ನವದೆಹಲಿ:ಭಾರತ ಸೇರಿದಂತೆ ಜಗತ್ತಿನಾದ್ಯಂತ ಎಲೆಕ್ಟ್ರಿಕ್​ ವಾಹನಗಳ ಬೇಡಿಕೆ ಹೆಚ್ಚುವ ಟ್ರೆಂಡ್​ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಅರ್ಥ ವ್ಯವಸ್ಥೆ ಈ ಬದಲಾವಣೆಗೆ ತಕ್ಕಂತೆ ಬೆಳೆಯಲು ಹಲವು ನೀತಿಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಂಡಿಯಾ ಟುಡೇ ಕಾನ್​ಕ್ಲೇವ್ 2021ರಲ್ಲಿ ಮಾತನಾಡಿರುವ ಗಡ್ಕರಿ, ಚೀನಾದಲ್ಲಿ ಕಾರುಗಳನ್ನು ತಯಾರಿಸಿ ಭಾರತದಲ್ಲಿ ಮಾರಬಾರದೆಂದು ಟೆಸ್ಲಾ ಕಂಪೆನಿಗೆ ಹೇಳಿರುವುದಾಗಿ ತಿಳಿಸಿದ್ದಾರೆ. “ನೀವು(ಟೆಸ್ಲಾ) ಭಾರತದಲ್ಲಿ ಎಲೆಕ್ಟ್ರಿಕ್​ ಕಾರುಗಳನ್ನು ಉತ್ಪಾದನೆ ಮಾಡಿ ಮತ್ತು ಭಾರತದಿಂದ ರಫ್ತು ಕೂಡ ಮಾಡಿ. ಇದಕ್ಕೆ ನಿಮಗೆ ಯಾವ ಬೆಂಬಲ ಬೇಕೋ ಅದನ್ನು ನಮ್ಮ ಸರ್ಕಾರ ಕೊಡುತ್ತೆ ಎಂದು ಹೇಳಿದ್ದೇನೆ” ಎಂದು ಹೇಳಿರುವ ತಮ್ಮ ಸಂದರ್ಶನದ ವಿಡಿಯೋ ತುಣುಕನ್ನು ಗಡ್ಕರಿ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ಎಚ್​.ಡಿ.ಕುಮಾರಸ್ವಾಮಿ ಆಪ್ತನ ಮನೆ ಮೇಲೂ ಐಟಿ ದಾಳಿ
ಜೊತೆಗೇ, ಎಲೆಕ್ಟ್ರಿಕ್​ ವಾಹನಗಳ ಹೆಚ್ಚಳದಿಂದ ಲೀಥಿಯಂ ಅವಶ್ಯಕತೆ ಹೆಚ್ಚುತ್ತದೆ. ಚೀನಾ ಅದರ ಮೇಲೆ ನಿಯಂತ್ರಣ ಹೊಂದಿದೆ ಎಂಬ ವದಂತಿಗಳಲ್ಲಿ ಹುರುಳಿಲ್ಲ ಎಂದಿದ್ದಾರೆ. ಭಾರತದಲ್ಲಿ ಲೀಥಿಯಮ್​ ಸಾಕಷ್ಟು ಲಭ್ಯವಿದೆ ಹಾಗೂ ಅದರ ಬೆಲೆ ಕೂಡ ಕಡಿಮೆ ಆಗುತ್ತಿದೆ. ಹಳೇ ವಾಹನಗಳ ಗುಜರಿ ನೀತಿಯಿಂದಾಗಿ ಭಾರತದಲ್ಲಿ ಆಟೋಮೊಬೈಲ್​ ಉದ್ಯಮದ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ಅಲುಮಿನಿಯಂ ಮತ್ತು ಲೀಥಿಯಂಗಳ ಅವಲಭ್ಯತೆ ಹೆಚ್ಚಲಿದೆ ಎಂದಿದ್ದಾರೆ.(ಏಜೆನ್ಸೀಸ್)
VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ

‘ಐಟಿ ದಾಳಿ… ಇವತ್ತು ಇವರ ಮೇಲೆ ನಾಳೆ ಅವರ ಮೇಲೆ’ ಎಂದ ಶ್ರೀರಾಮುಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + nineteen =
Remember me
