ನೋಯ್ಡಾ: ಗೌರ್​ ಸಿಟಿ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಹೆಣ್ಣುಮಗು 25 ಅಡಿ ಆಳದ ಗಟಾರಕ್ಕೆ ಬಿದ್ದಾಗ ತುರ್ತುಸೇವೆ 112ರ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
ಇದನ್ನೂ ಓದಿ:ತರಕಾರಿ, ಸೊಪ್ಪು ದುಪ್ಪಟ್ಟು ಬೆಲೆಗೆ ಮಾರಾಟ: ಸುಲಿಗೆಗಿಳಿದ ಚಿಲ್ಲರೆ ವ್ಯಾಪಾರಿಗಳು
ಗೌರ್ ಸಿಟಿ ವ್ಯಾಪ್ತಿಯಲ್ಲಿ ಸಂಜೆ 5.30ರ ಹೊತ್ತಿಗೆ ಈ ದುರ್ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು 112 ಅಧಿಕಾರಿಗಳಿಗೆ ಕರೆ ಮಾಡಿ ನೆರವು ಕೋರಿದ್ದಾರೆ. ಕೂಡಲೇ ಪೊಲೀಸ್ ರೆಸ್ಪಾನ್ಸ್​ ವೆಹಿಕಲ್​ ಸ್ಥಳಕ್ಕೆ ಹೋಗಿದ್ದು, ಅದರ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹೆಣ್ಣು ಮಗುವನ್ನು ಗಟಾರದಿಂದ ಮೇಲೆತ್ತಿದ್ದಾರೆ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ರಣ್​ವಿಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ
ಮಗುವನ್ನು ರಕ್ಷಿಸುವ ಕಾರ್ಯಾಚರಣೆಯನ್ನು ರವಿಕುಮಾರ್ ಮತ್ತು ಜುಗೇಂದರ್ ಸಿಂಗ್ ಅವರನ್ನು ಒಳಗೊಂಡ ತಂಡ ನಿರ್ವಹಿಸಿದೆ. ಮಗು ಹೇಗೆ ಗಟಾರಕ್ಕೆ ಬಿದ್ದದ್ದು ಮತ್ತು ಆಕೆಯ ಪಾಲಕರ ಕುರಿತ ಮಾಹಿತಿ ಇನ್ನೂ ಲಭ್ಯವಿಲ್ಲ. ಮಗುವನ್ನು ಭಂಗೇಲ್​ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆಗೆ ಚಿಕಿತ್ಸೆ ಒದಗಿಸಲಾಗಿದೆ. ಸ್ಥಳೀಯ ಸೆಕ್ಟರ್ 49ರ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಿದ್ದರು ಎಂದು ಸಿಂಗ್ ವಿವರಿಸಿದರು. (ಏಜೆನ್ಸೀಸ್)
ಸತ್ತವ ಎದ್ದು ಬಂದ; ಮತ್ತೆ ಸತ್ತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
