ಪುಣೆ:ದಿನೇ ದಿನೇ ಏರುತ್ತಿರುವ ಟೊಮ್ಯಾಟೊ ಬೆಲೆ ಜನಸಾಮಾನ್ಯರ ಜೇಬಿಗೆ ಹುಳಿ ಹಿಂಡುತ್ತಿರುವಾಗಲೇ ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿ ನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಕೋಟಿ ರೂ.ಗಳಷ್ಟು ಭರ್ಜರಿ ಇಳುವರಿಯನ್ನು ಮಾರಾಟ ಮಾಡಿ ಕೋಟ್ಯಧಿಪತಿಯಾಗಿದ್ದಾರೆ.
ಪುಣೆ ಜಿಲ್ಲೆಯ ಜುನ್ನಾರ್ ತೆಹಸಿಲ್‌ನ ಪಚ್‌ಘರ್ ಗ್ರಾಮದ ರೈತ ಈಶ್ವರ್ ಗಾಯ್​ಕರ್(36), ಈ ವರ್ಷದ ಮೇ ತಿಂಗಳಲ್ಲಿ ಕಡಿಮೆ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಟೊಮ್ಯಾಟೊ ಎಸೆದಿದ್ದರು. ಆದರೂ ಈ ಹಿನ್ನಡೆಯಿಂದ ವಿಚಲಿತರಾಗದೆ, ಮತ್ತೊಮ್ಮೆ ಟೊಮ್ಯಾಟೊವನ್ನು ಬೆಳೆಯಲು ತಮ್ಮ 12 ಎಕರೆ ಜಮೀನಿನಲ್ಲಿ ಹಗಲೂ ರಾತ್ರಿ ಕೆಲಸ ಮಾಡಿದರು.

ಇದನ್ನೂ ಓದಿ:ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಬಹುದಲ್ವಾ? ಪರೇಡ್​ ಗ್ರೌಂಡ್​ನಲ್ಲಿ ಎಎಸ್​ಪಿ ಸಲಹೆ!
ಇದೀಗ ಟೊಮ್ಯಾಟೊ ಬೆಲೆ ಗಗನಕ್ಕೇರಿರುವಾಗ, ಗಾಯ್ಕರ್ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು, ಜೂನ್ 11ರಿಂದ ಜುಲೈ 18ರ ನಡುವೆ ಬೆಳೆ ಮಾರಾಟ ಮಾಡಿ ಮೂರು ಕೋಟಿ ರೂಪಾಯಿ ಗಳಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಗಾಯ್ಕರ್, ಈ ಅವಧಿಯಲ್ಲಿ ಜುನ್ನಾರ್ ತಾಲೂಕಿನ ನಾರಾಯಣಗಾಂವ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) 18,000 ಕ್ರೇಟ್ ಟೊಮ್ಯಾಟೊ ಗಳನ್ನು (ಪ್ರತಿ ಕ್ರೇಟ್​ ಸುಮಾರು 20 ಕೆಜಿ ಟೊಮ್ಯಾಟೊ ಹೊಂದಿರುತ್ತದೆ) ಮೂರು ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಸರಿಸುಮಾರು 4,000 ಕ್ರೇಟ್‌ಗಳ ಉಳಿದ ಉತ್ಪನ್ನವನ್ನು ಮಾರಾಟ ಮಾಡುವ ಮೂಲಕ ಅವರು ಇನ್ನೂ 50 ಲಕ್ಷ ಗಳಿಸುವ ಗುರಿಯನ್ನು ಹೊಂದಿದ್ದಾರೆ. ಸಾಗಣೆ ಸೇರಿದಂತೆ ಸಾಗುವಳಿ ವೆಚ್ಚ ಇವರಿಗೆ ಸುಮಾರು 40 ಲಕ್ಷ ರೂ. ಬಿದ್ದಿದ್ದು, ಬರೋಬ್ಬರಿ ಮೂರು ಕೋಟಿ ರೂ. ಆದಾಯ ಗಳಿಸಿದ್ದಾರೆ.
ಇದನ್ನೂ ಓದಿ:ಗ್ರಾಹಕರಿಗೆ 1 ಕೆಜಿ ಟೊಮ್ಯಾಟೊ ಫ್ರೀ ಕೊಡುತ್ತಾರೆ ಈ ಟ್ಯಾಟೂ ಶಾಪ್ ಮಾಲೀಕ!; ಉಚಿತದ ಹಿಂದಿರುವ ಕಾರಣವೇನು ಗೊತ್ತಾ?
ಕೃಷಿಕ ಗಾಯ್ಕರ್​, “ನಾನು 18 ಎಕರೆ ಜಮೀನನ್ನು ಹೊಂದಿದ್ದು, 12 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದೇನೆ, ಜೂನ್ 11 ರಿಂದ 18 ಸಾವಿರ ಕ್ರೇಟ್‌ಗಳನ್ನು ಮಾರಾಟ ಮಾಡಿದ್ದು ಇದುವರೆಗೆ 3 ಕೋಟಿ ರೂಪಾಯಿ ಗಳಿಸಿದ್ದೇನೆ” ಎಂದು ಹೇಳಿದರು.

