ಬೆಂಗಳೂರು:ಭೂಮಿ ಮೇಲೆ ವಾಸಿಸುತ್ತಿರುವ ಜೀವಿಗಳಲ್ಲಿ ಒಂದಾದ ಹಾವು ನೋಡಲು ಎಷ್ಟು ಆಕರ್ಷಕವೋ ಅಷ್ಟೇ ಭಯಾನಕ ಕೂಡ. ಕೆಲವೊಮ್ಮೆ ಹಾವಿನೊಂದಿಗೆ ಮುಖಾಮುಖಿಯಾದಾಗ ವ್ಯಕ್ತಿಯ ಜೀವನವೇ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಇದನ್ನು ತಿಳಿದಿದ್ದರು ಸಹ ಅನೇಕ ಜನರು ಅದರ ಜೊತೆ ಅಪಾಯಕಾರಿ ಸಾಹಸಗಳನ್ನು ಮಾಡಲು ಹೋಗಿ ಪೇಚಿಗೆ ಸಿಲುಕುತ್ತಾರೆ.
ಇದೀಗ ಘಟನೆಯೊಂದರಲ್ಲಿ ಪುಟ್ಟ ಮಗುವೊಂದು ಹಾವನ್ನು ಹಿಡಿದು ಆಟವಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಈ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದು, ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.
View this post on InstagramA post shared by 𝙁𝙞𝙧𝙨𝙩_𝙡𝙤𝙫𝙚_𝙖𝙙𝙙𝙞𝙘𝙩𝙞𝙤𝙣❤️💯 (@f_l_addiction.official)

A post shared by 𝙁𝙞𝙧𝙨𝙩_𝙡𝙤𝙫𝙚_𝙖𝙙𝙙𝙞𝙘𝙩𝙞𝙤𝙣❤️💯 (@f_l_addiction.official)
ಇದನ್ನೂ ಓದಿ:ವಂಶಿಕಾ ಹೆಸರಿನಲ್ಲಿ ವಂಚನೆ; ಜೈಲಿನಲ್ಲಿದ್ದರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ನಿಶಾ ನರಸಪ್ಪ
ವೈರಲ್​ ಆಗಿರುವ ವಿಡಿಯೋದಲ್ಲಿ ಪುಟ್ಟ ಮಗು ಹಾವನ್ನು ಹಿಡಿದು ಮನೆಯೊಳಗೆ ಪ್ರವೇಶಿಸಲು ಮುಂದಾಗುತ್ತದೆ. ಇದನ್ನು ನೋಡಿದ ಇತರರು ಭಯಭೀತರಾಗಿ ಎದ್ದು ಓಡಲು ಶುರು ಮಾಡುತ್ತಾರೆ. ಕೆಲವರು ಮಗುವನ್ನು ಅಲ್ಲೇ ನಿಲ್ಲುವಂತೆ ಸಣ್ಣೆ ಮಾಡುತ್ತಾರೆ. ಇದನ್ನು ಗಮನಿಸಿದ ಹಿರಿಯರೊಬ್ಬರು ಮಗುವನ್ನು ಹಿಂದಕ್ಕೆ ಕರೆತರುತ್ತಾರೆ.
First_love_addiction ಎಂಬ ಹೆಸರಿನ ಖಾತೆಯಿಂದ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು, 17.7 ಮಿಲಿಯನ್​ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಮಗುವಿನ ವರ್ತನೆಗೆ ಕಿಡಿಕಾರಿರುವ ನೆಟ್ಟಿಗರು ಈ ವರ್ಷದ ಉತ್ತಮ ಪೋಷಕರ ಪ್ರಶಸ್ತಿ ಇವರಿಗೆ ನೀಡಬೇಕು ಎಂದು ಹೇಳುವ ಮೂಲಕ ಆಕ್ಷೇಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + one =
Remember me
