ಅಹಮದಾಬಾದ್​​: 9 ತಿಂಗಳ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್​ಇಡಿ ಬಲ್ಬ್​ ನುಂಗಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಇದೀಗ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಮಧ್ಯಪ್ರದೇಶದ ರತ್ಲಾಮ್ ಮೂಲದ 9 ತಿಂಗಳ ಮಗುವೊಂದು ಆಕಸ್ಮಿಕವಾಗಿ ಎಲ್​ಇಡಿ ಬಲ್ಬ್​ ನುಂಗಿದ್ದು, ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್​ನೊಂದಿಗೆ ಆಟವಾಡುತ್ತಿತ್ತು, ಅದರಲ್ಲಿರುವ ಆಂಟೆನಾದಲ್ಲಿ ಎಲ್​ಇಡಿ ಬಲ್ಬ್​ ಇತ್ತು, ಆ ಬಲ್ಬ್​ ಅನ್ನು ಬಾಯಿಗೆ ಹಾಕಿಕೊಂಡಿತ್ತು.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್​ನೊಂದಿಗೆ ಆಟವಾಡುತ್ತಿತ್ತು, ಅದರಲ್ಲಿರುವ ಆಂಟೆನಾದಲ್ಲಿ ಎಲ್​ಇಡಿ ಬಲ್ಬ್​ ಇತ್ತು, ಆ ಬಲ್ಬ್​ ಅನ್ನು ಬಾಯಿಗೆ ಹಾಕಿಕೊಂಡಿತ್ತು. ಬಲ್ಬ್​​ ನುಂಗಿದ ತಕ್ಷಣವೇ ಮಗು ಉಸಿರಾಟದ ತೊಂದರೆ ಅನುಭವಿಸಿದೆ.
ಆಗ ಪೋಷಕರು ಮಗುವಿಗೆ ಏನೋ ಆಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ತಕ್ಷಣ ಮಗುವಿನ ಪೋಷಕರು ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದರು, ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಶ್ವಾಸಕೋಶದಿಂದ ಬಲ್ಬ್​ ಅನ್ನು ಹೊರ ತೆಗೆದಿದ್ದಾರೆ.
ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರು, ಆರಂಭಿಕ ಹಂತದಲ್ಲಿ ಆ ವಸ್ತುವು ಶ್ವಾಸಕೋಶದಲ್ಲಿ ಕಾಣಿಸಿತಾದರೂ ಅನನ್ನು ಸುರಕ್ಷಿತವಾಗಿ ತೆಗೆಯಲು ಸಾಧ್ಯವಾಗಿಲ್ಲ.
ನಾಲ್ಕು ದಿನಗಳ ಬಳಿಕ ಎರಡನೇ ಪ್ರಯತ್ನ ನಡೆಸಲಾಯಿತು, ಅಂತಿಮವಾಗಿ ಬಲ್ಬ್ ಹೊರತೆಗೆಯುವುದರಲ್ಲಿ ವೈದ್ಯರು ಯಶಸ್ವಿಯಾದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 12 =
Remember me