ಜೂನ್ 11 ರಂದು, ಅವರು ಒಂದು ಕ್ರೇಟ್‌ಗೆ 770 ರೂ (ಕೆಜಿಗೆ ರೂ 37 ರಿಂದ 38 ರೂ), ಮತ್ತು ಜುಲೈ 18ರಂದು ಅವರು ಟೊಮ್ಯಾಟೊವನ್ನು ಕ್ರೇಟ್‌ಗೆ ರೂ 2,200 (ಕೆಜಿಗೆ ರೂ 110) ಪ್ರಕಾರ ಮಾರಾಟ ಮಾಡಿದರು.
ಇದನ್ನೂ ಓದಿ:ಟೊಮ್ಯಾಟೊ ಬೆಳೆದು 45 ದಿನಗಳಲ್ಲೇ ಲಕ್ಷಗಟ್ಟಲೆ ಹಣ ಗಳಿಸಿದ ಪದವೀಧರ!
ಇದೀಗ ಉತ್ಪನ್ನದ ಮೇಲೆ ಉತ್ತಮ ಲಾಭಾಂಶವನ್ನು ಗಳಿಸಿ ಸಂತೋಷಗೊಂಡಿರುವ ಗಾಯ್ಕರ್, ಕಡಿಮೆ ಬೆಲೆಯಿಂದಾಗಿ ಎರಡು ತಿಂಗಳ ಹಿಂದೆ ಕಟಾವು ಮಾಡಿದ ಟೊಮ್ಯಾಟೊಗಳನ್ನು ದೊಡ್ಡ ಪ್ರಮಾಣದಲ್ಲಿ ಎಸೆಯಬೇಕಾಯಿತು ಎಂಬುದನ್ನು ನೆನಪಿಸಿಕೊಂಡರು.

“ಟೊಮ್ಯಾಟೊ ಬೆಳೆಗಾರರಿಗೆ ಇದು ಉತ್ತಮ ಸಮಯ. ಆದರೆ ನಾವು ಕೆಟ್ಟ ಸಮಯವನ್ನೂ ನೋಡಿದ್ದೇವೆ. ಮೇ ತಿಂಗಳಲ್ಲಿ, ನಾನು ಒಂದು ಎಕರೆ ಜಮೀನಿನಲ್ಲಿ ಟೊಮ್ಯಾಟೊಗಳನ್ನು ಬೆಳೆದಿದ್ದೆ. ಆದರೆ ಬೆಲೆಗಳು ತುಂಬಾ ಹೆಚ್ಚಾದ ಕಾರಣ ಹೆಚ್ಚಿನ ಪ್ರಮಾಣದ ಉತ್ಪನ್ನಗಳನ್ನು ಎಸೆಯಬೇಕಾಯಿತು. ಪ್ರತಿ ಕ್ರೇಟ್ ದರ ಕೇವಲ 50 ರೂ ಇತ್ತು. ಅಂದರೆ ಕೆಜಿಗೆ ಕೇವಲ 2.50 ರೂ. ಇದ್ದ ಕಾರಣ ನಾನು ಉತ್ಪನ್ನಗಳನ್ನು ಎಸೆದಿದ್ದೆ” ಎಂದು ಅವರು ತಮ್ಮ ಹಿಂದಿನ ಕಠಿಣ ಸಮಯಗಳನ್ನು ನೆನೆಸಿಕೊಂಡರು.(ಏಜೆನ್ಸೀಸ್)
ಈ ಓಟಿಟಿ ಪ್ಲಾಟ್​ಫಾರ್ಮ್​ ಬಳಕೆದಾರರಿಗೆ ಶಾಕ್! ಭಾರತದಲ್ಲಿ ಇನ್ನು ಪಾಸ್​ವರ್ಡ್ ಶೇರಿಂಗ್ ಮಾಡುವುದೇ ಅಸಾಧ್ಯ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
