ಹೈದ್ರಾಬಾದ್​​:ಚಿತ್ರದ ಶೂಟಿಂಗ್ ವೇಳೆ ಯಂಗ್ ಹೀರೋ ನಿತಿನ್ ಗೆ ಅಪಘಾತ ಸಂಭವಿಸಿ, ನಿತಿನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ವೇಣು ಶ್ರೀರಾಮ್ ನಿರ್ದೇಶನದಲ್ಲಿ ನಿತಿನ್ ಸಿನಿಮಾ ಮಾಡುತ್ತಿದ್ದಾರೆ. ತಮ್ಮುಡು ಎಂಬ ಶೀರ್ಷಿಕೆಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಶೂಟಿಂಗ್ ವೇಳೆ ನಾಯಕ ನಿತಿನ್ ಗಾಯಗೊಂಡಿದ್ದಾರಂತೆ. ನಿತಿನ್ ಗೆ ಗಾಯಗಳಾಗಿದ್ದರಿಂದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ. ಆದರೆ ಅಪಘಾತ ಹೇಗೆ ಸಂಭವಿಸಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ತಮ್ಮುಡು ಚಿತ್ರದ ಚಿತ್ರೀಕರಣ ಮರೆಡುಮಿಲ್ಲಿ ಅರಣ್ಯದಲ್ಲಿ ನಡೆಯುತ್ತಿದೆ. ಅಲ್ಲಿ  ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಈ ದೃಶ್ಯದಲ್ಲಿ ನಿತಿನ್ ಗೆ ಅಪಘಾತವಾಗಿದೆಯಂತೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಿತಿನ್ ಗಾಯಗೊಂಡಿದ್ದರಿಂದ ಶೂಟಿಂಗ್ ನಿಲ್ಲಿಸಲಾಗಿತ್ತು.ಗಾಯ ವಾಸಿಯಾಗಲು ಸುಮಾರು ಮೂರು ವಾರಗಳು ಬೇಕಾಗುವುದರಿಂದ ಅಲ್ಲಿಯವರೆಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ನಿತಿನ್ ಗೆ ಸಲಹೆ ನೀಡಿದ್ದಾರೆಯಂತೆ.
ನಿತಿನ್ ಎಕ್ಸ್‌ಟ್ರಾ-ಆರ್ಡಿನರಿ ಮ್ಯಾನ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ವಕ್ಕಂತಂ ವಂಶಿ ನಿರ್ದೇಶಿಸಿದ್ದಾರೆ.ಎಕ್ಸ್‌ಟ್ರಾ-ಆರ್ಡಿನರಿ ಮ್ಯಾನ್ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರಲಿಲ್ಲ.ಇತ್ತೀಚಿಗೆ ನಿತಿನ್ ಅಭಿನಯದ ಎಲ್ಲಾ ಸಿನಿಮಾಗಳು ನಿರಾಸೆ ಮೂಡಿಸಿವೆ.
ನಿಮ್ಮ ಕಣ್ಣಿನ ದೃಷ್ಟಿ ಮಸುಕಾಗ್ತಿದ್ಯಾ? ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ…

ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ..

ಉದ್ಯಮಿ ಜತೆ ಡೇಟಿಂಗ್, ಶೀಘ್ರದಲ್ಲೇ ಮದ್ವೆ; ಕ್ಲಾರಿಟಿ ಕೊಟ್ಟ “ಕೋಟಿಗೊಬ್ಬ-3” ಚಿತ್ರದ ಹಾಟ್ ಬ್ಯೂಟಿ..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen + twelve =
Remember me
