್ಷಗಳಿಂದ ಜಾಗೃತಿ ಮೂಡಿಸಿದ್ದರ ಪರಿಣಾಮವಾಗಿ ಮಕ್ಕಳು ಆರು ಹಂತಗಳಲ್ಲಿ ತಾವು ಕೈ ತೊಳೆದುಕೊಳ್ಳುವುದಲ್ಲದೇ ಸಮುದಾಯದಲ್ಲೂ ಈ ಜಾಗೃತಿ ಮೂಡಿಸುವಲ್ಲಿ ತೊಡಗಿದ್ದಾರೆ. ಪದೇಪದೆ ಕೈಯಿಂದ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದೆಂಬ ಅರಿವು ಮೂಡಿಸುತ್ತಿದ್ದಾರೆ.
(ಲೇಖಕರು ಸಾಮಾಜಿಕ ಕಾರ್ಯಕರ್ತರು)
ಗಂಡನಿಗೆ ನನ್ನ ಬಗ್ಗೆ ಆಸಕ್ತಿಯೇ ಇಲ್ಲ… ಏನು ಮಾಡಲಿ?

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:2 + nine =
Remember me
