ನವದೆಹಲಿ:ಹಾವುಗಳು ಶೂ, ಮಂಚದ ಅಡಿಯ ಖಾಲಿ ಜಾಗ, ಖಾಲಿ ಡಬ್ಬಿ ಪಾತ್ರೆ, ವಾಹನಗಳ ಒಳಗೆ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಕಡೆ ಹಾವು  ಟಾಯ್ಲೆಟ್ ಬೇಸಿನ್ ಒಳಗಿನಿಂದ ಬುಸ್​ ಬುಸ್​ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮನೆಯ ಟಾಯ್ಲೆಟ್‌ ಬೇಸಿನ್ ಒಳಭಾಗದಿಂದ ಮನೆ ಮಂದಿಗೆ ಬುಸುಗುಡುವಂತೆ ಸದ್ದು ಕೇಳಿದೆ. ಹೀಗಾಗಿ ಇದೇನಿರಬಹುದು ಎಂದು ಅವರು ಟಾಯ್ಲೆಟ್ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಅದು ಹಾವು.  ನಂತರ ಹಾವು ರಕ್ಷಣೆ ಮಾಡುವವರನ್ನು ಕರೆಸಿದ್ದಾರೆ.ಮನೆಯ ಟಾಯ್ಲೆಟ್ ಒಳಗಿನಿಂದ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಈ ವೀಡಿಯೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
A post shared by Shittu💎𓆗 (@sarpmitra_shitalkasar_official)

ವೀಡಿಯೋದಲ್ಲಿ ಕಾಣಿಸುವಂತೆ ಈ ಹಾವು ನಿಧಾನವಾಗಿ ಟಯ್ಲೆಟ್ ಬೇಸಿನ್‌ನಿಂದ  ಹೊರಗೆ ಬರುವುದನ್ನು  ಕಾಣಬಹುದಾಗಿದೆ. ಅದು ಹೊರಗೆ ಬರುತ್ತಿದ್ದಂತೆ ಮನೆಯವರು ಕೂಡ ಅದರ ಉದ್ದವನ್ನು ನೋಡಿ ಅಚ್ಚರಿಗೊಂಡಿದ್ದಾರೆ.  ಈ ವೀಡಿಯೋದಲ್ಲಿ ಈ ಹಾವು ವಿಷಕಾರಿಯಲ್ಲ,  9 ರಿಂದ 10 ಅಡಿ ಉದ್ದ ಇತ್ತು.  ಈ ವೇಳೆ ಹಾವು ಹಿಡಿಯುವ ಶೀತಲ್ ಅವರು ಹಾವನ್ನು ಧೈರ್ಯವಾಗಿ ಕೈಯಲ್ಲಿ ಹಿಡಿದು ಮನೆಯಿಂದ ಹೊರಗೆ ತಂದು ಚೀಲದಲ್ಲಿ ತುಂಬಿಸಿದ್ದಾರೆ.
ಈ ಹಾವುಗಳು ವಿಷಕಾರಿಯಲ್ಲ ಮತ್ತು ಸಾಮಾನ್ಯವಾಗಿ ಇಲಿಗಳು ಮತ್ತು ಕಪ್ಪೆಗಳನ್ನು ತಿನ್ನುತ್ತವೆ ಎಂದು ಶೀತಲ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
