ನವದೆಹಲಿ:2020ರಲ್ಲಿ ಸಂಭವಿಸಲಿರುವ ನಾಲ್ಕು ಚಂದ್ರಗ್ರಹಣಗಳಲ್ಲಿ ಎರಡನೇ ಗ್ರಹಣ ಶುಕ್ರವಾರ (ಜೂ.5) ರಾತ್ರಿ ಜರುಗಲಿದೆ.
ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಜನವರಿಯಲ್ಲಿ ಸಂಭವಿಸಿದೆ. ಜೂ. 5ರ ಗ್ರಹಣ ಪೂರ್ಣ ಭಿನ್ನವಾಗಿರಲಿದ್ದು, ಚಂದ್ರ ತನ್ನ ಅರ್ಧಾಕಾರದಲ್ಲಿ ಕಾಣದೇ ಪೂರ್ಣ ಪ್ರಮಾಣದಲ್ಲೇ ಗೋಚರಿಸಲಿದ್ದಾನೆ.
ಇದನ್ನೂ ಓದಿರಿಕರೊನಾಗೆ ಪತ್ನಿ ಬಲಿ, ಐಸೋಲೇಶನ್​ನಲ್ಲಿ ಪತಿ
ಇದಕ್ಕೆ ನೆರಳು (ಪೆನಂಬ್ರಲ್) ಚಂದ್ರಗ್ರಹಣ ಎನ್ನಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಗ್ರಹಣ ಗೋಚರವಾಗಲಿದ್ದು, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ 11.15ಕ್ಕೆ ಗ್ರಹಣ ಆರಂಭವಾಗಲಿದ್ದು, ಶನಿವಾರ ಬೆಳಗಿನ ಜಾವ 2.34ಕ್ಕೆ ಅಂತ್ಯವಾಗಲಿದೆ. ಅಂದರೆ ಸುಮಾರು 3.18 ತಾಸು ಗ್ರಹಣ ನಡೆಯಲಿದ್ದು, ರಾತ್ರಿ 12.45ರ ಸುಮಾರಿಗೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರವಾಗಲಿದೆ.
ಇದನ್ನೂ ಓದಿರಿಜೈಲು ಸಿಬ್ಬಂದಿಗೆ ಕರೊನಾ ಪಾಸಿಟಿವ್​.. ಇದು ಪಾದರಾಯನಪುರ ವರಪ್ರಸಾದ ?
ಹವಾಮಾನ ಪರಿಸ್ಥಿತಿ ತಿಳಿಯಾಗಿದ್ದರೆ ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್‌ಗಳ ಸಹಾಯವಿಲ್ಲದೇ ಗ್ರಹಣವನ್ನು ವೀಕ್ಷಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಜೂನ್ ಮತ್ತು ಜುಲೈನ ಮಧ್ಯದ ಒಂದು ತಿಂಗಳ ಅವಧಿಯಲ್ಲಿ ಈ ಬಾರಿ ಒಟ್ಟು ಮೂರು ಗ್ರಹಣಗಳು ಸಂಭವಿಸಲಿವೆ.
ಇವತ್ತಿನ ಗ್ರಹಣ ಇದರಲ್ಲಿ ಮೊದಲನೆಯದಾಗಿದ್ದು, ಜೂನ್ 21ಕ್ಕೆ ಸೂರ್ಯ ಗ್ರಹಣ ಸಂಭವಿಸಲಿದೆ. ನಂತರ ಜುಲೈ 5ರಂದು ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. ಜೂನ್ 21ರಂದು ನಡೆಯುವ ಸೂರ್ಯ ಗ್ರಹಣ ಆಫ್ರಿಕಾ, ಆಗ್ನೇಯ ಯುರೋಪ್ ಮತ್ತು ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಗೋಚರಿಸಲಿದೆ.
ಇದನ್ನೂ ಓದಿರಿಇನ್ಮುಂದೆ ನರೇಗಾದಡಿ ಸಿಗಲಿದೆ 150 ದಿನ ಕೆಲಸ.. ಕೂಲಿದರ ಹೆಚ್ಚಳ ಸಾಧ್ಯತೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
