ಹೈದರಾಬಾದ್​:ಡ್ರಗ್ಸ್​ ಹೊಂದಿದ್ದ ಆರೋಪದಡಿಯಲ್ಲಿ ಟಾಲಿವುಡ್​ನ ಖ್ಯಾತ ನಟಿ ನೇಹಾ ದೇಶಪಾಂಡೆ ಅವರ ಪತಿ ಮೋಹಿತ್​ ಅಗರ್ವಾಲ್​ ಅಲಿಯಾಸ್​ ಮೈರಾನ್​ ಮೋಹಿತ್​ ಎಂಬುವರನ್ನು ಹೈದರಾಬಾದ್ ನಾರ್ಕೋಟಿಕ್ಸ್ ಎನ್ಫೋರ್ಸ್ಮೆಂಟ್ ವಿಂಗ್ (H-NEW) ಬಂಧಿಸಿದೆ.
ಮೋಹಿತ್​ ಜೊತೆಗೆ ಹೈದರಾಬಾದ್​ನ ಖ್ಯಾತ ಉದ್ಯಮಿ ಮನ್ಯಾಮ್​ ಕಿಶೋರ್​ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿ ಎರಡು ಗ್ರಾಂ ಕೊಕೇನ್​ ಇದ್ದಿದ್ದಕ್ಕೆ ಇಬ್ಬರ ಬಂಧನವಾಗಿದೆ. ಆರೋಪಿ ಮೋಹಿತ್​ ಕೊಲಂಬಿಯಾದ ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್ನ್​ ಅವರ ಕಟ್ಟಾಭಿಮಾನಿಯಂತೆ.
ನಟಿ ನೇಹಾ ದೇಶಪಾಂಡೆಯವರ ಪತಿ ಮೋಹಿತ್ ಕೂಡ ತಮ್ಮ ಮುದ್ದಿನ ನಾಯಿಮರಿಗೆ ‘ಪ್ಯಾಬ್ಲೋ ದಿ ಗ್ಯಾಂಗ್‌ಸ್ಟರ್’ ಎಂದು ಹೆಸರಿಸಿದ್ದಾರೆ. ಭಾನುವಾರ ಮುಂಜಾನೆ ಮೋಹಿತ್ ಮತ್ತು ಕಿಶೋರ್ ರೆಡ್ಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ಬಂಧಿತನಾಗಿದ್ದ ಗೋವಾದ ಡ್ರಗ್ ಕಿಂಗ್‌ಪಿನ್ ಎಡ್ವಿನ್ ನೂನ್ಸ್‌ನ ಜಾಲದ ತನಿಖೆಯನ್ನು ನಡೆಸುವಾಗ ಮೈರಾನ್ ಮತ್ತು ಕಿಶೋರ್ ರೆಡ್ಡಿ ಹೆಸರು ಪ್ರಸ್ತಾಪವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹಿತ್​ ಪತ್ನಿ ನೇಹಾ ದೇಶಪಾಂಡೆ ಸೇರಿದಂತೆ ಚಿತ್ರರಂಗದ ಯಾವುದೇ ವ್ಯಕ್ತಿಗಳು ಆರೋಪಿಗಳ ಡ್ರಗ್ಸ್​ ಗ್ರಾಹಕರಾಗಿದ್ದರಾ? ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಆದರೂ ಆ ಕುರಿತು ಇದುವರೆಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮೋಹಿತ್, ‘ದಿ ಅನ್‌ಸ್ಕ್ರಿಪ್ಟೆಡ್’ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಹೊಂದಿದ್ದು, ಅದರ ಮೂಲಕ 2014 ರಿಂದ ಮುಂಬೈ, ಹೈದರಾಬಾದ್, ಗೋವಾ ಮತ್ತು ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ. ಈವೆಂಟ್‌ಗಳಲ್ಲಿ ಇನಾಮುಗಳನ್ನು ನೀಡುವ ಮೂಲಕ ಪಬ್ ಮಾಲೀಕರು ಮತ್ತು ಅಂತಾರಾಷ್ಟ್ರೀಯ ಡಿಜೆಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಂಡರು ಎಂದು H-NEW ಡಿಸಿಪಿ ಚಕ್ರವರ್ತಿ ಅವರು ಮಾಹಿತಿ ನೀಡಿದ್ದಾರೆ.
ಆರೋಪಿ ಮೋಹಿತ್​ 50 ಕ್ಕೂ ಹೆಚ್ಚು ಡ್ರಗ್ ಪೆಡ್ಲರ್‌ಗಳು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಹೊಂದಿದ್ದು, ಆತ ಕೊಕೇನ್ ಚಟಕ್ಕೆ ಬಿದ್ದಿದ್ದ ಎಂದು ಚಕ್ರವರ್ತಿ ಹೇಳಿದ್ದಾರೆ.(ಏಜೆನ್ಸೀಸ್​)
ನಟಿ ತಮನ್ನಾ ಡೇಟಿಂಗ್​ ಸೀಕ್ರೆಟ್​ ರಿವೀಲ್​! ಬಾಯ್​ಫ್ರೆಂಡ್​ ಜೊತೆ ಮಿಲ್ಕಿ ಬ್ಯೂಟಿ ಲಿಪ್​ಲಾಕ್​, ವಿಡಿಯೋ ವೈರಲ್​

ಜ್ಞಾನಯೋಗಿಯ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ; ಶತಮಾನದ ಸಂತನಿಗೆ ಅಂತಿಮ ನಮನ

ಪ್ಲಾಸ್ಟಿಕ್​ ಬಲೂನ್​ಗಳಲ್ಲಿ ಅಡುಗೆ ಅನಿಲ ಸಂಗ್ರಹ! ಪಾಕ್​ ಜನರಿಗೆ ಇಂಥಾ ದುಸ್ಥಿತಿ ಬರಬಾರದಿತ್ತು ಎಂದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
