ವಿಜಯವಾಡ:ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಮುಖಿಯಾಗಿದ್ದು, ರೈತರ ಮುಖದಲ್ಲಿ ಸಂತಸ ಉಂಟುಮಾಡಿದೆ. ಆದರೆ, ಅದೇ ಟೊಮ್ಯಾಟೋ ರೈತನೊಬ್ಬನ ಪ್ರಾಣ ಕಸಿದುಕೊಂಡಿರುವ ಕರುಣಾಜನಕ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.
ತಮ್ಮ ಜಮೀನಿನಲ್ಲಿ ಟೊಮ್ಯಾಟೋ ಬೆಳೆದು ತುಂಬಾ ಲಾಭ ಗಳಿಸಿದನ್ನು ನೋಡಿ, ಹಣ ಸುಲಿಗೆ ಮಾಡುವ ದುರುದ್ದೇಶದಿಂದ ದುಷ್ಕರ್ಮಿಗಳು ರೈತನನ್ನು ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಕೊಲೆಯಾದ ರೈತನ್ನು ನರೇಮ್​ ರಾಜಶೇಖರ್​ ರೆಡ್ಡಿ (62) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಇವರು 70 ಕ್ರೇಟ್ಸ್​ ಟೊಮ್ಯಾಟೋವನ್ನು ಮಾರುಕಟ್ಟೆಯಲ್ಲಿ ಮಾರಿದ್ದರು.
ಇದನ್ನೂ ಓದಿ:ಗರ್ಲ್​ಫ್ರೆಂಡ್​ನಿಂದ ದುಬಾರಿ ಐಫೋನ್ ಸರ್ಪ್ರೈಸ್​​ ಗಿಫ್ಟ್​! ವೈರಲ್​ ಆಯ್ತು ಬಾಯ್​ಫ್ರೆಂಡ್​ ಪ್ರತಿಕ್ರಿಯೆ
ಈ ಘಟನೆ ಮಂಗಳವಾರ ರಾತ್ರಿ ಮದನಪಲ್ಲಿರುವ ಗ್ರಾಮದಲ್ಲಿ ನಡೆದಿದೆ. ಮೃತ ರಾಜಶೇಖರ್​ ಹಾಲು ಹಾಕಲೆಂದು ಮನೆಯಿಂದ ಹೋದವರು ಮರಳಿ ಬರಲೇ ಇಲ್ಲ. ಅನುಮಾನಗೊಂಡ ಪತ್ನಿ, ತನ್ನ ಮಗಳಿಗೆ ಹೇಳಿದಳು. ಇಬ್ಬರು ಸೇರಿ ರಾಜಶೇಖರ್​ಗೆ ಎಷ್ಟೇ ಫೋನ್​ ಮಾಡಿದರೂ ಕರೆ ಮಾತ್ರ ಸ್ವಿಕರಿಸುತ್ತಿರಲಿಲ್ಲ. ಈ ವಿಚಾರ ತಿಳಿದು ಸಂಬಂಧಿಕರೆಲ್ಲ ಸೇರಿ ರಾಜಶೇಖರ್​ ಅವರನ್ನು ಹುಡುಕಾಡಲು ಆರಂಭಿಸಿದರು.
ಕೆಲವು ಸಮಯದ ಬಳಿಕ ರಸ್ತೆಯ ಮಧ್ಯೆದಲ್ಲಿ ರಾಜಶೇಖರ್​ ಅವರ ಬೈಕ್​ ಮತ್ತು ಫೋನ್​ ಪತ್ತೆಯಾಯಿತು. ಸಮೀಪದಲ್ಲಿ ಹುಡುಕಾಡಿದಾಗ ಆತನ ಕೈಕಾಲುಗಳನ್ನು ಮರಕ್ಕೆ ಕಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಟೊಮ್ಯಾಟೋ ಮಾರಿ ಗಳಿಸಿದ್ದ ಹಣವನ್ನು ಸುಲಿಗೆ ಮಾಡಲು ಬಂದ ದುಷ್ಕರ್ಮಿಗಳು ರಾಜಶೇಖರ್​ರನ್ನು ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಇದೀಗ ರಾಜಶೇಖರ್​ ಹತ್ಯೆ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಪತ್ನಿ ಜ್ಯೋತಿ, ಮಕ್ಕಳಾದ ಬಿಂದು ಮತ್ತು ಕೃತಿಯನ್ನು ರಾಜಶೇಖರ್​ ಅಗಲಿದ್ದಾರೆ. ಮಕ್ಕಳಿಬ್ಬರು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ:ಸಸ್ಯಕಾಶಿ ಲಾಲ್​​​​​ಬಾಗ್‌ನಲ್ಲಿ ಆಗಸ್ಟ್‌ 4ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ; ಈ ಬಾರಿ ಥೀಮ್ ಏನು?
ಪ್ರತಿಕೂಲ ವಾತಾವರಣ ಪರಿಣಾಮ ಟೊಮ್ಯಾಟೋ ಬೆಲೆ ಏರಿಕೆಯಾಗಿದೆ. ಶೇ. 300 ರಷ್ಟು ಬೆಲೆ ಏರಿಕೆಯಾಗಿದೆ ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಕೆಜಿಗೆ 24 ರೂಪಾಯಿ ಇದ್ದ ಟೊಮ್ಯಾಟೋ ಇದೀಗ ಕೆಜಿಗೆ 108 ರೂ. ತಲುಪಿದೆ. ದೇಶದಲ್ಲಿ ಮಳೆ ಮುಂದುವರಿದರೆ ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಟೊಮ್ಯಾಟೋ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಹಲವೆಡೆ ಟೊಮ್ಯಾಟೋ ಕಳ್ಳತನ ಪ್ರಕರಣಗಳು ಸಹ ವರದಿಯಾಗುತ್ತಿವೆ.(ಏಜೆನ್ಸೀಸ್​)
ಜವಾನ್​: ಶಾರುಖ್​ ಬೋಳುತಲೆಯಲ್ಲಿರುವ ಸಂಸ್ಕೃತ ಪದದ ಟ್ಯಾಟೂವಿನ ಅರ್ಥ ಹೀಗಿದೆ…

ಫೇಸ್​​ಬುಕ್​ ಸ್ನೇಹಿತನೊಂದಿಗೆ ಪತ್ನಿ ಪರಾರಿ: ಕಿಡ್ನ್ಯಾಪ್​​​ ಎಂದು ಪತಿಯಿಂದ ದೂರು

ಬ್ಲ್ಯೂಟೂತ್ ಸ್ಪೀಕರ್‌ನಲ್ಲಿ ಸಂಗೀತವನ್ನು ಕೇಳುವುದಕ್ಕೆ ಜಗಳ; ಸ್ನೇಹಿತೆಯನ್ನು ಕೊಂದು ಪರಾರಿಯಾದ ಗೆಳೆಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eight =
Remember me
